logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬಹಿರ್ವೇಶನ
(ಗ) ಯಾವುದೇ ಸಂಖ್ಯಾಶ್ರೇಣಿ ಯಲ್ಲಿಯ ಜ್ಞಾತಪದಗಳಿಂದ ಆ ಶ್ರೇಣಿಯ ಹಿಂದಿನ/ಮುಂದಿನ ಇತರ ಪದಗಳನ್ನು ಗಣಿಸುವುದು. ಜ್ಞಾತದಿಂದ ಅಜ್ಞಾತದ ಗಣನೆ. ಒಂದು ನಿರ್ದಿಷ್ಟ ಅಂಶದ ಮೌಲ್ಯವನ್ನು ಆ ಅಂಶದ ಒಂದೇ ಬದಿಯ ಫಲನದ ಮೌಲ್ಯದಿಂದ ಅಂದಾಜು ಮಾಡುವುದು
extrapolation

ಬಹಿಶ್ಶಿಲೆ
(ಭೂವಿ) ಹೆಚ್ಚು ಹಳೆಯ (ಪುರಾತನ) ಶಿಲಾಸ್ತರ ಗಳಿಂದ ಸಂಪೂರ್ಣವಾಗಿ ಆವೃತವಾದ ಇತ್ತೀಚೆಗಿನ (ಕಿರಿಪ್ರಾಯದ) ಶಿಲಾವಶೇಷ. ಇದು ಸವೆತ, ಸ್ತರಭಂಗ ಅಥವಾ ಪದರೀಕರಣದಿಂದ ಇಲ್ಲವೇ ಈ ಎಲ್ಲ ಕ್ರಿಯೆಗಳೂ ಕೂಡಿ ಸಂಭವಿಸಬಹುದು. ಪುರಾಂತಃಶಾಹಿ
outlier

ಬಹಿಷ್ಕರಣ ತತ್ತ್ವ
(ಭೌ) ೧. ಯಾವುದೇ ಪರಮಾಣುವಿನಲ್ಲಿಯ ೨ ಎಲೆಕ್ಟ್ರಾನ್‌ಗಳು ಒಂದೇ ಕಕ್ಷೆಯಲ್ಲಿರ ಲಾರವು ಎಂಬ ತತ್ತ್ವ. ೨. ಎರಡು ಫರ್ಮಿಯಾನ್ ಕಣಗಳು ಒಂದೇ ಕಾಲದಲ್ಲಿ ಒಂದೇ ರೀತಿಯ ಕ್ವಾಂಟಮ್ ಸ್ಥಿತಿಯಲ್ಲಿ ಇರಲಾರವೆಂಬ ಮೂಲಸೂತ್ರ. ನೋಡಿ: ಪೌಲಿ ಬಹಿಷ್ಕರಣ ತತ್ತ್ವ
exclusion principle

ಬಹಿಷ್ಕೇಂದ್ರ
(ಗ) ತ್ರಿಭುಜದಲ್ಲಿ ಒಂದು ಭುಜವನ್ನು ಒಳ ಸ್ಪರ್ಶಿಸುವಂತೆಯೂ ಉಳಿದೆರಡನ್ನು ಹೊರಸ್ಪರ್ಶಿಸುವಂತೆಯೂ ರಚಿಸಿದ ವೃತ್ತದ ಕೇಂದ್ರ. ಬಹಿರ್‌ವೃತ್ತ ಕೇಂದ್ರ. ಇಂಥ
excentre

ಬಹಿಃಸಂಕರ
(ಜೀ) ಭಿನ್ನ ಜೀನ್ ನಮೂನೆಯೊಂದಿಗೆ ತಳಿಯೊಂದರ ಸಂಕರ
outcross

ಬಹಿಃಸ್ಪರ್ಶಕ ವೃತ್ತ
(ಗ) ನೋಡಿ: ಬಹಿರ್ವೃತ್ತ
escribed cricle

ಬಹಿಸ್ಸಂತಾನ
(ಜೀ) ಪ್ರಭೇದವೊಂದರಲ್ಲಿ, ಸಂಬಂಧ ಇರದ ಅಥವಾ ದೂರ ಸಂಬಂಧದ ವ್ಯಕ್ತಿಗಳ ನಡುವೆ ಸಂಗಮ. ಇದರಿಂದ ಭಿನ್ನಯುಗ್ಮಜ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತದೆ. ಬಹಿಸ್ಸಂತಾನ ವ್ಯಕ್ತಿಗಳಲ್ಲಿ ಹೆಚ್ಚು ವೈವಿಧ್ಯ ಕಂಡುಬರುತ್ತದೆ ಮತ್ತು ಅವರಲ್ಲಿ ಪರಿಸರ ವ್ಯತ್ಯಯಗಳಿಗೆ ಹೊಂದಿಕೊಳ್ಳುವ ಸಂಭಾವ್ಯತೆ ಹೆಚ್ಚಿರುತ್ತದೆ. ನೋಡಿ: ಒಳತಳೀಕರಣ
outbreeding

ಬಹಿಸ್ಸರಣ
(ರ) ಅತಿಶಯ ಒತ್ತಡದಲ್ಲಿರುವ ಭಾರಿ ಗಾತ್ರದ ದ್ರವವಾಗಲೀ ಅನಿಲವಾಗಲೀ ಸಾಪೇಕ್ಷವಾಗಿ ಕಿರಿದಾದ ರಂಧ್ರಗಳ ಅಥವಾ ಕಂಡಿಗಳ ಮೂಲಕ ಹೊರ ಹರಿಯುವುದು. ನೋಡಿ: ಅಂತಸ್ಸರಣ
effusion

ಬಹು ಕ್ಷಯದಂತಿ
(ಪ್ರಾ) ಅನೇಕ ಸಣ್ಣ ಶಂಕ್ವಾಕೃತಿಯ ಹಾಗೂ ಚಾಚುಮೊನೆ ಹಲ್ಲುಗಳಿರುವ
multituberculate

ಬಹು ಗಂಡು ಸಂಗ
(ಜೀ) ಒಂದು ಹೆಣ್ಣು ಅನೇಕ ಗಂಡುಗಳೊಂದಿಗೆ ಕೂಡುವ ಕ್ರಮ/ಪದ್ಧತಿ
polyandry


logo