logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಫೆರ್ರಿಟಿನ್
(ಜೀ) ಗುಲ್ಮ ಮತ್ತು ಯಕೃತ್ತುಗಳಲ್ಲಿರುವ ಕಬ್ಬಿಣವನ್ನೊಳಗೊಂಡ ಪ್ರೋಟೀನ್. ನಮ್ಮ ದೇಹದ ಕಬ್ಬಿಣದ ಕಾಪು ಸಂಗ್ರಹ. ಇದರ ಕೇಂದ್ರದಲ್ಲಿರುವ ಕಬ್ಬಿಣದ ದಿಂಡು ಎಲೆಕ್ಟ್ರಾನ್ ಸೂಕ್ಷ್ಮದರ್ಶಕಕ್ಕೆ ಗೋಚರಲಭ್ಯವಾಗಿರುವುದರಿಂದ ಫೆರ್ರಿಟಿನ್‌ಅನ್ನು ಪ್ರೋಟೀನ್‌ಗಳ ಸ್ಥಳೀಕರಣದಲ್ಲಿ ಒಂದು ಕುಣಿಕೆಬಂಧವಾಗಿ ಬಳಸಲು ಸಾಧ್ಯವಿದೆ
ferritin

ಫೆರ್ರೊಕಾಂತೀಯ
(ಭೌ) ಸಾಪೇಕ್ಷ ಕಾಂತೀಯ ವ್ಯಾಪ್ಯತೆ ೧ಕ್ಕಿಂತ ಬಹಳ ಹೆಚ್ಚಾಗಿರುವುದರಿಂದ ಬಲು ಶೀಘ್ರ ಕಾಂತೀಕರಣಗೊಳ್ಳಬಲ್ಲಂಥ (ವಸ್ತುಗಳು). ಉದಾ: ಕಬ್ಬಿಣ
ferromagnetic

ಫೆರ್ರೊಟೈಪ್
(ತಂ) ಛಾಯಾಚಿತ್ರೀಕರಣದಲ್ಲಿ ಕಲ್ಲೋಡಿಯನ್ನನ್ನು ಲೇಪನವಾಗಿ ಬಳಸಿ ತೆಳುವಾದ ಕಬ್ಬಿಣದ ಫಲಕದ ಮೇಲೆ ಮೂಡಿಸಿದ ಧನ ಚಿತ್ರ
ferrotype

ಫೆಲ್ಡ್‌ಸ್ಪಾರ್
(ಭೂವಿ) ಶಿಲಾರೂಪಕ ಖನಿಜಗಳಲ್ಲಿ ಒಂದು. ಅಗ್ನಿಶಿಲೆಗಳಲ್ಲಿ ಲಭ್ಯ. ಮುಖ್ಯತಃ ಸೋಡಿಯಮ್, ಕ್ಯಾಲ್ಸಿಯಮ್ ಮತ್ತು ಪೊಟ್ಯಾಸಿಯಮ್ ಸಿಲಿಕೇಟ್
feldspar

ಫೆಲ್ಸೈಟ್
(ಭೂವಿ) ಆಮ್ಲ ಸಂರಚನೆಯ ಸೂಕ್ಷ್ಮಕಣಗಳ ಅಗ್ನಿಶಿಲೆ. ಶಿಲಾರಸಗಳಲ್ಲಿ/ಲಘು ಅಂತಸ್ಸರಣಗಳಲ್ಲಿ ಲಭ್ಯ
felsite

ಫೇಜ್
(ಪ್ರಾ) ಬ್ಯಾಕ್ಟೀರಿಯದ ಒಳಗೆ ಪರೋಪಜೀವಿ ಯಾಗಿದ್ದುಕೊಂಡು ಅದಕ್ಕೆ ಸೋಂಕು ತರುವ ವೈರಸ್. ಬೇಗ ಸಂಖ್ಯೆ ಹೆಚ್ಚಿಸಿಕೊಂಡು ಆತಿಥೇಯದ ಕೋಶಗಳನ್ನು ನಾಶಗೊಳಿಸುತ್ತದೆ. ಅದರ ನ್ಯೂಕ್ಲಿಯಿಕ್ ಆಮ್ಲ ಆತಿಥೇಯದ ನ್ಯೂಕ್ಲಿಯಿಕ್ ಆಮ್ಲದೊಂದಿಗೆ ಬೆರೆತು ಅದರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ನೋಡಿ: ಬ್ಯಾಕ್ಟೀರಿಯ ಭಕ್ಷಿ
phage

ಫೈಕೊಕ್ರೋಮ್
(ಜೀ) ನೀಲ-ಹಸಿರು ಶೈವಲದಲ್ಲಿ ಇರುವ ವರ್ಣದ್ರವ್ಯ. ಹರಿತ್ತು, ಫೈಕೊಸಿಯಾನಿನ್ ಹಾಗೂ ಫೈಕೊಎರಿಥ್ರಿನ್‌ಗಳಿಂದ ರೂಪಿತ
phycochrome

ಫೈಟಿಕ್ ಆಮ್ಲ
(ರ) C6H6(PO4H2)6 ರಾಸಾಯನಿಕ ಸೂತ್ರದ ಈ ಆಮ್ಲ ಮುಖ್ಯವಾಗಿ ಧಾನ್ಯಗಳ ಹೊರಭಾಗದಲ್ಲಿ ಇರುವುದು. ಇದು Ca, Fe ಮತ್ತು Mgಗಳೊಂದಿಗೆ ಅವಿಲೇಯ ಲವಣಗಳನ್ನು ಉಂಟುಮಾಡುತ್ತದೆ
phytic acid

ಫೈಟೊಕ್ರೋಮ್
(ಸ) ಅನೇಕ ಸಸ್ಯಾಂಗಗಳಲ್ಲಿ ಸಣ್ಣ ಪ್ರಮಾಣಗಳಲ್ಲಿರುವ ಪ್ರೋಟೀನ್ ಆಧಾರಿತ ಸಸ್ಯ ವರ್ಣದ್ರವ್ಯ. ಇದು ಬೀಜ, ಮೊಳಕೆ, ಹೂ ಬಿಡುವುದು ಮೊದಲಾದ ಅನೇಕ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ
phytochrome

ಫೈಟೊಸಿಸ್
(ವೈ) ಶಿಲೀಂಧ್ರದಿಂದಾದ ಚರ್ಮದ ಉರಿಯೂತ
phytosis


logo