logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಫೀನೈಲ್
(ರ) - C6H5 ಸೂತ್ರವಿರುವ, ಬೆನ್ಝೀನ್‌ನಲ್ಲಿ ಒಂದು ಹೈಡ್ರೊಜನ್ ಪರಮಾಣು ತೆಗೆದಾಗ ದೊರಕುವ ಏಕವೇಲೆನ್ಸೀಯ ರ‍್ಯಾಡಿಕಲ್
phenyl

ಫೀಮರ್
(ವೈ) ಕಶೇರುಕಗಳ ತೊಡೆ ಮೂಳೆ, ಕೀಟಗಳಲ್ಲಿ ಕಾಲಿನ ಮೂರನೇ ಕೀಲು. ಊರ್ವಸ್ಥಿ
femur

ಫೀಲೈನ್
(ಪ್ರಾ) ಫೀಲಿಸ್ ಜಾತಿಗೆ ಸೇರಿದ (ಪ್ರಾಣಿ) ಹುಲಿ, ಸಿಂಹ, ಕಾಡು ಬೆಕ್ಕು, ಸಾಕು ಬೆಕ್ಕು ಇತ್ಯಾದಿ. ಇವುಗಳಿಗೆ ಮುಂಗಾಲಿನಲ್ಲಿ ಐದು, ಹಿಂಗಾಲಿನಲ್ಲಿ ನಾಲ್ಕು ಬೆರಳುಗಳುಂಟು. ಬೆರಳುಗಳ ತುದಿಯಲ್ಲಿ ಹರಿತ ಪಂಜಗಳಿವೆ
feline

ಫುಪ್ಪುಸ ಮೀನು
(ಪ್ರಾ) ಡಿಪ್‌ನಾಯ್ ಕುಟುಂಬಕ್ಕೆ ಸೇರಿದ ಮೀನುಗಳ ಸಾಮಾನ್ಯ ಹೆಸರು. ಕಿವಿರುಗಳೊಂದಿಗೆ ಶ್ವಾಸಕೋಶ ವನ್ನೂ ಹೊಂದಿರುವುದು ಇವುಗಳ ವೈಶಿಷ್ಟ್ಯ
lung fish

ಫುಪ್ಪುಸದ ಕುಸಿತ
(ಜೀ) ಶ್ವಾಸಕೋಶದ ಒಳಗೆ ವಾಯು ಇಲ್ಲದಾಗ ಸಂಭವಿಸುವ ಪತನ
collapse of lung

ಫುಲ್ಲರೀನ್
(ರ) ಕಾರ್ಬನ್ನಿನ ಬಹುರೂಪ. ಗ್ರಾಫೈಟ್‌ನ ಮಾದರಿಯಲ್ಲಿಯೇ sp2 ಸಂಕರವನ್ನು ಪಡೆದಿದೆ. ಗ್ರಾಫೈಟಿನಲ್ಲಿ ಕಾರ್ಬನ್ ಜಾಲ ಪದರುಗಳಾಗಿ ಜೋಡಣೆಯಾಗಿರುವುದು. ಆದರೆ ಫುಲ್ಲರೀನ್ ಗೋಲಾಕೃತಿಯದು. ಕಾರ್ಬನ್‌ಗಳ ಸಂಖ್ಯೆ ೬೦, ೮೭ ಇತ್ಯಾದಿ
fullerine

ಫೆನೆರೊಕ್ರಿಸ್ಟಲೈನ್
(ಭೂವಿ) ಎಲ್ಲ ಅಗತ್ಯ ಖನಿಜ ಗಳ ಸ್ಫಟಿಕಗಳು ಬರಿಗಣ್ಣಿಗೇ ಕಾಣುವಂತೆ ರಚನೆಗೊಂಡ ಅಗ್ನಿಶಿಲೆ
phanerocrystalline

ಫೆರೊಮೋನ್‌ಗಳು
(ಜೀ) ಜೀವಿ ಸ್ರವಿಸುವ ರಾಸಾಯನಿಕ ಪದಾರ್ಥ. ಇದು ಅದೇ ಪ್ರಭೇದದ ಇತರ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ. ಉದಾ: ಜೇನು ನೊಣಗಳಲ್ಲಿ ರಾಣಿಜೇನು ಸ್ರವಿಸುವ ಪದಾರ್ಥ
pheromones

ಫೆರ್ರಸ್
(ರ) ಎರಡು ವೇಲೆನ್ಸಿಯ ಕಬ್ಬಿಣವನ್ನು ಒಳಗೊಂಡಿರುವ ಸಂಯುಕ್ತ ವಸ್ತು. ಉದಾ : FeCl2
ferrous

ಫೆರ್ರಿಕ್
(ರ) ಮೂರು ವೇಲೆನ್ಸಿಯ ಕಬ್ಬಿಣವನ್ನೊಳ ಗೊಂಡಿರುವ ಸಂಯುಕ್ತ. ಫೆರ್ರಿಕ್ ಲವಣಗಳು ಸಾಮಾನ್ಯವಾಗಿ ಹಳದಿ ಅಥವಾ ಕಂದು ಬಣ್ಣದವು. ಉದಾ: ಫೆರ್ರಿಕ್ ಬ್ರೊಮೈಡ್ FeBr3, ಫೆರ್ರಿಕ್ ಕ್ಲೊರೈಡ್ FeCI3
ferric


logo