logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಫ್ಲೂರೈಡ್
(ರ) ಫ್ಲೂರೀನ್ ಧಾತು ಮತ್ತೊಂದು ಧಾತು ವಿನೊಂದಿಗೆ ಸೇರಿ ರೂಪಗೊಂಡ ದ್ವಿಸಂಯುಕ್ತ. ಹೈಡ್ರೊಫ್ಲೂರಿಕ್ ಆಮ್ಲದ ಲವಣ ಅಥವಾ ಎಸ್ತರ್. ದಂತಕ್ಷಯ ತಪ್ಪಿಸಲು ನಗರಗಳಲ್ಲಿ ಕುಡಿಯುವ ನೀರಿಗೆ ಫ್ಲೂರೈಡ್ ಲವಣ ಅಥವಾ ಎಸ್ತರ್ ಬೆರೆಸುವುದು ವಾಡಿಕೆ
fluoride

ಫ್ಲೆಮಿಂಗೋ
(ಪ್ರಾ) ಸಿಕೋನೈಯಿಫಾರ್ಮೀಸ್ ಗಣದ, ಫೀನಿಕಾಪ್ಟಿರಿಡೀ ಕುಟುಂಬಕ್ಕೆ ಸೇರಿದ ಸುಂದರ ಪಕ್ಷಿ. ನಾಲ್ಕು ಮುಖ್ಯ ಪ್ರಭೇದ ಗಳಿವೆ. ಉದ್ದ ಕಾಲು, ನೀಳ ಕತ್ತು, ಬಲವಾದ ಕೊಕ್ಕು, ಗುಲಾಬಿ, ಕೆಂಪು ಮತ್ತು ಕಪ್ಪು ಗರಿಗಳುಳ್ಳ ಇದು ಉಷ್ಣವಲಯ ವಾಸಿ. ಕರಾವಳಿ ಪ್ರದೇಶ ಇದರ ನೆಚ್ಚಿನ ತಾಣ
flamingo

ಫ್ಲೈಕ್ಟನ್
(ವೈ) ಕಂಜಂಕ್ಟೈವ (ಕಣ್ಣು ರೆಪ್ಪೆಯ ಒಳಮೈಯನ್ನೂ ಕಣ್ಣು ಗುಡ್ಡೆಯನ್ನೂ ಆವರಿಸಿರುವ ತೇವ ಚರ್ಮ)ದ ಮೇಲೆ ಕಾಣಿಸಿಕೊಂಡು ಕಣ್ಣಿನ ಸ್ಕ್ಲೀರ (ಬಿಳಿ ಪೊರೆ) ಮತ್ತು ಕಾರ್ನಿಯವನ್ನು ಮುಚ್ಚುವ ಊದಾ ಅಥವಾ ಹಳದಿ ವರ್ಣದ ಸಣ್ಣ ದುಂಡುಗಿನ ಗೆಡ್ಡೆ
phlycten

ಫ್ಲೋಗೋಪೈಟ್
(ಭೂವಿ) ಏಕನತ ವ್ಯವಸ್ಥೆಯಲ್ಲಿ
phlogopite


logo