logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಫ್ಲಾಕ್ಯುಲೇಶನ್
(ರ) ಸೂಕ್ಷ್ಮವಾಗಿ ವಿಭಜನೆ ಗೊಂಡಿರುವ ಅವಕ್ಷೇಪವನ್ನು ದೊಡ್ಡ ಕಣಗಳಾಗಿ ಗರಣೆ ಕಟ್ಟಿಸುವುದು. ಉದಾ: ಯಾವುದೇ ದ್ರವದಲ್ಲಿ ಪುಡಿಯನ್ನು ಇಲ್ಲವೇ ಕಲಿಲವನ್ನು ಗರಣೆ ಕಟ್ಟಿಸುವುದು
flocculation

ಫ್ಲಾಜಿಸ್ಟಾನ್
(ರ) ದಹ್ಯ ಪದಾರ್ಥಗಳಲ್ಲಿ ಇರುವುದೆಂದು ಹಿಂದೆ ಊಹಿಸಿದ್ದ ಜ್ವಲನ ಧಾತು
phlogiston

ಫ್ಲಾಜಿಸ್ಟಾನ್ ನಿರ್ಮೂಲಿತ ವಾಯು
(ರ) ಜೋಸೆಫ್ ಪ್ರೀಸ್ಟ್‌ಲಿ (೧೭೩೩-೧೮೦೪) ಆಕ್ಸಿಜನ್‌ಗೆ ಇಟ್ಟ ಹೆಸರು. ಇತಿಹಾಸದ ದೃಷ್ಟಿಯಿಂದಷ್ಟೆ ಗಮನಾರ್ಹ
dephlogisticated air

ಫ್ಲಾಪಿ ಡಿಸ್ಕ್
(ಕಂ) ಹಗುರವಾದ, ಮೆತುವಾದ, ಸುಮಾರು ೧೯ ಸೆಂಮೀ ವ್ಯಾಸದ, ಕಾಂತೀಯ ಆಕ್ಸೈಡ್ ಲೇಪವುಳ್ಳ ಪ್ಲಾಸ್ಟಿಕ್ ಫಲಕ. ವೇಗವಾಗಿ ತಿರುಗಿಸಿದಾಗ ಗಡಸಾಗಿದ್ದಂತೆ ವರ್ತಿಸುತ್ತದೆ. ಕಂಪ್ಯೂಟರ್‌ನಲ್ಲಿ ಮಾಹಿತಿ ನಮೂದನೆಗೆ ಬಳಕೆ
floppy disc

ಫ್ಲಿಗ್ಮೋನ್
(ವೈ) ಕೀವು ತುಂಬಿದ ಉರಿಯೂತದಿಂದ ಕೂಡಿದ ಗೆಡ್ಡೆ, ಕುರು
phlegmon

ಫ್ಲಿಬೈಟಿಸ್
(ವೈ) ಸಿರೆಯ ಭಿತ್ತಿಗಳ ಉರಿಯೂತ
phlebitis

ಫ್ಲಿಬೋಟಮಿ
(ವೈ) ವೈದ್ಯ ಚಿಕಿತ್ಸೆಗಾಗಿ ಸಿರೆಯನ್ನು ಕೊಯ್ದು ರಕ್ತ ಹೊರಹರಿಸುವುದು
phlebotomy

ಫ್ಲೂಕ್
(ಪ್ರಾ) ೧. ಟ್ರಿಮಟೋಡ ಗುಂಪಿಗೆ ಸೇರಿದ ಹುಳುಗಳ ಹೆಸರು. ೨. ಸಿಟೇಷಿಯ (ತಿಮಿ) ಗಣಕ್ಕೆ ಸೇರಿದ ಪ್ರಾಣಿಯ (ತಿಮಿಂಗಿಲದ) ಬಾಲ
fluke

ಫ್ಲೂರೀನ್
(ರ) ಆವರ್ತಕೋಷ್ಟಕದಲ್ಲಿ ೭ನೆಯ (ಹ್ಯಾಲೊಜನ್) ಗುಂಪಿಗೆ ಸೇರಿದ ವಿಷಯುಕ್ತ ತೆಳುಹಳದಿ ಅನಿಲಧಾತು. ಪ್ರತೀಕ F. ಪಸಂ ೯; ಸಾಪರಾ ೧೮.೯೯;
fluorine

ಫ್ಲೂರೈಟ್
(ರ) ಕ್ಯಾಲ್ಸಿಯಮ್ ಫ್ಲೂರೈಡ್. CaF2. ಘನಾತ್ಮಕ ವ್ಯವಸ್ಥೆಯಲ್ಲಿ ಸ್ಫಟಿಕೀಕರಣ. ಕೆಲವೊಮ್ಮೆ ನಿರ್ವರ್ಣ ಇಲ್ಲವೇ
fluorite


logo