logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಫೋನೇಶನ್
(ಪ್ರಾ) ಶ್ವಾಸನಾಳ ದ್ವಾರದಲ್ಲಿ ಬರಿಯ ಧ್ವನಿ ಹೊರಡಿಸುವಿಕೆ
phonation

ಫೋನೊಗ್ರಾಫ್
(ತಂ) ನೋಡಿ: ಗ್ರಾಮೊಫೋನ್
phonograph

ಫೋನೋಗ್ರಫಿ
(ತಂ) ಧ್ವನಿಯ ಮೇಲೆ ಆಧಾರಿತವಾದ ಶೀಘ್ರಲಿಪಿ ಪದ್ಧತಿ
phonography

ಫೋಲಿಯಮ್
(ಭೂವಿ) ಪದರಶಿಲೆಯಲ್ಲೊಂದು ತೆಳುಪದರ
folium

ಫ್ಯಾಕ್ಯುಲಗಳು
(ಖ) ಸೌರ ದ್ಯುತಿಗೋಳದಲ್ಲಿಯ ವಿಶಾಲೋಜ್ಜ್ವಲ ಪ್ರದೇಶಗಳು. ಇವುಗಳಲ್ಲಿ ಉಷ್ಣತೆ ಸೂರ್ಯನ ಮೇಲ್ಮೈ ಸರಾಸರಿ ಉಷ್ಣತೆಗಿಂತ ಅಧಿಕ. ಸೌರ ಕಲೆಗಳ ಸನಿಹದಲ್ಲಿವೆ
faculae

ಫ್ಯಾಗೋಸೈಟ್
(ಪ್ರಾ) ರಕ್ತಗತವಾದ ಬ್ಯಾಕ್ಟೀರಿಯಾ ಗಳನ್ನು ನುಂಗಿ ಜೀರ್ಣ ಮಾಡಿ ರೋಗ ಸೋಕದಂತೆ ಮನುಷ್ಯನ ದೇಹಸ್ಥಿತಿಯನ್ನು ಕಾಪಾಡಬಲ್ಲ ಬಿಳಿಯ ರಕ್ತಕಣದಂಥ ಯಾವುದೇ ಜೀವಕೋಶ. ಭಕ್ಷಕ ಕೋಶ
phagocyte

ಫ್ಯಾಜಿಡೀನ
(ವೈ) ಶೀಘ್ರವಾಗಿ ಹರಡುವ ಹಾಗೂ ಹಾನಿಕರ ವ್ರಣ
phagedaena

ಫ್ಯಾದಮ್
(ಸಾ) ಆಳದ ಏಕಮಾನ. ವಿಶೇಷವಾಗಿ ಕಡಲು ಅಥವಾ ಇತರ ಯಾವುದೇ ಜಲರಾಶಿಯ ಆಳ ಅಳೆಯಲು ಬಳಕೆ. ೧ ಫ್ಯಾದಮ್=೧.೮೨೯ ಮೀ
fathom

ಫ್ಯಾರಡೇ
(ಭೌ) ವಿದ್ಯುದ್ವಿಭಜನೆಯ ಮೂಲಕ ೧ ಗ್ರಾಮ್ ಸಮಾನ ವಸ್ತುವನ್ನು ವಿಮುಕ್ತಗೊಳಿಸಲು ಅವಶ್ಯವಾದ ವಿದ್ಯುದಾವೇಶ. ಪ್ರಾಯೋಗಿಕವಾಗಿ ೯೬,೪೮೭.೦±೧.೬ ಕೂಲಂಬ್ ಗಳಿಗೆ ಸಮ. ಫ್ಯಾರಡೇ ಸ್ಥಿರಾಂಕ
faraday

ಫ್ಯಾರಡ್
(ಭೌ) ಸ್ಥಾಯೀ ವಿದ್ಯುತ್ ಧಾರಕತೆಯ ಏಕಮಾನ. ಪ್ರತೀಕ F. ೧ ಕೂಲಂಬ್ ವಿದ್ಯುಚ್ಛಕ್ತಿ ತನ್ನ ವಿಭವವನ್ನು
farad


logo