logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ನಾರ್ಡಿಕ್ ಜನಾಂಗ
(ಸಾ) ಸ್ಕಾಂಡಿನೇವಿಯದಲ್ಲೂ (ನಾರ್ವೆ) ಉತ್ತರ ಬ್ರಿಟನ್‌ನಲ್ಲೂ ವಾಸವಾಗಿರುವ ನೀಳಕಾಯ, ನಿಡುದಲೆ, ನಸುಹಳದಿ ಮೈಬಣ್ಣ ಹಾಗೂ ಹೊಂಗೂದಲುಳ್ಳ ಜನಸಮೂಹ
nordic race

ನಾರ್ಮಲೀಕರಣ
(ರ) ಲೋಹವನ್ನು ವಿಶೇಷವಾಗಿ ಉಕ್ಕನ್ನು, ಅದರ ಕ್ರಾಂತಿ ಉಷ್ಣತೆಗೂ ಮೀರಿದ ಸ್ಥಿತಿಯವರೆಗೂ ಕಾಸಿ ಆನಂತರ ಗಾಳಿಯಲ್ಲಿ ತಣ್ಣಗಾಗಿಸುವ ಕ್ರಿಯೆ. ಉಕ್ಕಿನ ಸ್ಫಟಿಕ ಸಂರಚನೆಯಲ್ಲಿರುವ ಯಾವುದೇ ನ್ಯೂನತೆಯನ್ನು ಹೋಗಲಾಡಿಸಿ ಆಂತರಿಕ ಪೀಡನ ಇಲ್ಲದಂತೆ ಮಾಡುವುದು ಇದರ ಉದ್ದೇಶ
normalizing

ನಾರ್ಮಲ್
(ರ) ಕಾರ್ಬನ್ ಪರಮಾಣುಗಳ ಕವಲು ಗಳಿಲ್ಲದ ಸರಣಿ. ಉದಾ: ನಾರ್ಮಲ್ ಪ್ರೊಪೈಲ್ ಆಲ್ಕಹಾಲ್ ಸರಣಿ CH3-CH3.CH2.OH. ಸಮಾಂಗಿ ಐಸೊಪ್ರೊಪೈಲ್ ಆಲ್ಕಹಾಲ್ ಕವಲು ಸರಣಿ (CH2)2. CH.OH
normal

ನಾರ್ಮಲ್ ದ್ರಾವಣ
(ರ) ಪ್ರತಿ ಲೀಟರ್‌ನಲ್ಲೂ ಒಂದು ಗ್ರಾಮ್-ಸಮಾನ ತೂಕ ದ್ರಾವ್ಯವಿರುವ ದ್ರಾವಣ
normal solution

ನಾರ್ಮಾಲಿಟಿ
(ರ) ದ್ರಾವಣಗಳ ಸಾರತೆಯನ್ನು ವ್ಯಕ್ತ ಪಡಿಸುವ ಒಂದು (ಇಂದು ರೂಢಿಯಲ್ಲಿರದ) ವಿಧಾನ
normality

ನಾರ್ಮ್
(ಗ) ಸದಿಶಾಕಾಶದಲ್ಲಿಯ ಒಂದು ಅದಿಶ ಮೌಲ್ಯಯುತ ಫಲನ. ಇದರ ಗುಣಗಳು ಮಿಶ್ರಸಂಖ್ಯೆಯ ಮಾಡ್ಯುಲಸ್‌ನ ಗುಣಗಳಿಗೆ ಸದೃಶವಾಗಿವೆ. ಅಂದರೆ ಶೂನ್ಯ ಸದಿಶದ ನಾರ್ಮ್ ೦. ಇತರ ಎಲ್ಲ ಸದಿಶಗಳ ನಾರ್ಮ್ ಧನಾತ್ಮಕ; ಅದಿಶ ಮತ್ತು ಸದಿಶಗಳ ಗುಣಲಬ್ಧದ ನಾರ್ಮ್ ಸದಿಶದ ನಾರ್ಮ್ ಮತ್ತು ಅದಿಶ ಇವುಗಳ ಗುಣಲಬ್ಧದ ನಿರಪೇಕ್ಷ ಮೌಲ್ಯಕ್ಕೆ ಸಮ; ಮತ್ತು ಯಾವುದೇ ಮೊತ್ತದ ನಾರ್ಮ್ ನಾರ್ಮ್‌ಗಳ ಮೊತ್ತಕ್ಕಿಂತ ಕಡಿಮೆ ಅಥವಾ ಅದಕ್ಕೆ ಸಮ
norm

ನಾಲಗೆ
(ಪ್ರಾ) ಬಹುತೇಕ ಕಶೇರುಕಗಳ ಬಾಯ ಅಂಗುಳ ದಲ್ಲಿರುವ ಸ್ನಾಯು ಅಂಗ. ಆಹಾರ ಸೇವಿಸಲು ರುಚಿ ಅರಿಯಲು, (ಮನುಷ್ಯನಲ್ಲಿ) ಮಾತನಾಡಲು ಸಹಕಾರಿ
tongue

ನಾಲಗೆ ಮೂಳೆ
(ವೈ) ನೋಡಿ: ಜಿಹ್ವಾಸ್ಥಿ
hyoid bone

ನಾಲೆ
(ತಂ) ನೀರಾವರಿ ಬೇಸಾಯಕ್ಕೆ ನೀರು ಹರಿಸಲು ತೋಡಿದ ಹಾದಿ. ಕಾಲುವೆ
canal

ನಾಲ್ಕನೆಯ ಆಯಾಮ
(ಭೌ) ಸಾಪೇಕ್ಷತಾ ಸಿದ್ಧಾಂತದಲ್ಲಿ ಕಾಲ. ಉದ್ದ ಅಗಲ ಮತ್ತು ದಪ್ಪ ಮೂರು ಆಯಾಮಗಳ ಆಕಾಶವನ್ನು ವ್ಯಾಖ್ಯಿಸುತ್ತವೆ. ಆಕಾಶ-ಕಾಲ ಸಾತತ್ಯವೇ ವಿಶ್ವವೆಂದು ಸಾಪೇಕ್ಷತಾ ಸಿದ್ಧಾಂತದಲ್ಲಿ ಸಾಧಿಸಲಾಗಿದೆ
fourth dimension


logo