logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ತ್ರಿವಳಿ
(ರ) ಎರಡು ಅಯುಗ್ಮಿತ (ಅನ್‌ಪೇರ್ಡ್) ಎಲೆಕ್ಟ್ರಾನ್‌ಗಳಿರುವ ಸ್ಥಿತಿ. (ಭೌ) ರೋಹಿತದಲ್ಲಿ ತೀರ ಒತ್ತೊತ್ತಿಗೆ ಇದ್ದು ಒಂದೇ ಗೆರೆ ಎಂದು ಭಾಸವಾಗುವ ಮೂರು ರೇಖೆಗಳು
triplet

ತ್ರಿವಳಿಗಳು
(ಪ್ರಾ) ಸ್ತನಿಗಳಲ್ಲಿ ಒಂದೇ ಹೆರಿಗೆಯಲ್ಲಿ ಮೂರು ಶಿಶುಗಳ ಜನನ
triplets

ತ್ರಿವಿಭಕ್ತ
(ಸ) ಮೂರು ವಿಭಾಗಗಳಿಂದಾದ. ಹೆಚ್ಚು ಕಡಿಮೆ ಬುಡದವರೆಗೂ ಮೂರಾಗಿ ಸೀಳಿರುವ ಎಲೆ
tripartite

ತ್ರಿಶೃಂಗೀ ಕವಾಟ
(ಪ್ರಾ) ಸ್ತನಿ ಹೃದಯದ ಬಲಭಾಗದ ಎರಡು ವಿಭಾಗಗಳ ನಡುವಿನ ಕವಾಟ
tricuspid valve

ತ್ರಿಸಂಕರ
(ಪ್ರಾ) ಮೂರು ಜೊತೆಯ ವೈಲಕ್ಷಣ್ಯ ತೋರುವ ಗುಣಗಳನ್ನಾಧರಿಸಿ ಪ್ರಾಯೋಗಿಕವಾಗಿ ಬೆಳೆಸಿದ ಸಂಕರ ತಳಿ. ಇಂಥ ತಳಿಯಿಂದ ತಳಿಶಾಸ್ತ್ರ ತಜ್ಞ ಗ್ರೆಗೊರಿ ಮೆಂದೆಲ್‌ರವರ ಲೆಕ್ಕಾಚಾರದಂತೆ ಎರಡನೇ ಪೀಳಿಗೆಯಲ್ಲಿ ೨೭:೯:೯:೩೩೩:೧ ಪ್ರಮಾಣದ ವಿವಿಧ ಗುಣ ಸಂಯೋಗಗಳನ್ನು ಪಡೆಯಬಹುದು. ಮಾನೊಹೈಬ್ರಿಡ್=ಏಕಸಂಕರ, ಡೈಹೈಬ್ರಿಡ್= ದ್ವಿಸಂಕರ
trihybrid

ತ್ರಿಸುರುಳಿ
(ಜೈತಂ) ಕೊಲಾಜಿನ್ ನಾರು/ತಂತುವಿನ ಮೂಲ ಸಂರಚನಾ ಘಟಕ. ಇದರಲ್ಲಿ ಮೂರು ಪಾಲಿಪೆಪ್ಟೈಡ್ ಸರಪಳಿಗಳು ಸುರುಳಿ ಆಕಾರದಲ್ಲಿ ಸುತ್ತಿಕೊಂಡಿರುತ್ತವೆ. ಇವು ಮೂರೂ ಒಂದರೊಡನೊಂದು ಸುತ್ತಿಕೊಂಡು ದೃಢವಾದ ತಂತಿಯಂತೆ ಇರುತ್ತವೆ. ಇದನ್ನು ಮೊದಲು ವಿಜ್ಞಾನಿಗಳಾದ ಜಿ. ಎನ್. ರಾಮಚಂದ್ರನ್ ಮತ್ತು ಜಿ. ಕರ್ತಾ ಕಂಡುಹಿಡಿದರು
triple helix

ತ್ರುಟಿತ ಅಸ್ಥಿಭಂಗ
(ವೈ) ನೋಡಿ : ಛಿದ್ರಿತ ಅಸ್ಥಿಭಂಗ
comminuted fracture

ತ್ರೋಂಬೇಸ್
(ರ) ರಕ್ತನಾಳಗಳಿಗೆ ಗಾಸಿ ಉಂಟಾದಾಗ ಅಲ್ಲಿ ಉತ್ಪಾದನೆಯಾಗುವ ಈ ಪದಾರ್ಥ ರಕ್ತವನ್ನು ಗರಣೆ ಕಟ್ಟಿಸಿ ಸ್ರಾವವನ್ನು ತಡೆಯುತ್ತದೆ
thrombase


logo