logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ತೊಗಟೆ
(ಸ) ಮರದಲ್ಲಿ ಕಾಂಡವನ್ನು ಸುತ್ತುವರಿದಿರುವ ಬೆಂಡಿನಂಥ ಪದಾರ್ಥ. ಕಾಂಡದಿಂದ ಕಿತ್ತು ತೆಗೆಯಬಹುದಾದ ಒಣ ವಸ್ತು. ಬೆನ್ನ ಸಿಪ್ಪೆ
bark

ತೊಗಟೆ
(ಸ) ಕಾಯಿ ಮೊದಲಾದವುಗಳ ಸಿಪ್ಪೆ, ಚಿಪ್ಪು, ಚರ್ಮ. (ಪ್ರಾ) ಯಾವುದೇ ಅವಯವವನ್ನು ಆವರಿಸಿರುವ ತೆಳುಪೊರೆ. ಚರ್ಮ
coat

ತೊಗಟೆ ಕಳಚಿಕೆ
(ಸ) ಮರಗಳ ತೊಗಟೆಯನ್ನು ತೆಗೆದುಹಾಕುವುದು. ಕೆಲವು ಮರಗಳಲ್ಲಿ (ಉದಾ: ನೀಲಗಿರಿ ಮರ, ಸೀಬೆ ಮರ) ತೊಗಟೆ ಸಹಜವಾಗಿಯೇ ಉದುರುತ್ತದೆ
excortication

ತೊಟ್ಟಿ ರಂಗುಗಳು
(ರ) ಅವಿಲೇಯ ರಂಗುಗಳ ಒಂದು ವರ್ಗ. ಇವುಗಳನ್ನು ಮೊದಲು ಅಪಕರ್ಷಿಸಿ ನಿರ್ವರ್ಣಗೊಳಿಸ ಲಾಗುವುದು. ಆಲ್ಕಲಿಗಳಲ್ಲಿ ವಿಲೇಯ. ದ್ರಾವಣವನ್ನು ನೂಲಿಗೆ ಹಚ್ಚಿ. ಬಳಿಕ ಉತ್ಕರ್ಷಿಸಿದರೆ ಮೂಲರಂಗು ಮೈದಳೆಯುತ್ತದೆ ಉದಾ : ಇಂಡಿಗೊ, ಹತ್ತಿಯ ನೂಲಿಗೆ ಹಚ್ಚಲು ಪ್ರಶಸ್ತ
vat dyes

ತೊಟ್ಟಿನ ಕಲೆ
(ಸ) ಎಲೆ ಮೊದಲಾದವು ಉದುರುವು ದರಿಂದ ಕಾಂಡದ ಮೇಲೆ ನಿಂತ ಕಲೆ, ಗುರುತು. ಬೀಜಕೋಶಕ್ಕೆ ಬೀಜ ಅಂಟಿಕೊಂಡಿರುವ ಭಾಗ. ಬೀಜನಾಭಿ
ciatrice

ತೊಟ್ಟಿಲು ಸಾರವೆ
(ತಂ) ಕಟ್ಟಡ ಕೆಲಸ, ಸೇತುವೆಯ ಕೆಳಭಾಗದ ದುರಸ್ತಿ ಮುಂತಾದವನ್ನು ಮಾಡ ಬೇಕಾದಾಗ ವ್ಯಕ್ತಿಗೆ ಒದಗಿಸುವ ಆಸರೆ ಕಟ್ಟಿನ ಬಗೆ
cradle scaffold

ತೊಟ್ಟಿಲ್ಲದ
(ಸ) (ಎಲೆ, ಹೂವು, ಹಣ್ಣು ಮೊದಲಾದವುಗಳ ವಿಷಯದಲ್ಲಿ) ದಂಟು, ತೊಟ್ಟು, ಕಾವು ಇಲ್ಲದ. ಮೂಲಕ್ಕೆ ಸೇರಿಕೊಂಡಿರುವ. ನಿರ್ವೃಂತ
sessile

ತೊಡರು ಮಂಡಿಗಳು
(ವೈ) ತೊಡೆಮೂಳೆ ಮತ್ತು ಮೊಣಕಾಲು ಮೂಳೆಗಳ ನಡುವಿನ ಕೋನ ವ್ಯತ್ಯಸ್ತಗೊಂಡು ಕಾಲು ನೇರವಾಗಿಲ್ಲದೆ ಒಳಗಡೆ ಬಾಗಿರುವುದರಿಂದ ನಡೆಯುವಾಗ ಒಂದಕ್ಕೊಂದು ಬಡಿಯುವ ಮಂಡಿಗಳು
knock knees

ತೊಡೆ
(ವೈ) ಕಾಲಿನ ಮೇಲ್ಭಾಗ. ವಸ್ತಿ ಕುಹರದಿಂದ ಮೊಳಕಾಲುವರೆಗಿನ ಭಾಗ. ಊರು
thigh

ತೊಡೆ-ಪೋಟಿ
(ತಂ) ತೊಲೆ, ಹಳಿಗಳು ಮೊದಲಾದವನ್ನು ಸೇರಿಸುವಾಗ ತುದಿಗಳ ದಪ್ಪವನ್ನು ಅರ್ಧದಷ್ಟು ಕಡಿಮೆ ಮಾಡಿ, ಒಂದರ ಮೇಲೊಂದನ್ನು ಕೂರಿಸಿ, ಜಂಟಿ ಹಾಕುವುದು. ಪಾಳಿ
lapjoint


logo