logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ತಡೆ
(ತಂ) ನೋಡಿ : ಬ್ರೇಕ್
brake

ತಡೆ
(ಕಂ) ದತ್ತಾಂಶವನ್ನು ಸಂಸ್ಕರಿಸುತ್ತಿರುವಾಗ ಅಥವಾ ಸ್ವೀಕರಿಸುತ್ತಿರುವಾಗ ಬಳಕೆದಾರನು ಕೆಲವು ಗುಂಡಿಗಳನ್ನು ಒತ್ತಿ ಉದ್ದೇಶಪೂರ್ವಕವಾಗಿ ಆ ಕ್ರಿಯೆಯನ್ನು ನಿಲ್ಲಿಸುವ ವಿಧಾನ
break

ತಡೆ ಕವಾಟ
(ತಂ) ದ್ರವ ಅಥವಾ ಅನಿಲವನ್ನು ಮುಂದಕ್ಕೆ ಹರಿಯಲು ಬಿಡುವ, ಆದರೆ ಹಿಂದಕ್ಕೆ ಹರಿಯಲು ಬಿಡದಿರುವ ಏಕದಿಶಾ ಕವಾಟ. ಒಮ್ಮುಖ ಕವಾಟ
check valve

ತಡೆಗಟ್ಟು
(ಸಾ) ಪ್ರತಿಬಂಧಕ. ಅಳ್ವೇರಿ
barricade

ತಡೆಗೋಡೆ
(ತಂ) ಎತ್ತರದ ಮಟ್ಟದಲ್ಲಿರುವ ಮಣ್ಣಿಗೆ ಆಸರೆಯಾಗಿ ಒಂದು ಮಗ್ಗುಲಲ್ಲಿ ನಿರ್ಮಿಸಿದ ಗೋಡೆ
retaining wall

ತಂಡ್ರ
(ಭೂವಿ) ಆರ್ಕ್ಟಿಕ್ ವಲಯದ ಅಂಚುಗಳಲ್ಲೂ ನೆರೆಯ ದ್ವೀಪಗಳಲ್ಲೂ ಪರ್ವತ ಪ್ರದೇಶಗಳಲ್ಲೂ ನೆಲದಡಿ ಶಾಶ್ವತ ಹಿಮಪದರಗಳಿರುವುದರಿಂದ ಬೇಸಗೆಯಲ್ಲಿ ಕುರುಚಲು ಗಿಡ ಹಾಗೂ ಪಾಚಿಯಷ್ಟೇ ಬೆಳೆಯಲು ಸಾಧ್ಯ. ಇಂಥ ಜೌಗು ಪ್ರದೇಶವೇ ತಂಡ್ರ. ಆಳವಾಗಿ ಬೇರು ಬಿಡಲು ಹಿಮ ಪದರ ಅಡ್ಡ. ಆದ್ದರಿಂದ ಎತ್ತರದ ಮರಗಳು ಬೆಳೆಯಲಾರವು
tundra

ತಣಿಸುವಿಕೆ
(ತಂ) ಕಾದ ಲೋಹವನ್ನು ಹಠಾತ್ತನೆ ತಣಿಯುವಂತೆ ಮಾಡಿ ಗಡಸಾಗಿಸುವುದು. ಕೆಂಗಾವಿಗೆ ಕಾದ ಉಕ್ಕನ್ನು ನೀರಿನಲ್ಲಾಗಲೀ ಎಣ್ಣೆಯಲ್ಲಾಗಲೀ ಅದ್ದಿ ತಣಿಸುವುದು
quenching

ತಂತಿ
(ತಂ) ೧. ಲೋಹದ ಎಳೆ. ೨. ತಾರು ಸಂದೇಶ
wire

ತಂತಿ ಸಂದೇಶ
(ಸಾ) ಕೇಬಲ್ ಮೂಲಕ ರವಾನಿಸಿದ ಸಮಾಚಾರ. ತಾರು
cable

ತಂತಿಹುಳು
(ಪ್ರಾ) ಕೋಲಿಯಾಪ್ಟರ ಗಣ, ಎಲ್ಯಾ ಟರಿಡೀ ಕುಟುಂಬಕ್ಕೆ ಸೇರಿದ ಜೀರುಂಡೆಗಳ ಡಿಂಬಕ್ಕಿರುವ ಸಾಮಾನ್ಯ ಹೆಸರು. ವಯಸ್ಕ ಕೀಟಗಳಿಗೆ ಸ್ಕಿಪ್‌ಜಾಕ್ಸ್ ಅಥವಾ ಕ್ಲಿಕ್ ಬೀಟ್ಲ್ ಎಂದು ಹೆಸರು. ಬಲು ಹಾನಿಕರ. ಭೂಮಿಯ ಒಳ ಒಳಗೇ ಹುದುಗಿದ್ದು ಜೋಳ, ದವಸ ಧಾನ್ಯ, ಆಲೂಗೆಡ್ಡೆ, ಕೋಸು, ಮೂಲಂಗಿ ಇತ್ಯಾದಿ ತರಕಾರಿಗಳ ಹಾಗೂ ಹೂವಿನ ಗಿಡಗಳ ಕಾಂಡಗಳನ್ನು ತಿಂದು ಬದುಕುತ್ತವೆ. ಕಾಳುಗಳ ತಿರುಳನ್ನು ತಿಂದು ಟೊಳ್ಳುಮಾಡಿ ಹೊರಕವಚವನ್ನು ಹಾಗೇ ಬಿಡುತ್ತವೆ
wireworm


logo