logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ತಿರುಚುಮುರುಚುತನ
(ಭೂವಿ) ನದೀ ಪಾತ್ರದ ಮಧ್ಯರೇಖೆಯಲ್ಲಿ ಅಳೆದಂತೆ ದೊರೆಯುವ ನದಿಯ ವಾಸ್ತವ ದೀರ್ಘತೆ ಮತ್ತು ಆ ನದಿಯ ಅಕ್ಷೀಯ ದೀರ್ಘತೆ ಇವೆರಡರ ನಡುವಿನ ನಿಷ್ಪತ್ತಿ. ವಕ್ರತೆ
tortuosity

ತಿರುಪು ಕೊಂಡಿ
(ತಂ) ನೋಡಿ: ಸ್ವಿವೆಲ್
swivel

ತಿರುಪು ಪಟ್ಟಿ
(ಪ್ರಾ) ನೋಡಿ: ಟೂರ್ನಿಕೆ
tourniquet

ತಿರುಬಾನಿ
(ತಂ) ಬೀಳುತ್ತಿರುವ ಜಲಧಾರೆಯು ಆವರ್ತನ ಶೀಲ ಚಕ್ರದ ಅಲಗುಗಳಿಗೆ ಬಡಿದಾಗ ಚಕ್ರ ಆವರ್ತಿಸಿ ವಿದ್ಯುತ್ತನ್ನು ಉತ್ಪಾದಿಸುವ ಎಂಜಿನ್ನನ್ನು ಚಾಲೂಗೊಳಿಸುವ ಯಂತ್ರಸಾಧನ. ಬಳಸುವ ತರಲದ ಬಗೆಗಳನ್ನನುಸರಿಸಿ ಅನಿಲ ತಿರುಬಾನಿ, ಜಲ ತಿರುಬಾನಿ ಹಾಗೂ ಉಗಿ ತಿರುಬಾನಿ ಗಳೆಂದು ಮೂರು ವಿಧಗಳುಂಟು. ಉಗಿ ಹಾಗೂ ಜಲ ತಿರುಬಾನಿಗಳ ಸಹಾಯದಿಂದ ಜಗತ್ತಿನ ಶೇ. ೯೫ರಷ್ಟು ವಿದ್ಯುದುತ್ಪಾದನೆ (ಟರ್ಬೊ ಜನರೇಟರ್‌ಗಳ ರೂಪದಲ್ಲಿ) ಆಗುತ್ತಿದೆ. ಅನಿಲ ತಿರುಬಾನಿಗಳು ಜಗತ್ತಿನ ಎಲ್ಲ ಜೆಟ್-ನೋದಿತ ವಿಮಾನಗಳಿಗೆ ಶಕ್ತಿ ಒದಗಿಸುತ್ತವೆ. ಟರ್ಬೈನ್
turbine

ತಿರುವುಮುರುವು
(ಭೂವಿ) ಹೊಳೆ, ನದಿ ಮುಂತಾದ ಹರಿವ ನೀರಿನ ಮಾರ್ಗದಲ್ಲುಂಟಾದ ತೀವ್ರ ಅಂಕುಡೊಂಕು, ಅದರಲ್ಲೂ ಅದು ತುಂಬಿ ಹರಿಯುತ್ತಿರುವಂಥ ಭಾಗದಲ್ಲಿ. ನದಿ ಮಾರ್ಗದ ಉಬ್ಬು ಭಾಗಗಳು ನಿರಂತರ ಸವೆತ, ತಗ್ಗು ಭಾಗಗಳಲ್ಲಿ ನಿಕ್ಷೇಪಗಳ ನಿರಂತರ ಸಂಚಯನ, ಈ ಅಂಕುಡೊಂಕುಗಳ ವಿಸ್ತಾರವನ್ನು ಹಿಗ್ಗಿಸುತ್ತವೆ. ಡೊಂಕು
meander

ತಿರುಳು
(ಸ) ತೆಂಗಿನಕಾಯಿ ಚಿಪ್ಪಿನ ಒಳಗಿನ ಭಾಗ ಹಾಗೂ ಹಣ್ಣಿನೊಳಗೆ ಓಟೆಯ ಸುತ್ತ ಇರುವ ಮೆತು ಭಾಗ
kernel

ತಿರುಳು
(ತಂ) ಚೌಬೀನೆಯನ್ನು ಯಾಂತ್ರಿಕ ಅಥವಾ ರಾಸಾಯನಿಕ ಕ್ರಿಯೆಗೆ ಒಳಪಡಿಸಿದ ನಂತರ ರೂಪಿತವಾಗುವ ವಸ್ತು. ಕಾಗದದ ತಯಾರಿಕೆಗೆ ಉಪಯುಕ್ತ. ಮಜ್ಜೆ
pulp

ತಿಲಾಸ್ಥಿ
(ಪ್ರಾ) ಸಾಮಾನ್ಯವಾಗಿ ಮಂಡಿಚಿಪ್ಪಿನಂಥ ಕೀಲಿನಲ್ಲಿ ಅಥವಾ ಅದರ ಬಳಿಯಲ್ಲಿ ಸ್ನಾಯು-ಅಂಶವಾಗಿರುವ ದುಂಡಗಿನ ಸಣ್ಣ ಎಳ್ಳಿನಾಕಾರದ ಮೂಳೆ. ಸೆಸಮಾಯ್ಡ್
sesamoid

ತೀಕೊಡಾಂಟ್
(ಪ್ರಾ) ತಿಕೊಡಾಂಷಿಯ ಗಣಕ್ಕೆ ಸೇರಿದ, ಟ್ರಿಯಾಸಿಕ್ ಯುಗದಲ್ಲಿ ಜೀವಿಸಿದ್ದ ಆರ್ಕೊಸಾರಿಯನ್ ಸರೀಸೃಪ. ದವಡೆಯ ಕುಳಿಗಳಲ್ಲಿ ದಂತ ಹುದುಗಿದ್ದುದು ಇದರ ವೈಶಿಷ್ಟ್ಯವಿದ್ದಿತು
thecodont

ತೀಕ್ಷ್ಣ
(ಸ) ಚೂಪು ಮೊನೆಯ, ತೀಕ್ಷ್ಣಾಗ್ರ ಮುಳ್ಳು
pungent


logo