logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ತಾರ್ಕಣೆ ಮಾಡು
(ಸಾ) ಪರಸ್ಪರ ಹೊಂದಿಸು. ತಾಳೆ ಮಾಡು
collate

ತಾರ್ಕಿಕ ಸಂಯೋಜಕಗಳು
(ಗ) ಎರಡು ಉಕ್ತಿ ಗಳನ್ನು ಸಂಯೋಜಿಸಲು ಬಳಸುವ ಪರಿಕರ್ಮಗಳು: “ಮತ್ತು", “ಅಥವಾ", “ಇಲ್ಲ (ಅಲ್ಲ)", “ಆದರೆ", “ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ (ಆಆಮಾ)" ಒಂದು ಅಥವಾ ಹೆಚ್ಚು ಸಂಯೋಜಕ ಗಳಿಂದ ಬಂಧಿತವಾಗಿರುವ ಉಕ್ತಿಗಳಿಗೆ “ಸಂಯುಕ್ತೋಕ್ತಿಗಳು" ಎಂದು ಹೆಸರು. ಪ್ರತೀಕಗಳಲ್ಲಿ: “ಮತ್ತು" "" “ಅಥವಾ" ", “ಇಲ್ಲ (ಅಲ್ಲ)" ~, “ಆದರೆ" "" “ಆದರೆ ಮತ್ತು ಆಗಿದ್ದರೆ ಮಾತ್ರ (ಆಆಮಾ) )"
logical connections

logical connections

">

ತಾಲವ ನರ
(ವೈ) ಅಂಗುಳಿಗೆ ಸಂಬಂಧಿಸಿದ ನರ
palatine nerve

ತಾಲಿಡೊಮೈಡ್ ಶಿಶುಗಳು
(ವೈ) ಗರ್ಭಧಾರಣೆಯ ಪ್ರಾರಂಭದಲ್ಲಿ ಹೊಟ್ಟೆ ತೊಳಸುವುದು, ವಾಂತಿ ಮುಂತಾದ ಅದೂ ವಿಶೇಷವಾಗಿ ಎಳೆ ಬಸುರಿಯರಲ್ಲಿ ಕಂಡು ಬರುವ ಪೀಡನೆಗಳ ನಿವಾರಣೆಗಾಗಿ ಪಶ್ಚಿಮ ಜರ್ಮನಿಯಲ್ಲಿ ೧೯೫೯-೬೧ರಲ್ಲಿ ತಾಲಿಡೊಮೈಡ್ (C13H10N2O4) ಎಂಬ ಒಂದು ಶಾಮಕ ಮದ್ದು ವ್ಯಾಪಕವಾಗಿ ಬಳಕೆಯಲ್ಲಿ ಇದ್ದಿತು. ಇದು ಸಾಕಷ್ಟು ಹಾನಿಯುಂಟುಮಾಡಿತು. ಆಗ ಪಶ್ಚಿಮ ಜರ್ಮನಿಯಲ್ಲಿ ಹುಟ್ಟಿದ ಅಸಂಖ್ಯ ಶಿಶುಗಳು ಹುಟ್ಟಿನಿಂದಲೇ ಅಂಗವಿಕಲವಾಗಿದ್ದವು. ಅವು ಈ ಮದ್ದಿನ ಈ ದುಷ್ಪರಿಣಾಮದತ್ತ ಪ್ರಪಂಚದ ಲಕ್ಷ್ಯವನ್ನೇ ಸೆಳೆದುವು. ಈ ಶಿಶುಗಳನ್ನು ತಾಲಿಡೊಮೈಡ್ ಶಿಶುಗಳೆಂದೇ ಕರೆದದ್ದುಂಟು
thalidomide babies

ತಾಲು
(ಜೀ) ನೋಡಿ : ಅಂಗುಳು
palate

ತಾಳು
(ಸ) ಕಸಿ ಸೇರಿಸುವ ಸಸ್ಯದ ಕಾಂಡ. ಪ್ರಜನನ ಅಥವಾ ಪ್ರಸರಣೆಗಾಗಿ ಸಂರಕ್ಷಿಸಿದ ತಳಿ. ಕಾಂಡ
stock

ತಾಳೆಮರ
(ಸ) ಪಾಮೀ ಅಥವಾ ಅರಿಕೇಸೀ ಕುಟುಂಬಕ್ಕೆ ಸೇರಿದ ವನ್ಯವೃಕ್ಷ. ಬೊರಾಸಸ್ ಫ್ಲಾಬೆಲಿಫರ್ ವೈಜ್ಞಾನಿಕ ನಾಮ. ತೆಂಗು, ಈಚಲು, ಅಡಿಕೆ ಮರಗಳ ಹತ್ತಿರ ಸಂಬಂಧಿ. ಹಣ್ಣಿಗೆ ತಾಟಿನುಂಗು ಎಂಬ ಹೆಸರಿದೆ. ಮರದಿಂದ ಹೆಂಡ ಇಳಿಸುತ್ತಾರೆ. ನಾರಿನಿಂದ ಬ್ರಷ್, ಬರಲುಗಳನ್ನೂ ಎಲೆಗಳಿಂದ ಛತ್ರಿ, ಬುಟ್ಟಿ, ಚಾಪೆಗಳನ್ನೂ ನೇಯುತ್ತಾರೆ. ಹೊಸದಾಗಿ ಇಳಿಸಿದ ನೀರಾದಿಂದ ಬೆಲ್ಲ ತಯಾರಿಸುತ್ತಾರೆ
palmyra palm

ತಿಕ್ಸೊಟ್ರೊಪಿ
(ರ) ಕಾಲದೊಂದಿಗೆ ಸ್ನಿಗ್ಧತೆಯಲ್ಲಾಗುವ ವ್ಯತ್ಯಯದ ದರ. ನಿಶ್ಚಲ ಸ್ಥಿತಿಯಲ್ಲಿ ಕೆಲವು ದ್ರವಗಳ ಸ್ನಿಗ್ಧತೆ
thixotropy

ತಿಗಣೆ
(ಪ್ರಾ) ಸಿಮಿಸಿಡೀ ಕುಟುಂಬಕ್ಕೆ ಸೇರಿದ ಕೀಟ. ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಮನೆಗಳಲ್ಲಿ ಹಾಸಿಗೆ ಹೊದಿಕೆಗಳಲ್ಲಿ ಸೇರಿ ಮನುಷ್ಯರ ರಕ್ತ ಹೀರಿ ಜೀವಿಸುವ ಉಪದ್ರವಕಾರಕ ಕೀಟ
bedbug

ತಿಂಗಳು
(ಖ) ವರ್ಷದ ಹನ್ನೆರಡು ವಿಭಾಗಗಳಲ್ಲೊಂದು. ಚಂದ್ರನಿಗೆ ಭೂಮಿಯ ಸುತ್ತ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಅವಧಿ. ನೋಡಿ: ಚಾಂದ್ರಮಾಸ, ನಾಕ್ಷತ್ರಿಕ ಮಾಸ, ಪಾತಮಾಸ, ಸಾಯನ ಮಾಸ
month


logo