logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಜರ್ಸಿ ತಳಿ
(ಪ್ರಾ) ಜರ್ಸಿ ದ್ವೀಪದ ಹೋರಿ ಮತ್ತು ಫ್ರೀಸಿಯನ್ ಹಸು ಕೂಡಿಕೆಯಿಂದ ಹುಟ್ಟಿದ ಮಿಶ್ರತಳಿ
jersey breed

ಜಲಕಾಂತ ಮಣಿ
(ಭೂವಿ) ನೀರಿನಲ್ಲಿ ಅದ್ದಿದಾಗ ನೀರನ್ನು ಹೀರಿಕೊಂಡು ಪಾರಕವಾಗುವ ಒಂದು ಬಗೆಯ ಅರೆಪಾರಕ ಓಪಲ್ ಪ್ರಶಸ್ತ ರತ್ನ
hydrophane

ಜಲಕುಹರ
(ಭೂವಿ) ಉಪಯೋಗಲಭ್ಯ ಪ್ರಮಾಣದಲ್ಲಿ ನೀರನ್ನು ಒಳಗೊಂಡಿರುವ ಭೂಮ್ಯಂತರ್ಗತ ಶಿಲಾರೂಪಣೆ. ಜಲಧಾರಿ, ನೀರು ಪೊಟರೆ
aquifer

ಜಲಕೃಷಿ
(ಜೀ) ಸಿಹಿನೀರಿನಲ್ಲೂ ಕಡಲಿನಲ್ಲೂ ಬೆಳೆಯುವ ಸಸ್ಯ, ಪ್ರಾಣಿಗಳ ವ್ಯವಸಾಯ
aquaculture

ಜಲಗಿರಣಿ
(ತಂ) ಜಲಶಕ್ತಿ ಚಾಲಿತ ಬೀಸುಯಂತ್ರ
water mill

ಜಲಗುಹ
(ಪ್ರಾ) ಕಂಟಕಚರ್ಮಿಗಳಲ್ಲಿ ನೀರು ಹೀರಿಕೊಳ್ಳುವ ನಾಳವ್ಯವಸ್ಥೆ
hydrocoel

ಜಲಗೋಳ
(ಭೂವಿ) ಭೂಮಿಯ ಮೇಲ್ಮೈಯ ಜಲಭಾಗಗಳು ಮತ್ತು ವಾತಾವರಣದ ಜಲಾಂಶಾವೃತ ಭಾಗ
hydrosphere

ಜಲಚಕ್ರ
(ಭೂವಿ) ಪ್ರಪಂಚವ್ಯಾಪ್ತಿಯಲ್ಲಿ ಮತ್ತು ಮಾನಕದಲ್ಲಿ ನೀರಿನ ಬಾಷ್ಪೀಕರಣ ಮತ್ತು ಸಾಂದ್ರೀಕರಣ
water cycle

ಜಲಚಾಲನ ಶಾಸ್ತ್ರ
(ತಂ) ನೋಡಿ: ಚರದ್ರವವಿಜ್ಞಾನ
hydraulics

ಜಲಚಿಕಿತ್ಸೆ
(ವೈ) ನೀರಿನಿಂದ, ವಿಶೇಷವಾಗಿ ಖನಿಜೀಯ ಒರತೆಗಳ ನೀರಿನಿಂದ, ಮೈ ತೊಳೆಯುವ ಮೂಲಕ ಅಥವಾ ಅಂಥ ನೀರನ್ನು ಕುಡಿಸುವ ಮೂಲಕ ನಿರ್ದಿಷ್ಟ ರೋಗ ಚಿಕಿತ್ಸೆ ಮಾಡುವ ವಿಧಾನ
hydrotherapy


logo