logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಜಡತೆ
(ವೈ) ವ್ಯಕ್ತಿ ನಿದ್ರಿಸುತ್ತಲೇ ಇರುವ ಪ್ರವೃತ್ತಿ ತೋರುವ, ಎಚ್ಚರಾದಾಗಲೂ ಯಾವುದರಲ್ಲೂ ಆಸಕ್ತಿತಳೆಯದ, ಚಲಿಸಲು ಕಾರ್ಯಜರಗಿಸಲು ಯಾವುದೇ ಯತ್ನ ಮಾಡಲೂ ಅಸಮರ್ಥವಾದಂತೆ ತೋರುವ ಅಸಹಜ ಸ್ಥಿತಿ. ತಾಮಸ
lethargy

ಜಡತೆ
(ಭೌ) ಬಾಹ್ಯಬಲದ ಪ್ರಭಾವವಿಲ್ಲದಿರುವಾಗ ತಾನಿರುವ ನಿಶ್ಚಲ ಸ್ಥಿತಿಯನ್ನಾಗಲೀ ಏಕರೀತಿ ವೇಗದ ಸರಳರೇಖಾ ಚಲನೆಯನ್ನಾಗಲಿ ವ್ಯತ್ಯಯಿಸದಿರುವ ವಸ್ತುವಿನ ಗುಣ. ಇದು ಚಲನೆಗೆ ಸಂಬಂಧಿಸಿದ ನ್ಯೂಟನ್‌ನ ಮೊದಲ ನಿಯಮ. ಕಾಯವೊಂದರ ರಾಶಿ ಎಂದರೆ ಅದರ ಜಡತ್ವದ ಪ್ರಮಾಣ
inertia

ಜಡತ್ವ ಕೇಂದ್ರ
(ಭೌ) ನೋಡಿ: ಗುರುತ್ವ ಕೇಂದ್ರ
centre of inertia

ಜಡಾನಿಲಗಳು
(ರ) ನೋಡಿ: ಶ್ರೇಷ್ಠ ಅನಿಲಗಳು
inert gases

ಜಡೋಷ್ಣ
(ಭೌ) ನೋಡಿ: ಎಂಟ್ರಪಿ
entropy

ಜಡ್ಡು
(ವೈ) ಬಾಹ್ಯವಸ್ತು ಚರ್ಮವನ್ನು ನಿರಂತರವಾಗಿ ಉಜ್ಜುವುದರಿಂದ ಚರ್ಮದಲ್ಲಿ ಉಂಟಾಗುವ ಸೂಕ್ಷ್ಮ ಊತ. ಜೀನು ಒತ್ತಿ ಒತ್ತಿ ಕುದುರೆ ಬೆನ್ನ ಮೇಲೆ ಆದ ಗಂಟು. ಉಜ್ಜು ಗಂತಿ
warble

ಜಂತಿ
(ತಂ) ಗೋಡೆಯಿಂದ ಗೋಡೆಗೆ ಹಾಕಿರುವ ಸಣ್ಣ ತೊಲೆ. ಚೌಬೀನೆ, ಉಕ್ಕು ಅಥವಾ ಕಾಂಕ್ರೀಟಿನಿಂದ ನಿರ್ಮಿತ. ದೂಲ. ಜಂತೆ
joist

ಜಂತು ಹುಳು
(ಪ್ರಾ) ನೆಮಟೋಡ ಗುಂಪಿನ ಆಸ್ಕಾರಿಡೆ ವಂಶಕ್ಕೆ ಸೇರಿದ ದುಂಡುಹುಳು. ಇದು ಮಾನವನನ್ನು ಒಳಗೊಂಡಂತೆ ಸಾಕಷ್ಟು ಕಶೇರುಕಗಳಲ್ಲಿ ವಾಸಿಸುವ ಪರೋಪ ಜೀವಿ. ವಯಸ್ಕ ಹುಳು ೨೫ ಸೆಂಮೀಗಳವರೆಗೆ ಬೆಳೆಯಬಲ್ಲುದು. ೧-೨ ವರ್ಷಗಳ ಜೀವಿತಮಾನದಲ್ಲಿ ಒಂದು ಹೆಣ್ಣು ಹುಳುವು ಸುಮಾರು ೨೦೦,೦೦೦ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಮಲದ ಮೂಲಕ ಹೊರ ಬರುತ್ತವೆ. ಮಣ್ಣಿನಲ್ಲಿ ಕೊನೆಯ ಪಕ್ಷ ೨ ವಾರಗಳ ಕಾಲ ಇರಬೇಕಾಗುತ್ತದೆ. ಆಗ ಮಾತ್ರ ಅದಕ್ಕೆ ಸ್ವತಂತ್ರ ಜೀವನವನ್ನು ಆರಂಭಿಸುವ ಶಕ್ತಿ ಬರುತ್ತದೆ. ಆಹಾರ ಪಾನೀಯಗಳ ಮೂಲಕ ಹೊಸ ಅತಿಥಿಯ ದೇಹವನ್ನು ಪ್ರವೇಶಿಸಿದ ಮೊಟ್ಟೆಗಳು ಕರುಳಿನಲ್ಲಿ ಮೊಟ್ಟೆಯೊಡೆದು ಮರಿಹುಳುಗಳು ಹೊರಬರುತ್ತವೆ. ಕರುಳ ಭಿತ್ತಿಯನ್ನು ತೂತು ಕೊರೆದು ಸಿರೆಯ ರಕ್ತಪ್ರವಾಹದಲ್ಲಿ ಬೆರೆತು ಶ್ವಾಸಕೋಶಗಳನ್ನು ತಲಪುತ್ತವೆ. ಶ್ವಾಸನಾಳಗಳ ಮೂಲಕ ಕಫದೊಡನೆ ಬೆರೆತು ಗಂಟಲಿಗೆ ಬರುತ್ತವೆ. ವ್ಯಕ್ತಿ ಕೆಮ್ಮಿ ಕಫವನ್ನು ನುಂಗಿದಾಗ ಮರಿಹುಳುವು ಮತ್ತೆ ಕರುಳಿಗೆ ಬಂದು ಬೀಡು ಬಿಡುತ್ತದೆ. ೧೨-೧೪ ವರ್ಷದ ಮಕ್ಕಳನ್ನು ಹೆಚ್ಚು ಕಾಡುವುದು ಉಂಟು. ಹೆಚ್ಚು ಹುಳುಗಳು ಕರುಳಿನಲ್ಲಿ ಬೀಡು ಬಿಟ್ಟಾಗ ಒಂದಕ್ಕೊಂದು ಸುತ್ತಿ ಗಂಟು ಹಾಕಿಕೊಂಡು ಆಹಾರದ ಚಲನವಲನಕ್ಕೆ ಅಡ್ಡಿಮಾಡುತ್ತವೆ. ೬ ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳಲ್ಲಿ ಇಂತಹ ಪ್ರಸಂಗ ಹೆಚ್ಚು ಸಂಭವಿಸುತ್ತದೆ. ಇದು ಆಸ್ಕರಾನ್ ಅಥವಾ ಆಸ್ಕರೇಸ್ ಎಂಬ ವಿಷವನ್ನು ಒಸರಿಸು ವುದರಿಂದ ಇದು ನರಗಳನ್ನು ಕೆರಳಿಸಿ, ಆಲಸ್ಯ, ನಿಶ್ಯಕ್ತಿ, ತಲೆಸುತ್ತು, ನಿದ್ರಾನಾಶ, ಅಲರ್ಜಿ, ಹೊಟ್ಟೆ ನೋವು ಇತ್ಯಾದಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ದುಂಡುಹುಳ
round worm

ಜಂತುನಾಶಕ
(ವೈ) ನೋಡಿ: ಆಂತೆಲ್ಮಿಂತಿಕ್
anthelminthic

ಜಂತುಹುಳು ರೋಗ
(ವೈ) ನೆಮಟೋಡ ಗುಂಪಿನ, ಆಸ್ಕಾರಿಸ್ ಜಾತಿಯ ದುಂಡುಹುಳುವಿನ ತತ್ತಿಗಳು ಆಹಾರ ಪಾನೀಯ ಮತ್ತು ದೂಳಿನ ಮೂಲಕ ಶರೀರದ ಒಳಹೊಕ್ಕು ಆತಿಥೇಯ ಜೀವಿಗೆ ಬರುವ ರೋಗ. ಹೊಟ್ಟೆ ನೋವು, ಉಬ್ಬರ, ವಾಂತಿ ಈ ರೋಗದ ಲಕ್ಷಣಗಳು. ಹುಳುಗಳು ಒಸರಿಸುವ ಆಸ್ಕರಾನ್ ಅಥವಾ ಆಸ್ಕರೇಸ್ ಎಂಬ ವಿಷ ಪದಾರ್ಥದಿಂದಾಗಿ ನರೋದ್ರೇಕ, ಅಲರ್ಜಿ, ಮೊದಲಾದ ಅಹಿತ ಪ್ರತಿಕ್ರಿಯೆಗಳೂ ತೊಂದರೆಗಳೂ ಸಂಭವಿಸಬಹುದು
ascariasis


logo