logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಜೀವಾಂಕುರ
(ಸ) ಹೊಸ ಜೀವಿಯು ರೂಪುಗೊಳ್ಳಬಲ್ಲ ಜೀವಿಯ ಭಾಗ (ಬೀಜ, ಮೊಗ್ಗು, ಕೊಂಬೆ ಮೊದಲಾದವು). (ಪ್ರಾ) ಜೀವಿಯ ಮುಮ್ಮೊದಲ ರೂಪ. ರೋಗಾಣು. ಗರ್ಭಾಣು. ಏಕಕೋಶಿಕ ಸೂಕ್ಷ್ಮಜೀವಿ
germ

ಜೀವಾವರಣ ವಿಜ್ಞಾನ
(ಜೀ) ಜೀವಿಗಳು ಸಮರ್ಥವಾಗಿ ಪರಿಸರದೊಂದಿಗೆ ಹೊಂದಿಕೊಳ್ಳಲು ತಮ್ಮ ಗುಣಲಕ್ಷಣಗಳಲ್ಲಿ ಮಾಡಿಕೊಳ್ಳುವ ಬದಲಾವಣೆಯ ಅಧ್ಯಯನ. ಜೀವಿಗಳಿಗೂ ಅವುಗಳ ಸ್ವಾಭಾವಿಕ ಆವರಣಕ್ಕೂ ಇರುವ ಸಂಬಂಧ ಕುರಿತ ವಿಜ್ಞಾನ
bionomics

ಜೀವಾಳ
(ಜೀ) ಪ್ರಮುಖ ಜೀವ ವ್ಯಾಪಾರಕ್ಕೆ ಸಂಬಂಧಿಸಿದ, ಜೀವ ವ್ಯಾಪಾರಕ್ಕೆ ಅಗತ್ಯವಾದ. ಅಗತ್ಯ
vital

ಜೀವಿ
(ಜೀ) ಪರಸ್ಪರಾವಲಂಬಿಗಳಾದ ಭಾಗಗಳಿಂದ ಸುಸಂಬದ್ಧವಾಗಿ ರಚಿತವಾಗಿ ಪ್ರಾಣದಿಂದ ಕೂಡಿರುವ ವಸ್ತು: ವ್ಯವಸ್ಥಿತ ದೇಹ, ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು ಹಾಗೂ ಸೂಕ್ಷ್ಮ ಜೀವಿಗಳು
organism

ಜೀವಿ ಘಟನಾವಿಜ್ಞಾನ
(ಸ) ರಾಚನಿಕ ಘಟಕಗಳು ಮತ್ತು ತತ್ಸಂಬಂಧಿತ ಸಂಗತಿಗಳನ್ನಷ್ಟೆ ಅಭ್ಯಸಿಸುವ ರೂಪ ವಿಜ್ಞಾನ ವಿಭಾಗ
tectology

ಜೀವಿ ವಿಶ್ಲೇಷಣೆ
(ಜೀ) ಶಿಷ್ಟಗಾತ್ರದ ಪ್ರಾಣಿಯ ಮೇಲೆ ಯಾವುದೇ ಔಷಧಿ ಇಲ್ಲವೇ ಜೈವಿಕೋತ್ಪನ್ನ ಮಾಡುವ ಪರಿಣಾಮ ವನ್ನು ಪರೀಕ್ಷಿಸಿ ಅದರ ಸಾಮರ್ಥ್ಯವನ್ನು ನಿರ್ಧರಿಸುವುದು
bioassay

ಜೀವಿ ಸಮುದಾಯ
(ಜೀ) ನಿರ್ದಿಷ್ಟ ಆಹಾರ ಲಭ್ಯ ಪ್ರದೇಶವನ್ನು ಅವಲಂಬಿಸಿ ಬಾಳುತ್ತಿರುವ ಪ್ರಾಣಿಗಳ ಹಾಗೂ ಸಸ್ಯಗಳ ನಡುವಿನ ಸಾಹಚರ್ಯ. ಜೈವ ಸಮಾಶ್ರಮ
biocoenosis

ಜೀವಿಚ್ಛೇದನ
(ಪ್ರಾ) ಪ್ರಯೋಗ ನಡೆಸಲೋಸುಗ ಜೀವಂತ ಸ್ಥಿತಿಯಲ್ಲೇ ಪ್ರಾಣಿಗಳ ಅಂಗ ಛೇದನ
vivisection

ಜೀವಿತಾವಧಿ
(ಸಾ) ಜೀವಿಯ ಹುಟ್ಟಿನಿಂದ ಸಾವಿನ ತನಕದ ಅವಧಿ. ಆಯುಷ್ಯ
life span

ಜೀವಿಪ್ರಭೇದಗಳ ಉಗಮ
(ಪ್ರಾ) ಅಸ್ತಿತ್ವದಲ್ಲಿ ಇರುವ ಜೀವಿ ಪ್ರಭೇದವೊಂದರಿಂದ ಹೊಸ ಪ್ರಭೇದಗಳು ಆಗಾಗ್ಗೆ ಉದ್ಭವಿಸುತ್ತಿರುತ್ತವೆ ಮತ್ತು ನಶಿಸುತ್ತಿರುತ್ತವೆ, ಇದೇ ಜೀವವಿಕಾಸ ದಲ್ಲಿಯ ಮುಖ್ಯ ವಿಚಾರ ಎಂದು ಬ್ರಿಟಿಷ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ (೧೮೦೯-೮೨) ೧೮೫೯ರಲ್ಲಿ ಪ್ರತಿಪಾದಿಸಿದ ಸಿದ್ಧಾಂತ. ನೈಸರ್ಗಿಕ ಆಯ್ಕೆಯಿಂದ ಪ್ರಭೇದಗಳು ಉದ್ಭವವಾಗುತ್ತವೆಂದು ಅವರು ವಾದಿಸಿದರು. ಪ್ರಭೇದಗಳ ಅತ್ಯುತ್ಪಾದನೆಯಾದರೂ ಬದುಕಿ ಉಳಿಯುವಿಕೆಯ ಹೋರಾಟದಲ್ಲಿ ಮತ್ತು ಸ್ಪರ್ಧೆಯಲ್ಲಿ ಉತ್ತಮ ವೈವಿಧ್ಯ ತೋರುವ ಪ್ರಭೇದಗಳು ಬದಲಾಗುವ ಪರಿಸರಕ್ಕೆ ಸುಲಭವಾಗಿ ಹೊಂದಿಕೊಂಡು, ನಿಸರ್ಗದ ಆಯ್ಕೆಯಲ್ಲಿ ಬದುಕುವ ಅರ್ಹತೆಯನ್ನು ಗಳಿಸಿಕೊಂಡು ತಾವಷ್ಟೆ ಉಳಿಯುತ್ತವೆ. ಫಲವಾಗಿ ಒಂದು ಕಾಲದಲ್ಲಿ ವಿಕಾಸಗೊಂಡಿದ್ದವು ಮತ್ತೊಂದು ಕಾಲದಲ್ಲಿ ನಶಿಸಿವೆ, ಹೊಸ ಪ್ರಭೇದಗಳು ಹುಟ್ಟಿವೆ. ಇದು ಡಾರ್ವಿನ್ ಸಿದ್ಧಾಂತದ ಸಾರ. ನೋಡಿ : ನಿಯೋಡಾರ್ವಿನಿಸಮ್
origin of species


logo