logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಜಿಮ್ನೊಗೈನಸ್
(ಸ) ಅನಾವೃತ (ನಗ್ನ) ಅಂಡಾಶಯವುಳ್ಳ
gymnogynous

ಜಿಮ್ನೊಜಿನಸ್
(ಪ್ರಾ) ಪುಕ್ಕಗಳು ಬೆಳೆಯದೆ ಚರ್ಮ ಸಂಪೂರ್ಣ ಅನಾವೃತ (ನಗ್ನ) ಸ್ಥಿತಿಯಲ್ಲಿದ್ದಾಗ ಮರಿಹಕ್ಕಿ ಮೊಟ್ಟೆಯಿಂದ ಹೊರಬರುವುದು
gymnogenous

ಜಿಯೊಡೆಸಿಕ್
(ಗ) ಯಾವುದೇ ತಲದಲ್ಲಿಯ ಎರಡು ಬಿಂದುಗಳನ್ನು ಜೋಡಿಸುವ ಕನಿಷ್ಠ ದೀರ್ಘತೆಯ ಪಥ
geodesic

ಜಿಯೊಡ್
(ಭೂವಿ) ಹರಳುಗಳ ಅಥವಾ ಖನಿಜ ಪದಾರ್ಥಗಳ ಅಸ್ತರಿಯುಳ್ಳ ಪೊಟರೆಯಿರುವ ಶಿಲೆ. ಪೊಳ್ಳಿನಲ್ಲಿ ಸ್ಫಟಿಕಗಳು ಒಳಮುಖವಾಗಿ ಬೆಳೆದಿರುತ್ತವೆ
geode

ಜಿರಾಫೆ
(ಪ್ರಾ) ಆರ್ಟಿಯೊಡ್ಯಾಕ್ಟಿಲ ಗಣ, ಜಿರ‍್ಯಾಫಿಡೀ ಕುಟುಂಬಕ್ಕೆ ಸೇರಿದ, ಮೆಲುಕು ಹಾಕುವ ಸ್ತನಿ. ಜಿರಾಫ ಕಮೀಲೊ ಪಾರ್ಡಸ್ ವೈಜ್ಞಾನಿಕ ನಾಮ. ಆಫ್ರಿಕದಲ್ಲಿ ಸಹಾರಾ ಮರುಭೂಮಿಯ ದಕ್ಷಿಣದಲ್ಲಿರುವ ಕುರುಚಲು ಕಾಡು ಹಾಗೂ ಸವಾನಾ ಹುಲ್ಲುಗಾವಲು ಗಳಲ್ಲಿ ವಾಸ. ಪ್ರಾಣಿ ಗಳಲ್ಲೆಲ್ಲ ಅತ್ಯಂತ ಎತ್ತರ. ಕತ್ತು ಉದ್ದವಾಗಿದ್ದರೂ ಕಶೇರುಗಳ ಸಂಖ್ಯೆ ಎಲ್ಲ ಸ್ತನಿಗಳಲ್ಲಿ ಇರುವಷ್ಟೆ ೭. ದೃಷ್ಟಿ ತೀಕ್ಷ್ಣ, ಉದ್ದಕ್ಕೆ ಚಾಚಬಲ್ಲ ನಾಲಿಗೆ, ಬೇಕೆಂದಾಗ ಮುಚ್ಚುವ ಮೂಗಿನ ಹೊಳ್ಳೆ ಇದರ ವಿಚಿತ್ರ ಲಕ್ಷಣ. ನೀರನ್ನು ಕುಡಿಯುವುದು ಬಲು ಕಡಿಮೆ. ಈಜಲು ಬಾರದು. ಆದ್ದರಿಂದ ನೀರಿನಲ್ಲಿ ಇಳಿಯಲು ಅಂಜುತ್ತದೆ. ಆಯಸ್ಸು ಸುಮಾರು ೨೦ ವರ್ಷ
giraffe

ಜಿರ್ಕೋನಿಯಮ್
(ರ) ಲೋಹೀಯ ಧಾತು; ಪ್ರತೀಕ Zr. ಪಸಂ ೪೦, ಸಾಪರಾ ೯೧.೨೨; ಸಾಸಾಂ ೪.೧೫, ದ್ರಬಿಂ ೧೮೫೨0 ಸೆ. ಕುಬಿಂ ೪೩೭೬0 ಸೆ. ಬೈಜಿಕ ಕ್ರಿಯಾಕಾರಿಗಳ ನಿರ್ಮಾಣದಲ್ಲಿ ಉಪಯೋಗ. ಇದರ ಒಂದು ಸಮಸ್ಥಾನಿಯಾದ ಜಿರ್ಕೋನಿ ಯಮ್-೯೫ ವಿಕಿರಣಪಟು. ಅರ್ಧಾಯು ೬೩ ದಿವಸಗಳು; ಬೀಟ-ಕಣ ಮತ್ತು ಗ್ಯಾಮ-ಕಿರಣಗಳನ್ನು ಸೂಸುತ್ತದೆ
zirconium

ಜಿಹ್ವಾಸ್ಥಿ
(ವೈ) ಗಲ್ಲಕ್ಕೂ ಥೈರಾಯ್ಡ್ ಮೃದ್ವಸ್ಥಿಗೂ ಮಧ್ಯೆ ಇರುವ U-ಆಕಾರದ ಮೂಳೆ. ನಾಲಗೆ ಮೂಳೆ
hyoid bone

ಜೀನ್
(ಪ್ರಾ) ಕ್ರೋಮೊಸೋಮ್‌ನ ಮೇಲೆ ಉದ್ದುದ್ದವಾಗಿ ಅಳವಟ್ಟ ಡಿಎನ್‌ಎಯ ಒಂದು ಘಟಕ. ಜನ್ಮದಾತೃಗಳ ಆನುವಂಶಿಕ ಗುಣವನ್ನು ಮುಂದಿನ ಸಂತತಿಗೆ ವರ್ಗಾಯಿಸುವ ಅಂಶ
gene

ಜೀನ್ ಚಿಕಿತ್ಸೆ
(ವೈ) ಆನುವಂಶಿಕ ನ್ಯೂನತೆಯ ಜೀನ್‌ಗಳನ್ನು ಕತ್ತರಿಸಿ ಆ ಜಾಗ ದಲ್ಲಿ ಆರೋಗ್ಯಕರ ಜೀನ್ ಕಸಿ ಮಾಡುವಿಕೆ. ತಳಿ ತಂತ್ರಜ್ಞಾನದ ದಿಟ್ಟ ಹೆಜ್ಜೆ. ಇಂತಹ ಚಿಕಿತ್ಸೆ ಗಳನ್ನು ಲಿಂಗಾಣು ಅಥವಾ ಫಲಿತ ಅಂಡಾಣು ಅಥವಾ ಭ್ರೂಣಾವಸ್ಥೆಯಲ್ಲೂ ನಡೆಸಿ ನ್ಯೂನತೆ ನಿವಾರಿಸಿ ಶಾಶ್ವತ ಪರಿಹಾರ ಕಂಡುಹಿಡಿಯು ವುದು ವೈದ್ಯಕೀಯ ಕ್ಷೇತ್ರದ ಮಹದಾಸೆ
gene therapy

ಜೀನ್ ದ್ವಿಪ್ರತೀಕರಣ
(ಜೀ) ಕೋಶ ವಿಭಜನೆಯ ಕಾಲದಲ್ಲಿ ಅಪಸಾಮಾನ್ಯ ವರ್ಣತಂತು ತುಂಡುಗಳ ಮರುಜೋಡಣೆಯ ಸಂದರ್ಭದಲ್ಲಿ ಉಂಟಾಗುವ ಹಲವು ವಿಧದ ಮರುಜೋಡಣೆಗಳಲ್ಲಿ ದ್ವಿಪ್ರತೀಕರಣವೂ ಒಂದು. ಈ ಇಮ್ಮಡಿಕೆಯು ಜೀನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಇದು ವಿಕೃತಿಗೂ ಕಾರಣವಾಗಬಹುದು.
gene duplication


logo