logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಜಲಾಂತರ್ಗಾಮಿ
(ತಂ) ಸಾಗರದ ನೀರಿನ ಮೇಲೂ ನೀರಿನಡಿಯೂ ಸಂಚರಿಸಬಲ್ಲ ಯುದ್ಧ ಹಡಗು. ನೀರಿನ ಅಡಿಯಲ್ಲಿ ದೀರ್ಘಕಾಲದವರೆಗೂ ನಿಲ್ಲಬಲ್ಲದು. ಗುಂಡು ಕಾಯ, ಚೂಪು ಕೊನೆ, ಚುಟ್ಟದಂತಹ ಆಕಾರ. ಹಡಗಿನ ಮಧ್ಯಭಾಗ ದಲ್ಲಿ ಇಡೀ ಹಡಗನ್ನು ಹತೋಟಿಯಲ್ಲಿಡುವ ಕಾನಿಂಗ್ ಟವರ್ (ವೀಕ್ಷಣ ಗೋಪುರ) ಇರುತ್ತದೆ. ಇದರಲ್ಲಿ ಸಮುದ್ರದ ಮೇಲಿನವರೆಗೂ ಹೋಗಿರುವ ಪರಿದರ್ಶಕ (ಪೆರಿಸ್ಕೋಪ್) ಇರುತ್ತದೆ. ಇದು ಈ ಹಡಗಿನ ಕಣ್ಣು. ಪರಮಾಣು ಶಕ್ತಿಚಾಲಿತ ಜಲಾಂತರ್ಗಾಮಿಗಳು ಅನೇಕ ತಿಂಗಳುಗಳ ಕಾಲ ನೀರಿನಡಿ ಇರಬಲ್ಲವು
submarine

ಜಲಾಂತರ್ದರ್ಶಕ
(ತಂ) ಜಲಾಂತರಾಳದಲ್ಲಿ ಸಾಕಷ್ಟು ದೂರ ಇರುವ ವಸ್ತುವನ್ನು ನೋಡಲು ಸಹಾಯಕವಾಗುವ ದರ್ಪಣ ಸಾಧನ. ಜಲದರ್ಶಕ
hydroscope

ಜಲಾನಯನ ಪ್ರದೇಶ
(ಭೂವಿ) ಹೊಳೆಯ ಕಣಿವೆಗೆ ಅಥವಾ ಜಲಾಶಯಕ್ಕೆ ನೀರೂಡುವ ಬೋಗುಣಿ ಆಕಾರದ ಹಿನ್ನೆಲೆ ಪ್ರದೇಶ/ನೆಲ
catchment area

ಜಲಾನಿಲ
(ರ) ಕಾದು ನಿಗಿನಿಗಿಯುತ್ತಿರುವ ಕಾರ್ಬನ್ (ಕೋಕ್) ಮೇಲೆ ಉಗಿ ವರ್ತಿಸಿದಾಗ ದೊರೆಯುವ ಇಂಧನಾನಿಲ. ಇದು ಕಾರ್ಬನ್‌ಮಾನಾಕ್ಸೈಡ್ ಮತ್ತು ಹೈಡ್ರೊಜನ್‌ಗಳ ಮಿಶ್ರಣ. ನೀರನ್ನು ಪೃಥಕ್ಕರಿಸಿ ಇಂಗಾಲದಿಂದ ಸಂಸ್ಕರಿಸಿ ಬೆಳಕಿಗಾಗಿ ಬಳಸುವ ಜಲಾನಿಲ
water gas

ಜಲಾನುವರ್ತನ
(ಸ) ಸಸ್ಯಗಳ ಬೇರು ನೀರಿಗೆ ಅಭಿಮುಖವಾಗಿ ಅಥವಾ ವಿಮುಖವಾಗಿ ತಿರುಗುವ ಪ್ರವೃತ್ತಿ
hydrotropism

ಜಲಾಭೇದ್ಯ
(ತಂ) ನೀರು ಪ್ರವೇಶಿಸದ. ಜಲನಿರೋಧಕ. ನೋಡಿ : ಜಲಬಂಧ
waterproof

ಜಲಾವರಣ
(ಭೂವಿ) ನದಿಯಲ್ಲಿ ನೀರಿನ ಮಟ್ಟ ಏರಿ ಪಕ್ಕಗಳಿಗೆ ಹೊರಳಿ, ಸಾಮಾನ್ಯವಾಗಿ ಮುಳುಗಡೆಯಾಗದಂಥ ಭೂಭಾಗಗಳ ಮೇಲೆ ಹರಡುವುದು. ನೆರೆ ನೀರು ತುಂಬುವುದು
inundation

ಜಲಾಶಯ
(ತಂ) ನೀರನ್ನು ಸಂಗ್ರಹಿಸಿಡಲು ನದಿಗೆ ಅಡ್ಡಲಾಗಿ ನಿರ್ಮಿಸಿದ ಕಟ್ಟೆ. ನೀರಿನ ಸಂಗ್ರಹಾಗಾರ
reservoir

ಜಲೋದರ
(ವೈ) ದೇಹದ ಊತಕದಲ್ಲಿ ಅಥವಾ ಕುಳಿಯಲ್ಲಿ ದ್ರವ ಅತಿ ಹೆಚ್ಚಾಗಿ ಸಂಗ್ರಹವಾಗುವುದು. ಶೋಫೆ
hydropsy

ಜಲೋದರ
(ವೈ) ಉದರ ಪರಿವೇಷ್ಟನ ಪಟಲದ ಕುಹರ ದಲ್ಲಿ ದ್ರವಸಂಚಯನ. ನಾನಾ ಕಾರಣಗಳಿಂದ ಉದರದಲ್ಲಿ ನೀರು ಸೇರಿಕೊಳ್ಳಬಹುದು. ಹೃದಯ ವೈಫಲ್ಯ, ಸಿರೆಗಳಲ್ಲಿ ರಕ್ತ ಪ್ರವಾಹಕ್ಕೆ ಅಡಚಣೆ, ಪ್ಲಾಸ್ಮಾ ಪ್ರೋಟೀನುಗಳ ನಷ್ಟ, ಯಕೃತ್ ನಾರುಗಟ್ಟುವಿಕೆ, ಅರ್ಬುದ, ಉದರದಲ್ಲಿ ತಲೆದೋರುವ ಸೋಂಕುಗಳು ಇತ್ಯಾದಿ ಪ್ರಮುಖ ಕಾರಣಗಳು. ಮಹೋದರ
ascites


logo