logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಚಾಚು ಸ್ನಾಯು
(ಪ್ರಾ) ದೇಹದ ಯಾವುದೇ ಭಾಗವನ್ನು ನೇರವಾಗಿ ಚಾಚುವಂತೆ ಮಾಡುವ ಸ್ನಾಯು
extensor

ಚಾಚೂರೆ
(ತಂ) ಗೋಡೆಯಿಂದ ಹೊರಚಾಚಿ ಏನನ್ನಾದರೂ ಹೊತ್ತಿರುವ ಆಧಾರ. ಚಾಚುದಿಮ್ಮಿ. ಕಾರ್ಬೆಲ್ಲು
corbel

ಚಾಟಿ ಹುಳು
(ಪ್ರಾ) ಟ್ರೈಕೂರಿಡೀ ಕುಟುಂಬಕ್ಕೆ ಸೇರಿದ ಪರಾವಲಂಬಿ ನೆಮಟೋಟ್ ಹುಳು. ಮನುಷ್ಯನ ದೊಡ್ಡ ಕರುಳಿನಲ್ಲಿ ಸೇರಿಕೊಂಡು ಅತಿಸಾರಕ್ಕೆ ಕಾರಣವಾಗುತ್ತದೆ
whip worm

ಚಾಟ್
(ಕಂ) ಅಂತರಜಾಲದಲ್ಲಿ ಕಂಪ್ಯೂಟರ್ ಬಳಕೆದಾರರು ಬೆರಳಚ್ಚು ಮಾಡುವ ಮೂಲಕ ಪರಸ್ಪರ ಸಂಭಾಷಿಸಲು ಅನುಕೂಲ ಮಾಡಿಕೊಡುವ ಸೌಲಭ್ಯ
chat

ಚಾಂದ್ರ ವಿವರಣೆ
(ಖ) ಚಂದ್ರನ ಮೇಲ್ಮೈ ಲಕ್ಷಣಗಳ ಅಧ್ಯಯನ
selenography

ಚಾಂದ್ರಮಾಸ
(ಖ) ಎರಡು ಕ್ರಮಾಗತ ಅಮಾವಾಸ್ಯೆ ಅಥವಾ ಹುಣ್ಣಿಮೆಗಳ ನಡುವಿನ ಅವಧಿ. ಸಾಮಾನ್ಯವಾಗಿ ೨೯ ದಿ ೧೨ ಗಂ ೪೪ ಮಿ ೨.೯ ಸೆ. ನೋಡಿ : ಯುತಿಮಾಸ
lunation

ಚಾಂದ್ರವಿಕಲ್ಪ
(ಖ) ಸೂರ್ಯನ ಆಕರ್ಷಣೆಯಿಂದ ಚಂದ್ರನ ಪಥಚಲನೆಯಲ್ಲಿ ಕಂಡುಬರುವ ನಾಲ್ಕು ಪ್ರಧಾನ ಭ್ರಮಣ ಅಸಮತೆಗಳ ಪೈಕಿ ದೊಡ್ಡದರ ಗಣಿತಶಾಸ್ತ್ರೀಯ ನಿರೂಪಣೆ
evection

ಚಾನೆಲ್
(ತಂ) ಒಂದು ಪ್ರಸಾರ ಕೇಂದ್ರದಿಂದ (ರೇಡಿಯೊ ಮತ್ತು ಟೆಲಿವಿಷನ್) ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಯೋಗ್ಯವಾದ ಸಂಜ್ಞೆಗಳನ್ನು ಒಯ್ಯಬಲ್ಲಷ್ಟು ಅಗಲವಾದ ಮತ್ತು ಸೀಮಿತವಾದ ತರಂಗ ಪಟ್ಟಿ
channel

ಚಾಪ
(ಗ) ವೃತ್ತಪರಿಧಿಯ ಅಥವಾ ಇತರ ವಕ್ರರೇಖೆಯ ಭಾಗ; ಕಂಸ (ಭೌ) ವಿದ್ಯುತ್ತನ್ನು ಒಂದು ವಾಹಕದಿಂದ ಇನ್ನೊಂದಕ್ಕೆ ಅಯಾನೀಕೃತ ಅನಿಲದ ಮೂಲಕ ರವಾನಿಸುವಾಗ ಪ್ರಕಟವಾಗುವ ಬೆಳಕಿನ ಬಾಗುಗೆರೆ
arc

ಚಾಪ ಕುಲುಮೆ
(ತಂ) ಕಾರ್ಬನ್ ಎಲೆಕ್ಟ್ರೋಡ್‌ಗಳ ನಡುವಿನ ವಿದ್ಯುಚ್ಚಾಪ ಉತ್ಪಾದಿಸುವ ತೀಕ್ಷ್ಣ ಉಷ್ಣದಿಂದ ಕ್ರಿಯಾಶೀಲವಾಗುವ ವಿದ್ಯುತ್ಕುಲುಮೆ
arc furnace


logo