logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಚರಸೋಪಾನ
(ತಂ) ಕೊನೆ ಇರದ ಸಾಗುಪಟ್ಟಿಗೆ ನೇರವಾಗಿ ಅಳ ವಡಿಸಿರುವ ಮೆಟ್ಟಿಲುಗಳ ಸಾಲು; ಸಾಗುಪಟ್ಟಿಯು ವಿದ್ಯುತ್ತಿನಿಂದ ಚಾಲಿತ ವಾದಾಗ ಮೆಟ್ಟಿಲುಗಳು ನಿರಂತರವೋ ಎಂಬಂತೆ ಮೇಲೆ-ಮೇಲೆ ಅಥವಾ ಕೆಳಗೆ-ಕೆಳಗೆ ಸಾಗುತ್ತಿರುವುವು
escalator

ಚರ್ಟ್
(ಭೂ) ಸ್ಪಂಜುಗಳಂಥ ಕೆಲವು ಸರಳ ಪ್ರಾಣಿಗಳ ದೇಹಾವಶೇಷಗಳಿಂದ ದೊರೆಯುವ sio2. ಅತಿ ಸೂಕ್ಷ್ಮ ಸ್ಫಟಿಕ ಗಳಿಂದ ರಚಿತವಾದ ಕಲ್ಲು, ಚಕಮಕಿಯಂಥ ಬೆಣಚು ಕಲ್ಲು
chert

ಚರ್ಮ
(ಪ್ರಾ) ಕಶೇರುಕಗಳಲ್ಲಿ ದೇಹದ ಹೊದಿಕೆ. ದೇಹದ ಒಳಗಿನ ದ್ರವಪದಾರ್ಥಗಳು ಹೊರಕ್ಕೆ ಸೋರಿಹೋಗದಂತೆ, ಬಾಹ್ಯ ಪದಾರ್ಥಗಳು ದೇಹದ ಒಳಕ್ಕೆ ಹೋಗದಂತೆ, ರಕ್ಷಣೆ ಒದಗಿಸುತ್ತದೆ. ಚರ್ಮಕ್ಕೆ ಗಾಯ ಆದಾಗಷ್ಟೆ ರೋಗಾಣುಗಳು ದೇಹವನ್ನು ಪ್ರವೇಶಿಸ ಬಲ್ಲವು. ಪಂಚೇಂದ್ರಿಯ ಗಳಲ್ಲಿ ಒಂದು. ಸ್ಪರ್ಶ ಸಂವೇದೀ ಅಂಗ. ದೇಹದ ಉಷ್ಣತೆಯ ನಿಯಂತ್ರಣ ದಲ್ಲಿ ಇದರದು ಮುಖ್ಯ ಪಾತ್ರ. ಸೂರ್ಯರಶ್ಮಿಯ ಅತಿನೇರಿಳೆ ಕಿರಣಗಳ ಸಹಾಯದಿಂದ ವೈಟಮಿನ್ ಡಿಯನ್ನು ಉತ್ಪಾದಿಸಿ ದೇಹಕ್ಕೆ ಒದಗಿಸುತ್ತದೆ. ಮನುಷ್ಯರಲ್ಲಿ ಚರ್ಮ ಸುಮಾರು ೨ ಮಿಮೀ ದಪ್ಪವಿರುತ್ತದೆ. ಹೊರ (ಅಧಿ) ಚರ್ಮ, ಒಳ (ನಿಜ) ಚರ್ಮ ಮತ್ತು ತ್ವಚದ ಕೆಳಊತಕ (ಮಾಲ್ಪೀಗಿಯನ್ ಪದರ) ಎಂದು ಮೂರು ಸ್ತರಗಳಿವೆ. ಹೊರ ಚರ್ಮವು ಊತಕಗಳಿಂದ ರೂಪಿತವಾಗಿದೆ. ಇದರಲ್ಲಿ ನರ ಅಥವಾ ರಕ್ತನಾಳ ಇರುವುದಿಲ್ಲ. ಒಳಚರ್ಮ ಪ್ರಧಾನವಾಗಿ ಯೋಜೀ ಸಂಯೋಜಕ ಊತಕಗಳಿಂದ ರೂಪಿತವಾಗಿದ್ದು ಆದ್ಯಂತ ನರಗಳಿಂದಲೂ ರಕ್ತನಾಳಗಳಿಂದಲೂ ಕೂಡಿರುತ್ತದೆ. ಎಲ್ಲ ಕಡೆಯೂ ಬೆವರು ಗ್ರಂಥಿಗಳ ಅತಿ ಸಣ್ಣ ರಂಧ್ರಗಳು ಇರುತ್ತವೆ. ನೋಡಿ: ಡರ್ಮಿಸ್
skin

ಚರ್ಮ ಕಸಿ
(ವೈ) ೧. ದೇಹದಲ್ಲಿ ಗಾಯವಾದ ಚರ್ಮ ಊತಕವನ್ನು ಸರಿಪಡಿಸುವ ಉದ್ದೇಶದಿಂದ, ದೇಹದ ಮತ್ತೊಂದು ಭಾಗದಲ್ಲಿರುವ ಆರೋಗ್ಯವಂತ ಚರ್ಮ ಊತಕವನ್ನು ತೆಗೆದು ಊನವಿರುವ ಭಾಗದಲ್ಲಿ ಬದಲಿ ಜೋಡಿಸುವುದು ಅಥವಾ ಅಲ್ಲಿ ಒಳನೆಡುವುದು. ನಾಟಿಯಲ್ಲಿ ಬಳಸುವ ಊತಕವನ್ನು ಮತ್ತೊಬ್ಬ ಮನುಷ್ಯನ ಒಡಲಿನಿಂದಲೂ ಪಡೆಯಬಹುದು. ಇದನ್ನು “ಸಮನಾಟಿ" ಎನ್ನುವರು. ಮನುಷ್ಯನ ಬದಲು, ಪ್ರಾಣಿಯಿಂದ ಊತಕವನ್ನು ಪಡೆದು ನಾಟಿ ಮಾಡಿದಲ್ಲಿ ಅದನ್ನು “ಹೆರನಾಟಿ" ಎನ್ನುವರು.
skin grafting

skin grafting

">

ಚರ್ಮ ಹದ
(ರ) ಟ್ಯಾನಿನ್, ಟ್ಯಾನಿಕ್ ಆಮ್ಲ ಅಥವಾ ಇತರ ಕಾರಕಗಳಿರುವ ವಸ್ತುಗಳ ಕ್ರಿಯೆಯಿಂದ ಕಚ್ಚಾ ತೊಗಲನ್ನು ಸಂಸ್ಕರಿಸುವುದು. ಕಚ್ಚಾ ತೊಗಲಿನ ಸಂಸ್ಕರಣ
tanning

ಚರ್ಮಕ್ಷಯ
(ವೈ) ನೋಡಿ: ಲ್ಯೂಪಸ್
lupus

ಚರ್ಮದ ಊತ
(ವೈ) ಹೊರತ್ವಚೆಯ ಉರಿಯೂತ
dermatitis

ಚರ್ಮಪ್ರಸಾಧನ
(ವೈ) ಮೃತ ಪ್ರಾಣಿಯ ಚಕ್ಕಳದೊಳಕ್ಕೆ ಮೆತ್ತೆ ಮೊದಲಾದವನ್ನು ತುಂಬಿ ಜೀವಂತವಾಗಿ ಕಾಣುವ ಹಾಗೆ ಆ ಪ್ರಾಣಿಯ ಪ್ರತಿರೂಪ ತಯಾರಿಸುವ ಕಲೆ
taxidermy

ಚರ್ಮವಿಜ್ಞಾನ
(ವೈ) ಚರ್ಮ ಮತ್ತು ಅದರ ರೋಗಗಳನ್ನು ಕುರಿತ ವೈದ್ಯ ವಿಜ್ಞಾನ ವಿಭಾಗ
dermatology

ಚರ್ಮಸುಲಿತ
(ವೈ) ಚರ್ಮದ ಮೇಲಿರುವ ನ್ಯೂನತೆಗಳನ್ನು ಸೂಕ್ತ ರೀತಿಯಲ್ಲಿ ಉಜ್ಜಿ ತೆಗೆಯುವ ಚಿಕಿತ್ಸೆ. ಇದೇ ರೀತಿಯ ಪರಿಣಾಮವನ್ನು ಪಡೆಯಲು ಹೆರೆಯುವ, ಸುಡುವ, ಗಾಯ ಮಾಡುವ, ರಾಸಾಯನಿಕವಾಗಿ ಸುಡುವ ವಿಧಾನಗಳನ್ನೂ ಬಳಸಬಹುದು. ಕೆಲವು ಸಲ ಇಂತಹುದೇ ಕ್ರಿಯೆಯನ್ನು ಇತರ ಅಂಗಗಳ ಮೇಲ್ಭಾಗದಲ್ಲೂ ಮಾಡಬಹುದು
excoriation


logo