logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಚಾಳೀಸು
(ವೈ) ನಾವು ಯಾವುದೇ ವಸ್ತುವನ್ನು ನೋಡುವಾಗ, ಆ ವಸ್ತುವಿನಿಂದ ಹೊರಡುವ ಬೆಳಕಿನ ಕಿರಣಗಳು ನಮ್ಮ ಕಣ್ಣಿನ ಪಾರಪಟಲದ ಮೂಲಕ ಹಾದು ಮಸೂರವನ್ನು ತಲಪುತ್ತವೆ. ಮಸೂರವು ಆ ಬೆಳಕಿನ ಕಿರಣಗಳನ್ನು ಬಾಗಿಸಿ ಅಕ್ಷಿಪಟಲದ ಮೇಲೆ ಕೇಂದ್ರೀಕರಿಸುತ್ತದೆ. ಇದನ್ನು ಅಕ್ಷಿನರವು ಮಿದುಳಿಗೆ ರವಾನಿಸಿ, ದೃಷ್ಟಿ ಅರ್ಥೈಸುವ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಬೆಳಕಿನ ಕಿರಣಗಳನ್ನು ಅಕ್ಷಿಪಟಲದ ಮೇಲೆ ನಾಭಿಸುವ ಮಸೂರದ ಕ್ರಿಯೆ ಬಹಳ ಮುಖ್ಯವಾದದ್ದು. ೪೦ ವರ್ಷಗಳು ಆಗುತ್ತಿರುವಂತೆಯೇ ಮಸೂರವು ತನ್ನ ನಮ್ಯತಾ ಗುಣವನ್ನು ಕಳೆದುಕೊಳ್ಳುತ್ತದೆ. ಇದರ ಫಲವಾಗಿ ಬೆಳಕಿನ ಕಿರಣಗಳ ನಾಭೀಕರಣವು ಅಕ್ಷಿಪಟಲದ ಹಿಂಭಾಗದಲ್ಲಿ ಮೂಡುತ್ತದೆ. ಹೀಗಾದಾಗ ವ್ಯಕ್ತಿ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ. ಆದರೆ ಸಮೀಪದ ವಸ್ತುಗಳು, ಅದರಲ್ಲೂ ಪುಸ್ತಕ ಹಿಡಿದುಕೊಂಡು ಓದುವಷ್ಟು ದೂರದಲ್ಲಿರುವ ವಸ್ತುಗಳು, ಅಷ್ಟು ಸ್ಪಷ್ಟವಾಗಿ ಕಾಣುವುದಿಲ್ಲ. ಇದೇ ಚಾಳೀಸು-ದೂರದೃಷ್ಟಿ (ದೋಷ)
presbyopia

ಚಿಕಿತ್ಸಾಲಯ
(ಸಾ) ದವಾಖಾನೆ. ರುಗ್ಣಾಲಯ. ಆಸ್ಪತ್ರೆ. ವಿಶೇಷ ಉದ್ದೇಶಕ್ಕಾಗಿಯೇ ಇರುವ ವೈದ್ಯಕೀಯ ಗೃಹ
clinic

ಚಿಕಿತ್ಸಾವಿಜ್ಞಾನ
(ವೈ) ರೋಗಗಳನ್ನು ನಿದಾನಿಸಿ ಯುಕ್ತ ಔಷಧಿಗಳ ನೆರವಿನಿಂದ ಗುಣಪಡಿಸುವ ವೈದ್ಯ ವಿಭಾಗ
therapeutics

ಚಿಕೊರಿ
(ಸ) ಆಸ್ಟರೇಸೀ ಕುಟುಂಬಕ್ಕೆ ಸೇರಿದ, ದಪ್ಪ ಬೇರಿನ ಮತ್ತು ನೀಲಿ ಹೂ ಬಿಡುವ ಮೂಲಿಕೆ ಸಸ್ಯ. ಸಿಕೊರಿಯಮ್ ಇಂಟಿಬಸ್ ವೈಜ್ಞಾನಿಕ ನಾಮ. ತವರು ಯೂರೋಪ್. ಇದರ ಬೇರನ್ನು ಖಾದ್ಯವಾಗಿ ಬಳಸುತ್ತಾರೆ. ಬೇರನ್ನು ಒಣಗಿಸಿ ಅದರ ಪುಡಿಯನ್ನು ಕಾಫಿ ಪುಡಿಗೆ ರುಚಿಗಾಗಿ ಬೆರೆಸುವುದುಂಟು. ಔಷಧೀಯ ಗುಣಗಳೂ ಉಂಟು
chicory

ಚಿಗಟ
(ಪ್ರಾ) ಸೈಫೊನಾಪ್ಟರ ಗಣಕ್ಕೆ ಸೇರಿದ ಕೀಟ. ಮನುಷ್ಯನ ಮತ್ತು ಇತರ ಪ್ರಾಣಿಗಳ ರಕ್ತಹೀರಿ ಜೀವಿಸುವ, ರೆಕ್ಕೆ ಇಲ್ಲದ ಸಣ್ಣನೆಯ ಹುಳು. ಉಗ್ರ ರೀತಿಯ ಸಾಂಕ್ರಾಮಿಕ ರೋಗಗಳ ಪ್ರಸಾರಕ. ಸುಮಾರು ೫೦೦ ಪ್ರಭೇದಗಳಿವೆ
flea

ಚಿಗರೆ
(ಪ್ರಾ) ಟೊಳ್ಳು ಕೊಂಬು, ಗೊರಸು ಇರುವ ಜಿಂಕೆ ಸದೃಶ ಪ್ರಾಣಿ. ರೋಮಂಥಿ; ಸಮಗೊರಸಿ ಗಣಕ್ಕೆ ಸೇರಿದೆ. ನೋಡಿ: ಜಿಂಕೆ
antelope

ಚಿಗುರು
(ಸ) ಎಳೆಯ ಕಾಂಡ ಭಾಗ. ಭೂಮಿ ಮೇಲಿರುವ ಸಸ್ಯದ ಆರಂಭಿಕ ಭಾಗ. ಕುಡಿ. ಅಂಕುರ
shoot

ಚಿಂಚಿಲ
(ಪ್ರಾ) ರಾಡೆನ್ಷಿಯ ಗಣದ ಚಿಂಚಿಲಿಡೀ ಕುಟುಂಬಕ್ಕೆ ಸೇರಿದ ಒಂದು ಸಸ್ಯಾಹಾರಿ ಸ್ತನಿ. ಚಿಂಚಿಲ ಲ್ಯಾನಿಗರ್ ವೈಜ್ಞಾನಿಕ ನಾಮ. ಪೆರು, ಚಿಲಿ, ಬೊಲೀವಿಯ ಪ್ರದೇಶಗಳಲ್ಲಿ ವಾಸಿಸುವ ಚಿಕ್ಕ ದಂಶಕ
chinchilla

ಚಿತೆ
(ಸಾ) ದಹ್ಯ ವಸ್ತುಗಳ ರಾಶಿ; ಮುಖ್ಯವಾಗಿ ಹೆಣ ಸುಡುವ ಕಟ್ಟಿದ ಉರುವಲಿನ ಒಡ್ಡು. ಬೆಂಕಿ
pyre

ಚಿತ್ತಕ್ಷೀಣತೆ
(ವೈ) ನೋಡಿ: ಮನೋವೈಕಲ್ಯ
dementia


logo