logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಚಾಲಕ ಚಕ್ರ
(ತಂ) ಎಂಜಿನ್‌ನಿಂದ ಚಾಲನ ಸಾಮರ್ಥ್ಯ ಪಡೆಯುವ ಪ್ರಧಾನ ಚಕ್ರ. ಇದು ಆವರ್ತಿಸಿ ಯಂತ್ರದ ಇತರ ಭಾಗಗಳಿಗೆ ಚಾಲನೆಯನ್ನು ವರ್ಗಾಯಿಸುತ್ತದೆ
driving wheel

ಚಾಲಕ ತಿಮಿ
(ಪ್ರಾ) ಸಿಟೇಸಿಯ ಗಣ, ಒಡಾಂಟೋಸಿಬೈಲ್ ಉಪಗಣ, ಡೆಲ್ಫಿಡಿನೀ ಕುಟುಂಬಕ್ಕೆ ಸೇರಿದ ತಿಮಿಂಗಿಲ. ವೈಜ್ಞಾನಿಕ ನಾಮ ಗ್ಲೋಬಿಸೆಫಲ. ಗೋಳಾಕಾರದ ತಲೆ. ಸಂಘ ಜೀವಿ. ಗುಂಪಿಗೆ ನಾಯಕತ್ವ ನೀಡುವ ಇದರ ಪ್ರವೃತ್ತಿಯಿಂದಾಗಿ ಇದಕ್ಕೆ ಈ ಹೆಸರು. ಡಾಲ್ಫಿನ್‌ಗಳ ಹತ್ತಿರ ಸಂಬಂಧಿ. ಆಯಸ್ಸು ಸುಮಾರು ೫೦ ವರ್ಷ
pilot whale

ಚಾಲಕ ದಂಡ
(ತಂ) ಮೋಟರ್/ಎಂಜಿನ್‌ನಿಂದ ಶಕ್ತಿಯನ್ನು ಯಂತ್ರದ ಮಿಕ್ಕ ಭಾಗಗಳಿಗೆ ಸಾಗಿಸುವ ಸಾಧನ
driving shaft

ಚಾಲಕ ನರ
(ವೈ) ಸ್ನಾಯು ಚಟುವಟಿಕೆಯನ್ನು ಪ್ರೇರಿಸುವ ನರ. ಮೋಟರ್ ನರ
motor nerve

ಚಾಲಕದಂತ
(ತಂ) ತನ್ನಂಥ ಮತ್ತೊಂದರಿಂದ ಚಲನೆಯನ್ನು ಪಡೆಯಲೂ ಅದಕ್ಕೆ ಚಲನೆ ಯನ್ನು ಕೊಡಲೂ ಸಾಧ್ಯವಾಗು ವಂತೆ ರೂಪಿಸಿರುವ ಚಕ್ರದ ಮೇಲಣ ಅಥವಾ ಕಂಬಿಯ ಪಕ್ಕದ ಗುಬುಟು. ಎರಡು ಚಾಲಕದಂತಗಳು ಅಡಕವಾಗಿ ಕೂಡಿಕೊಂಡಿರುವಾಗ ಒಂದಕ್ಕೆ ನೀಡಿದ ಚಾಲನೆ ಇನ್ನೊಂದಕ್ಕೂ ವರ್ಗವಾಗುವುದು. ಕಂಬಿ ಹಲ್ಲು. ಗಿಯರ್ ಹಲ್ಲು. ಹಲ್ಲು ಚಕ್ರ
cog

ಚಾಲನ
(ಪ್ರಾ) ಪ್ರಾಣಿಯ ಅಥವಾ ವಾಹನದ ಚಲನೆಯಂತೆ ಪುರೋಗಾಮಿಯಾದ ಚಲನೆ. ಗಮನ
locomotion

ಚಾಲನಾ ನೆಲೆಗಳು
(ವೈ) ಮಿದುಳಿನಲ್ಲಿ ಅಂಗಾಂಗಗಳ ಚಲನೆಗೆ ಸಂಬಂಧಿಸಿದ ಕ್ಷೇತ್ರ. ಸಾಮಾನ್ಯವಾಗಿ ಪಂಚೇಂದ್ರಿಯಗಳ ಮೂಲಕ ಹೊರಜಗತ್ತಿನ ಮಾಹಿತಿಯು ಮಿದುಳಿಗೆ ಸಂವೇದನಾ ನರಗಳ ಮೂಲಕ ರವಾನೆಯಾಗುತ್ತದೆ. ಈ ಮಾಹಿತಿಯನ್ನು ವಿಶ್ಲೇಷಿಸುವ ಮಿದುಳು, ಅದಕ್ಕೆ ಸೂಕ್ತವಾದ ಪ್ರತಿಕ್ರಿಯೆಯನ್ನು ರೂಪಿಸಿ, ಅದನ್ನು ಚಾಲನಾ ಕ್ಷೇತ್ರಕ್ಕೆ ರವಾನಿಸುತ್ತದೆ. ಮಾಹಿತಿಯು ಚಾಲನಾ ಕ್ಷೇತ್ರದಿಂದ ಹೊರಡುವ ನರಗಳ ಮೂಲಕ ದೇಹದ ಅವಯವಗಳಲ್ಲಿರುವ ಸ್ನಾಯುಗಳನ್ನು ತಲಪಿ, ಅವುಗಳಲ್ಲಿ ಅಗತ್ಯ ಐಚ್ಛಿಕ ಚಲನೆ ಯನ್ನು ಉಂಟುಮಾಡುತ್ತವೆ. ಚಾಲನಾ ಕ್ಷೇತ್ರಗಳು
motor areas

ಚಾಲೆಂಜರ್ ಡೀಪ್
(ಸಾವಿ) ಪಶ್ಚಿಮ ಪೆಸಿಫಿಕ್ ಸಾಗರದ ಮೇರಿಯಾನ ಕಮರಿಯ ಅತ್ಯಂತ ಆಳವಾದ ಭಾಗ. ೧೧,೦೦೦ ಮೀ. ಆಳ. ಚಾಲೆಂಜರ್ ನೌಕೆಯಿಂದ ಇದರ ಆಳವನ್ನು ಪತ್ತೆ ಹಚ್ಚಿದುದರಿಂದ ಇದಕ್ಕೆ ಈ ಹೆಸರು
challenger deep

ಚಾಲ್ಸೆಡಿನಿ
(ಭೂವಿ) ಬೆಣಚುಕಲ್ಲಿನ ಒಂದು ಸೂಕ್ಷ್ಮ ಸ್ಫಟಿಕೀಯ ಬಗೆ. ಪ್ರಶಸ್ತ ರತ್ನವಾಗಿ ಬಳಕೆ
chalcedeny

ಚಾವಣಿ
(ತಂ) ಕಟ್ಟಡ ಅಥವಾ ಅಂತಹುದೇ ರಚನೆಯ ಮೇಲಿನ ಆವರಣ. (ಭೂವಿ) ಅದಿರು ನಿಕ್ಷೇಪದ ಮೇಲಿರುವ ಬಂಡೆ. ಅಗ್ನಿಶಿಲೆ ಅಂತಃಸರಣದ ಮೇಲ್ಮೈ ಸುತ್ತ ಅಂಚು ಕಟ್ಟಿರುವ ಅದಿರುಗಲ್ಲು (ಲೋಹದ ಅದಿರಿರುವ ಶಿಲೆ)
roof


logo