logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಐಸೊಮೆಟ್ರಿಕ್
(ಸಾ) ಅಳತೆಗಳು ಸಮವಾಗಿರುವ. ಸಮಮಾಪನೀಯ. (ಭೂವಿ) ಪರಸ್ಪರ ಲಂಬವಾಗಿರುವ ಮೂರು ಸಮ ಅಕ್ಷಗಳುಳ್ಳ (ಸ್ಫಟಿಕ ವರ್ಗ). ಉದಾ: ಅಡುಗೆ ಉಪ್ಪು ತ್ರಿಸಮಲಂಬಾಕ್ಷಿ. (ವೈ) ಎರಡು ತುದಿ ಸ್ಥಾನಗಳೂ ಸ್ಥಿರವಾಗಿದ್ದು ಸ್ನಾಯುವಿನ ಉದ್ದ ಹೆಚ್ಚೇನೂ ವ್ಯತ್ಯಾಸವಾಗದೆ ತುಯ್ತ ಮಾತ್ರ ಹೆಚ್ಚಾಗಿರುವ ಸ್ನಾಯು ಸಂಕೋಚನ. (ಗ) ಆಕೃತಿ ಬದಲಾಯಿಸದಿರುವ ಪರಿವರ್ತನೆ. (ಭೌ) ಗಾತ್ರ ಸ್ಥಿರವಾಗಿದ್ದಾಗ ಇತರ ಎರಡು ವ್ಯತ್ಯಯೀ ಭೌತಿಕ ಗುಣಗಳ (ಉದಾ : ಉಷ್ಣತೆ ಹಾಗೂ ಎಂಟ್ರೊಪಿ ಅಥವಾ ಉಷ್ಣತೆ ಹಾಗೂ ಒತ್ತಡ) ನಡುವಿನ ಸಂಬಂಧ ಸೂಚಿಸುವ ರೇಖೆ
isometric

ಐಸೊಮೆರಿಸಮ್
(ರ) ಒಂದೇ ಅಣುಸೂತ್ರ ವಿರುವ, ಆದರೆ ಅಣುವಿನೊಳಗಿನ ಪರಮಾಣುಗಳ ವಿಭಿನ್ನ ಅಳವಡಿಕೆಯ ಕಾರಣವಾಗಿ ಬೇರೆ ಬೇರೆ ಗುಣಗಳಿರುವ ಎರಡು ಅಥವಾ ಅಧಿಕ ರಾಸಾಯನಿಕ ಸಂಯುಕ್ತಗಳ ಅಸ್ತಿತ್ವ. ಸಮಾಂಗತೆ. ಉದಾ : ಅಮೋನಿಯಮ್ ಸಯನೇಟ್ NH4 CNO ಮತ್ತು ಯೂರಿಯ CO(NH2)2 ಐಸೊಮೆರ್‌ಗಳು (ಸಮಾಂಗಿಗಳು). ಈಥೈಲ್ ಆಲ್ಕಹಾಲ್ (CH3.CH2.OH) ಮತ್ತು ಡೈಮಿಥೈಲ್ ಈಥರ್ ಐಸೊಮೆರ್‌ಗಳು
isomerism

ಐಸ್ಲಂಡ್ ಸ್ಪಾರ್
(ರ) ದ್ವಿವಕ್ರೀಭವನ ಗುಣವುಳ್ಳ ನೈಸರ್ಗಿಕ ಕ್ಯಾಲ್ಸಿಯಂ ಕಾರ್ಬೊನೇಟ್ (CaCO3- ಕ್ಯಾಲ್ಸೈಟ್)ನ ಅತ್ಯಂತ ಶುದ್ಧ ಪಾರಕ ಹಾಗೂ ಸ್ಫಟಿಕ ರೂಪ. ಇದನ್ನು ಮೊದಲು ಐಸ್ಲಂಡ್‌ನಿಂದ ತರಲಾಯಿತು. ಇದರ ಪರಿಪೂರ್ಣ ಸೀಳುಗಳು ಹಾಗೂ ದ್ವಿವಕ್ರೀಭವನ ಗಮನಾರ್ಹ. ಧ್ರುವೀಕೃತ ಬೆಳಕು ವೀಕ್ಷಣೆಯ ನಿಕೋಲ್ ಅಶ್ರಗ ತಯಾರಿಕೆಯಲ್ಲಿ ಬಳಕೆ
iceland spar


logo