logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಐಸೊಗ್ರಾಫ್
(ತಂ) ಕೋನಮಾಪಕ ಮತ್ತು ತ್ರಿಕೋನ ಪಟ್ಟಿ ಇವೆರಡರ ಕ್ರಿಯೆಗಳನ್ನೂ ಜೊತೆಗೂಡಿಸಿ ಕೊಂಡ ಸಲಕರಣೆ
isograph

ಐಸೊಝೈಮುಗಳು
(ಪ್ರಾ) ಒಂದೇ ಬಗೆಯ ಪ್ರಾಣಿಯಲ್ಲಿ ಒಂದೇ ಕಿಣ್ವಕ್ಕೆ ಅನೇಕ ಬಗೆಯ ರಚನೆಗಳಿದ್ದಾಗ ರೂಪುಗೊಳ್ಳುವ ಘಟಕಗಳು. ಪ್ರೋಟೀನ್‌ಗಳ ಚತುರ್ಥ ಮಟ್ಟದ ರಚನೆ ಇವುಗಳಿಗೆ ಆಧಾರಭೂತ. ಕೋಳಿಯಲ್ಲಿ ಈ ಕಿಣ್ವ ವಿಶೇಷವಾಗಿ ಕಾಣಬರುತ್ತದೆ
isozymes

ಐಸೊಟೈಪ್
(ಜೀ) ಜೀವಿ ಸಂಕುಲದಲ್ಲಿ ಸಣ್ಣಪುಟ್ಟ
isotype

ಐಸೊಟೋನ್‌ಗಳು
(ಭೌ) ನ್ಯೂಕ್ಲಿಯಸ್‌ನಲ್ಲಿ ನ್ಯೂಟ್ರಾನ್‌ಗಳ ಸಂಖ್ಯೆ ಒಂದೇ ಆಗಿದ್ದು ಭಿನ್ನ ಪರಮಾಣು ಸಂಖ್ಯೆ ಇರುವ ಪರಮಾಣುಗಳು. ಉದಾ: ಸ್ಟ್ರಾನ್ಷಿಯಮ್-೮೮ ಹಾಗೂ ಯಿಟ್ರಿಯಮ್-೮೯ (ಇವೆರಡೂ ೫೦ ನ್ಯೂಟ್ರಾನ್‌ಗಳಿಂದ ಕೂಡಿವೆ) ಸಹಜಲಭ್ಯ ಐಸೊಟೋನ್‌ಗಳು
isotones

ಐಸೊಟೋಪ್
(ರ) ನೋಡಿ: ಸಮಸ್ಥಾನಿ
isotope

ಐಸೊಥರ್ಮ
(ಭೌ) ಒಂದೇ ಮಟ್ಟದ ಉಷ್ಣತೆಯಲ್ಲಿ ನಡೆಸುವ ಅಧ್ಯಯನ
isotherma

ಐಸೊಪ್ರೀನ್
(ರ) CH2=C(CH3). CH=CH2. ನಿರ್ವರ್ಣ ದ್ರವ. ಕುಬಿಂ ೩೭0 ಸೆ. ರಬ್ಬರಿನ ವಿನಾಶಕ ಬಟ್ಟೀಕರಣ ದಿಂದ, ಪ್ರೋಪೆನ್‌ನಿಂದ ೨-ಮಿಥೈಲ್ ಬ್ಯುಟೇನಿನ ಡಿಹೈಡ್ರೊಜನೀ ಕರಣದಿಂದ ಹಾಗೂ ಇತರ ವಿಧಾನಗಳಿಂದ ಪಡೆಯಬಹುದು. ಸಂಶ್ಲೇಷಿತ ರಬ್ಬರ್‌ನ ತಯಾರಿಕೆಯಲ್ಲಿ ಬಳಕೆ
isoprene

ಐಸೊಫೇನ್
(ಜೀ) ಗೊತ್ತಾದ ಪ್ರಾಂತದಲ್ಲಿ ಹವೆಯನ್ನು ಅವಲಂಬಿಸಿದಂಥ ಯಾವುದೇ ಘಟನೆ ಜರಗುವ. ಉದಾ: ಒಂದೇ ಕಾಲದಲ್ಲಿ ಹೂ ಬಿಡುವ, ನಿರ್ದಿಷ್ಟ ಪ್ರದೇಶಗಳನ್ನು ಸಂಬಂಧಿಸುವ ಆಲೇಖದ ಮೇಲಿನ ರೇಖೆ
isophane

ಐಸೊಬಾರ್
(ಪವಿ) ದತ್ತ ಕ್ಷಣದಲ್ಲಿ ಒಂದೇ ವಾಯುಮಂಡಲ ಒತ್ತಡವಿರುವ ನೆಲೆಗಳನ್ನು ಸೇರಿಸುವ ವಕ್ರರೇಖೆ. (ರ) ಒಟ್ಟು ಪ್ರೋಟಾನ್‌ಗಳ ಹಾಗೂ ನ್ಯೂಟ್ರಾನ್‌ಗಳ ಸಂಖ್ಯೆ ಒಂದೇ ಆಗಿದ್ದು ಅದೇ ರಾಶಿ ಸಂಖ್ಯೆ ಮತ್ತು ಸರಿಸುಮಾರು ಅದೇ ಪರಮಾಣುರಾಶಿ ಇರುವ ನ್ಯೂಕ್ಲೈಡ್‌ಗಳ ಪೈಕಿ ಒಂದು. ಉದಾ: ಹೈಡ್ರೊಜನ್ ಹಾಗೂ ಹೀಲಿಯಮ್‌ಗಳ ಸಮಸ್ಥಾನಿಗಳು 13H, 23He. ತವರದ 11550 Sn ಮತ್ತು ಇಂಡಿಯಮ್‌ನ 115 49 In ಸಮಸ್ಥಾನಿಗಳು
isobar

ಐಸೊಮಾರ್ಫಿಸಮ್
(ಗ) ಒಂದು ಬೀಜ ಗಣಿತೀಯ ವ್ಯವಸ್ಥೆಯಿಂದ ಮತ್ತೊಂದನ್ನು ೧:೧ ಸಂಬಂಧ ಇರುವಂತೆ ನಕ್ಷಿಸುವುದು. ಎರಡು ವ್ಯವಸ್ಥೆಗಳೂ ಒಂದೇ ಅಮೂರ್ತ ರಚನೆಯುಳ್ಳವೆಂದು ಇದು ತೋರಿಸುತ್ತದೆ. ಅನುರೂಪತೆ. (ಸಾ) ಸಮರೂಪತೆ. ಸಮಾಕಾರತೆ. ಹೊರ ಆಕೃತಿ ಒಂದೇ ಆಗಿರುವುದು
isomorphism


logo