logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಂಡೊಸ್ಕೋಪ್
(ವೈ) ಆಂತರಿಕ ಅಂಗಗಳ ಪ್ರತ್ಯಕ್ಷ ವೀಕ್ಷಣೆಗೆ ಬಳಸುವ ಸಲಕರಣೆ. ಉದಾ: ಜಠರದರ್ಶಕ. ಶ್ವಾಸಕೋಶದರ್ಶಕ. ಅಂತರ್ದರ್ಶಕ
endoscope

ಎಂಡೊಸ್ಪರ್ಮ್
(ಗ) ಬೀಜ ಮೊಳೆತು ಸಸಿಯಾಗುವ ಮೊದಲಹಂತಗಳಲ್ಲಿ ಭ್ರೂಣದ ಪೋಷಣೆಗಾಗಿ ಬಳಕೆಯಾಗುವ ಆಹಾರ ಪದಾರ್ಥ. ಬೀಜದೊಳಗೆ ಸಂಗ್ರಹವಾಗಿರುತ್ತದೆ
endosperm

ಎಂಡೊಸ್ಪೋರ್
(ಸ) ೧. ಬೀಜಕ ಭಿತ್ತಿಯ ಅತ್ಯಂತ ಒಳಪದರ. ೨. ಬ್ಯಾಕ್ಟೀರಿಯ ಕೋಶದೊಳಗೆ ರೂಪುಗೊಳ್ಳುವ ಮತ್ತು ಅತಿರೋಧದ ಗಾಢ ಭಿತ್ತಿ ಇರುವ ಬೀಜಕ. ಅಂತರ್ ಬೀಜಕ. ೩. ಜನಕಕೋಶದ ಒಳಗಡೆ, ಅಥವಾ ಅದರ ಒಳ ದ್ರವ್ಯದ ವಿಭಜನೆಯಿಂದ ಉತ್ಪಾದನೆಯಾಗುವ, ಬೀಜಕ. ಬೀಜದಲ್ಲಿ ಭ್ರೂಣಕ್ಕಾಗಿ ಸಂಗ್ರಹವಾಗಿರುವ ಪೋಷಕ ವಸ್ತುಗಳು
endospore

ಎಂಡೋಟಾಕ್ಸಿನ್
(ಜೀ) ಬ್ಯಾಕ್ಟೀರಿಯಾಂತರ್ಗತ ವಿಷ. ಬ್ಯಾಕ್ಟೀರಿಯಾ ಕೋಶಗಳು ಮಡಿದ ಬಳಿಕ ಇದು ಬಿಡುಗಡೆ ಗೊಳ್ಳುವುದು. ಹೀಗೆ ಅಂತರ್ವಿಷಗಳಿಂದ ಹರಡುವ ರೋಗಗಳಿಗೆ ನಿದರ್ಶನ ವಿಷಮಶೀತಜ್ವರ (ಟೈಫಾಯ್ಡ್) ಮತ್ತು ವಾಂತಿ ಭೇದಿ (ಕಾಲರಾ). ಅಂತರ್ವಿಷ
endotoxin

ಎಂಡೋನ್ಯೂಕ್ಲಿಯೇಸ್
(ಜೀ) ಪಾಲಿ ನ್ಯೂಕ್ಲಿಯೊಟೈಡ್ ಸರಪಳಿಯೊಂದರ ಮಧ್ಯದಲ್ಲಿ ತುಂಡರಿಸುವ ಕಿಣ್ವ. (ರ) ನ್ಯೂಕ್ಲಿಯಿಕ್ ಆಮ್ಲಗಳಲ್ಲಿ ಆಂತರಿಕ ಬಿರುಕಾಗುವ ಪ್ರಕ್ರಿಯೆಯ ವೇಗವನ್ನು ವರ್ಧಿಸುವ ಕಿಣ್ವ
endonuclease

ಎಣ್ಣೆ ಸ್ಟವ್
(ತಂ) ಎಣ್ಣೆಯನ್ನು ಉರುವಲಾಗಿ ಬಳಸುವ ಒಲೆ. ಅಡುಗೆ ಮಾಡಲು ಬಳಕೆ
oil stove

ಎಂತಾಲ್ಪಿ
(ಭೌ) ೧ ಮೋಲ್ ಸಂಯುಕ್ತದಲ್ಲಿ ಉಷ್ಣತೆ, ಒತ್ತಡ ಮತ್ತು ಗಾತ್ರದಿಂದ ಸಂಚಿತವಾಗಿರುವ ಉಷ್ಣ ಶಕ್ತಿ. (heat content) ಇದನ್ನು h ಪ್ರತೀಕದಿಂದ ಸೂಚಿಸುವುದು ರೂಢಿ. ಇದರ ನಿರೂಪಣೆ h=e+pv. ಇಲ್ಲಿ e ಮಂಡಲದ ಆಂತರಿಕ ಶಕ್ತಿ , p ಒತ್ತಡ ಮತ್ತು v ಗಾತ್ರ. ಎಸ್‌ಐ ಮಾನಕದಲ್ಲಿ ೧ ಜೂಲ್
enthalpy

ಎತ್ತರ ಭೂಮಿ
(ಭೂವಿ) ತಗ್ಗು ಪ್ರದೇಶದ ಪಕ್ಕದಲ್ಲಿ ಪ್ರಮುಖವಾಗಿ ಎದ್ದುಕಾಣುವಂತೆ ಇರುವ ಯಾವುದೇ ವಿಶಾಲ ವಾದ ಎತ್ತರದ ಇಲ್ಲವೇ ಪರ್ವತೀಯ ಪ್ರದೇಶ. ಪ್ರಸ್ಥಭೂಮಿ
highland

ಎತ್ತು ಪಂಪು
(ತಂ) ನೀರು ಅಥವಾ ಇನ್ನಾವುದೇ ದ್ರವವನ್ನು ಕೆಳಮಟ್ಟದಿಂದ ಮೇಲಕ್ಕೆ ಎತ್ತುವ ರೇಚಕ
lift pump

ಎತ್ತು ಯಂತ್ರ
(ತಂ) ನೋಡಿ : ವಿಂಚ್
winch


logo