logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಸಿ
(ಭೌ) ನೋಡಿ : ಪರ್ಯಾಯಕ ಪ್ರವಾಹ
ac

ಎಸ್ಕರ್
(ಭೂವಿ) ಹಿಂದೆ ನೀರ್ಗಲ್ಲು ನದಿಗಳಿದ್ದ ಕಡೆ, ಸುತ್ತಮುತ್ತಲ ಮೇಲ್ಮೈ ಲಕ್ಷಣಗಳಿಗೆ ಭಿನ್ನವಾಗಿ ಎದ್ದುನಿಂತ, ಮರಳು ಮತ್ತು ನುರುಜುಗಲ್ಲುಗಳಿಂದ ಕೂಡಿದ ನಿಡಿದಾದ ಗುಡ್ಡಸಾಲು. ಉದಾ : ಐರ್ಲೆಂಡಿನಲ್ಲಿ ಕಂಡುಬರುವಂಥದು
esker

ಎಸ್ಕಲೇಟರ್
(ತಂ) ನೋಡಿ: ಚರ ಸೋಪಾನ
escalator

ಎಸ್ಕೇಪ್‌ಮೆಂಟ್
(ತಂ) ಗಡಿಯಾರದಲ್ಲಿ ಚಾಲಕ ನಿಯಂತ್ರಕ ಗಳನ್ನು ಸಂಬಂಧಿಸುವ ಸಲಕರಣೆ. ಚಲನೆಯನ್ನು ಒಂದೇ ದಿಕ್ಕಿನಲ್ಲಿ ನಿಧಾನ ವಾಗಿ ಹೋಗಗೊಡುವ ತಡೆಹಲ್ಲು ಸಾಧನ. ಸಂಯೋಜಕ. ಸಂಬಂಧಕ
escapement

ಎಸ್ಟರ್
(ರ) ಕಾರ್ಬಾಕ್ಸಿಲಿಕ್ ಆಮ್ಲ ದೊಂದಿಗೆ ಆಲ್ಕಹಾಲ್ ವರ್ತಿಸಿದಾಗ ಆಮ್ಲದ ಅಂಶ ಹೈಡ್ರೊ ಕಾರ್ಬನ್ ವೃಂದದೊಂದಿಗೆ ವಿನಿಮಯಗೊಂಡು ರೂಪುಗೊಳ್ಳುವ ಆರ್ಗ್ಯಾನಿಕ್ ಸಂಯುಕ್ತ ವಸ್ತು. ಅನೇಕ ಎಸ್ಟರ್‌ಗಳು ಪರಿಮಳಯುಕ್ತ ವಾಗಿರುವುದರಿಂದ ಅವನ್ನು ಹಣ್ಣಿನ ರಸಗಳಿಗೆ ರುಚಿ ಹಾಗೂ ಸುವಾಸನೆ ನೀಡಲು ಬಳಸಲಾಗುತ್ತದೆ
ester

ಎಸ್ಪಿರಾಂಟೋ
(ಸಾ) ಪೋಲೆಂಡಿನ ಭಾಷಾ ವಿಜ್ಞಾನಿ ಎಲ್. ಎಲ್. ಝಾಮೆನ್‌ಹಾಫ್ ಎಂಬಾತ ಎಸ್ಪಿರಾಂಟೊ (ಸಹಾಯ ಮಾಡುವಾತ ಎಂದರ್ಥ) ಎಂಬ ಕಾವ್ಯನಾಮದಿಂದ ೧೮೮೭ರಲ್ಲಿ ರೂಪಿಸಿದ ಭಾಷೆ. ಯೂರೋಪಿನ ಪ್ರಧಾನ ಭಾಷೆಗಳಲ್ಲಿನ ಪದಗಳನ್ನು ಆಧರಿಸಿಕೊಂಡು ಎಲ್ಲ ದೇಶಗಳ ಜನರ ಮಾಧ್ಯಮವಾಗಲೆಂದು ರಚಿಸಿದ ಕೃತಕ ಅಂತರರಾಷ್ಟ್ರೀಯ ಭಾಷೆ
esperanto

ಎಳೆಗರಿ
(ಪ್ರಾ) ಸಣ್ಣ ತುಪ್ಪಳು ಗರಿ
plumule


logo