logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Banding wheel or whirler
Small wheel turned by direction action of the hand used for cooling and decoration pots
ಕೈಯಿಂದ ತಿರುಗಿಸಬಹುದಾದ ಕುಂಬಾರನ ಕೈತಿಗುರಿ, ಮಣ್ಣನ್ನು ಸುರುಳಿ ಮಾಡಲು ಹಾಗೂ ಕುಂಭ ವಸ್ತುಗಳನ್ನು ಆಲಂಕರಣ ಮಾಡಲು ಈ ತಿಗುರಿಯನ್ನು ಬಳಸುವರು.

Basalt ware
A high fired unglazed body coloured with oxides and left unglazed used in the 18thcentury most famously by Josiah wedgood
ಹೆಚ್ಚಿನ ತಾಪಮಾನದಲ್ಲಿ ಸುಟ್ಟ ಹೊಳಪುರಹಿತವಾದ ಕುಂಭ ವಸ್ತು. 1768ರಲ್ಲಿ ಪ್ರಸಿದ್ಧ ಇಂಗ್ಲೀಷ್ ಕುಂಭ ತಜ್ಞ ಜೋಷೈ ವೆಡ್ಗವುಡ್ ಈ ಕಪ್ಪು ಪಿಂಗಾಣಿಯನ್ನು ಬೆಳಕಿಗೆ ತಂದನು.

Basin
A wide-open vessel or dish
ಬೋಗುಣಿ, ಬಾನೆ, ಗಂಗಾಳ, ಅಗಲಬಾಯಿಯ ಮಣ್ಣಿನ ಪಾತ್ರೆ.

Batt
A tile made from highly refractory material used for kiln shelves. A plaster disc used for throwing on the wheel
ಆವಿಗೆಯಲ್ಲಿಡುವ ಕಪಾಟಿಗೆ (ರ್ಯಾಕ್) ಅಗ್ನಿ ನಿರೋಧಕ ಮಣ್ಣಿನಿಂದ ಮಾಡಿದ ಹಂಚು. ಚಕ್ರದಲ್ಲಿ ಗೇಯುವಾಗ ಬಳಸುವ ಅಗಲನೆಯ ಡಿಸ್ಕ, ಹಸಿ ಮಡಕೆಗಳು ಬೀಳದಂತೆ ಇಡಲು ಮಾಡಿದ ಸಾಧನ

Bat wash
A coating refractory material(Alumina and water applied to a kiln bat to protect it from drops of glase and also to prevent pots from sticking to it during firing
ಕುಂಭ ವಸ್ತುಗಳನ್ನು ಆವಿಗೆಯಲ್ಲಿಟ್ಟು ಸುಡುವ ಮುನ್ನ ಅಗ್ನಿ ನಿರೋಧಕ ಮಿಶ್ರಣವನ್ನು ಆವಿಗೆಯ ಕಪಾಟುಗಳಿಗೆ ಲೇಪಿಸುವುದು. ಇದರಿಂದ ಕಂಭ ವಸ್ತುಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.

Bead
A little clay ball, a necklace of beads
ಮಣಿ, ಮಣಿಸರ ಹರಪ್ಪ ಮೊಹಂಜದಾರೋ ಉತ್ಖನನದಲ್ಲಿ ಕೊರಳಿಗೆ ಹಾಕಿಕೊಳ್ಳುವ ಮಣ್ಣಿನ ಮಣಿಸರ ದೊರೆತಿವೆ. ಎನಾಮಿಲ್ ಮಾಡಿದಮಣ್ಣಿನ ಮಣಿಸರಗಳನ್ನು ಅಲಂಕಾರಕ್ಕಾಗಿ ಹೆಂಗಸರು ಧರಿಸುವರು.

Beaker
A large drinking bowl or cup
ಕುಡಿಯುವ ದೊಡ್ಡ ಬಟ್ಟಲು, ಕೊಕ್ಕು ಪಾತ್ರೆ.

Beating
Hitting a pot with a paddle or a stick to shape it
ಸೊಳದಿಂದ ಗಡಿಗೆ ಬಡಿಯುವುದು, ತಟ್ಟುವುದು, ತಿಗುರಿಯಿಂದಾಲಗಲಿ, ಕೈಯಿಂದಾಗಲಿ ಮಾಡಿದ ಹಸಿಮಡಿಕೆಗಳನ್ನು ಸೊಳಮತ್ತು ಕಲ್ಲಿನಿಂದತಟ್ಟಿ ಗಡಿಗಯನ್ನು ರೂಪಿಸುವರು.

Bedding
The bedding of clay ware in alumina or sand to prevent warping during firing
ಮರಳು ಹಾಸಿಗೆ, ಆವಿಗೆಯಲ್ಲಿ ಕುಂಭವಸ್ತುಗಳನ್ನು ಸುಡಲು ಇಡುವ ಮುನ್ನ ಹಾಕುವ, ಅಲೂಮಿನಾ, ಅಥವಾ ಮರಳಿನ ಹಾಸಿಗೆ ಕುಂಭವಸ್ತುಗಳನ್ನು ಸುಡುವಾಗ ಬಾಗುಬರದಿರಲು ಆವಿಗೆಯಲ್ಲಿ ಮರಳಿನ ಹಾಸಿಗೆ ಹಾಕುವರು.

Beads pot
Decorative pot.
ಗೆಜ್ಜೆಗಡಿಗೆ, ಗಡಿಗೆಯ ಅಲಂಕರಣಕ್ಕಾಗಿ ಅರೆ ಹಸಿ ಇರುವಾಗಲೆ ಮಣ್ಣಿನ ಮಣಿಗಳನ್ನು ಸೊಂಟದ ಸುತ್ತಲೂ ಅಂಟಿಸುವರು. ಟೆರ್ರಕೊಟಾ ಅಲಂಕಾರಿಕ ವಸ್ತುಗಳಿಗೆ ಮಣಿಗಳನ್ನು ಅಂಟಿಸುವರು.


logo