logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Lid
Clayplate, mouth covering plate, Jar-lid.
ಮುಚ್ಚಳ.

Lime
Calcium carbonate.
ಸುಣ್ಣ. ಕುಂಬಾರಿಕೆಯಲ್ಲಿ ಸುಣ್ಣವನ್ನು ಬೇರೆ, ಬೇರೆ ಕಾರ್ಯಗಳಿಗೆ ಬಳಸುವರು.

Loam
Rich soil of clay sand and decayed vegetable matter.
ಸಾವಯವ ಪದಾರ್ಥಗಳಿಂದ ಕೂಡಿದ, ಮರಳುಬೆರೆತ ಜಿಗುಟಾದ ಜೇಡಿಮಣ್ಣು, ಕಳಿತಮಣ್ಣು, ಇಟ್ಟಿಗೆ ತಯಾರಿಸಲು ಮಾಡಿದ ಜೇಡಿ.

Long clay
Clay with high plasticity and strength.
ಹೆಚ್ಚು ಬಲ ಮತ್ತು ಮಿದುಣತ್ವವುಳ್ಳ ಕುಂಬಾರಿಕೆಯ ಮಣ್ಣು.

Lugs
Small projection or ears on the side of pots which functions as handles.
ಮಡಕೆಯ ಕಿವಿ, ಕಂಠದ ಹೊರಚಾಚು, ಮಡಕೆಯನ್ನು ಹಿಡಿದುಕೊಳ್ಳಲು ಅಂಟಿಸಿದ ಚಿಕ್ಕಹಿಡಿ, ಚಾಚುಹಿಡಿ, ಹೂಜಿಗೆ ಹಿಡಿಕೆ ಅಂಟಿಸುವರು.

Lustre
A thin iridescent coating of metallic substance applied as decoration to a glazed surface in liquid from and then fired at a low temperature
ಹೊಳಪು, ಕಾಂತಿ.

Luting
Joining together pieces of clay in leather hard condition by scoring the area of wetting with slip.
ಅರೆ ಹಸಿಯ ಮಡಕೆಗಳಿಗೆ, ಹಿಡಿಕೆ, ಕಂಠ, ಕಿವಿ, ಅಂಟಿಸಬೇಕಾದಾಗ ಆ ಭಾಗವನ್ನು ಕೆರೆದು ದೊರಗು ಮಾಡಿ ದ್ರವರೂಪದ ಮಣ್ಣನ್ನು ಲೇಪಿಸಿ ಮಣ್ಣಿನ ಹಿಡಿಕೆ, ಕಿವಿ, ಕಂಠವನ್ನು ಅಂಟಿಸುವುದು.

Maiolica/Majolica
Italian tin glazed work originating in the Majorca (hence the name) in the 15th century, Basically similar to Hispano Moresque Delft and Faience.
ಪಾರದರ್ಶಕವಲ್ಲದ ತವರದ ಗ್ಲೇಸ್ಡ ಮಾಡಿದ ಮಣ್ಣಿನ ಪಾತ್ರೆಗಳು ಇದನ್ನು ಮೂರುಬಾರೆ ಸುಡುವರು - ಇಂಥಹ ಗ್ಲೇಸ್ಡ ವಸ್ತುಗಳನ್ನು ಇಟಲಿಯ ಭಾಷೆಯಲ್ಲಿ ಮಜೊರಿಕಾ ಎಂತಲೂ, ಅಲ್ಲದೆ ಇದನ್ನು ಮೊದಲಿಗೆ ತಯಾರಿಸಿದ ಫಾವಿನ್ಝಾದ ಫ್ರೆಂಚ್ ಹೆಸರಾದ ಫಾಯನ್ಸ (Faience) ಎಂದು ಕರೆಯುವರು.

Mallet
A small wooden hammer.
ಸುತ್ತಿಗೆ, ಕುಂಬಾರರು ಮಣ್ಣಿನ ಹೆಂಟೆಯನ್ನು ಪುಡಿಮಾಡಲು ಉಪಯೋಗಿಸುವರು.

Maquette
A small sculpture made as a pre-paratory study for large work.
ಮಾದರಿ ಶಿಲ್ಪ.


logo