logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Hand building
Forming of pots without using a wheel by coiling pinching and slabbing.
ಕುಂಬಾರನ ಚಕ್ರವನ್ನು ಉಪಯೋಗಿಸದೆ, ಸುರಳಿ ವಿಧಾನದಿಂದ, ಹಿಚುಕು ವಿಧಾನದಿಂದ, ಇಲ್ಲವೆ ಸ್ಲ್ಯಾಬ್ ವಿಧಾನದಿಂದ ಮಡಕೆಗಳನ್ನು ಕೈಯಿಂದ ಮಾಡುವುದು, ಮಡಕೆ ಮಾಡುವುದು ಮೊದಲಿಗೆ ಕೈಯಿಂದಲೆ ಆರಂಭವಾಯಿತು.

Handi
The round bottomed vessel with a broad width and narrow mouth used for storing water, small handies are used for cooking.
ಇದು ಮರಾಠಿ ಶಬ್ದ ಹಂಡೆ, ಪಡಗ, ಹರಿವಿ, ನೀರುತುಂಬಿಡುವ ದೊಡ್ಡ ಗುಡಾಣ ಸೊಂಟ ಅಗಲವಾಗಿದ್ದು ಬಾಯಿ ಕಿರಿದಾಗಿರುತ್ತದೆ. ಚಿಕ್ಕ ಹಂಡಿಯನನು ಅಡುಗೆ ಮಾಡಲು ಬಳಸುವರು.

Handle
A hilt,
ಹಿಡಿಕೆ. ಜಗ್, ಕಪ್ಪುಬಸಿ, ಥಾಲಿ, ಮೊದಲಾದ ಮಣ್ಣಿನ ವಸ್ತುಗಳಿಗೆ ಹಿಡಿದು ಕೊಳ್ಳಲು ಅನುಕೂಲವಾಗುವಂತೆ, ಅರೆ ಹಸಿಇರುವಾಗಲೆ ಹಿಡಿಕೆಯನ್ನು ಅಂಟಿಸುವರು.

Hand paste
The porcelain which is fired to temperature in excess of 2370º F (1300ºC).
ಅತಿಹೆಚ್ಚಿನ ತಾಪಮಾನದಲ್ಲಿ ಕಾಯಿಸಿದ ಪಿಂಗಾಣಿಯ ಗಟ್ಟಿ ಕಣಕ.

Hard glaze
ಹೆಚ್ಚಿನ ತಾಪಮಾನದಲ್ಲಿ ಮಾಡಿದ ಸೆರಾಮಿಕ್ ಗ್ಲೇಸ್

Hovel
The brick enclosure of a bottle kiln.
ಬಾಟಲಿ ಆವಿಗೆಯಲ್ಲಿನ ಇಟ್ಟಿಗೆಯಿಂದ ಮಾಡಿದ ಹೊರಗೋಡೆಯ, ಕವಚ.

Hydria
Water carrying pots they were large enough to hold good supply of water. They had three handles, two for lifting and carrying and one to hold when pouring or when the vessel was empty.
ಗ್ರೀಕ್ ದೇಶದ, ಮೂರುಹಿಡಿಕೆಯ ದೊಡ್ಡ ನೀರಿನ ಪಾತ್ರೆ, ಎರಡು ಹಿಡಿಕೆಗಳು ಎತ್ತಲು ಹಾಗೂ ಸಾಗಿಸಲು ಉಪಯೋಗಿಸಿದರೆ ಮೂರನೆಯದನ್ನು ಇನ್ನೊಂದು ಪಾತ್ರೆಗೆ ನೀರನ್ನು ಸುರಿಯಲು, ಬರಿದಾಗಿದ್ದಾಗ ಎತ್ತಲು ಉಪಯೋಗವಾಗುತ್ತಿತ್ತು.


logo