logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Maiolica/Majolica
Italian tin glazed work originating in the Majorca (hence the name) in the 15th century, Basically similar to Hispano Moresque Delft and Faience.
ಪಾರದರ್ಶಕವಲ್ಲದ ತವರದ ಗ್ಲೇಸ್ಡ ಮಾಡಿದ ಮಣ್ಣಿನ ಪಾತ್ರೆಗಳು ಇದನ್ನು ಮೂರುಬಾರೆ ಸುಡುವರು - ಇಂಥಹ ಗ್ಲೇಸ್ಡ ವಸ್ತುಗಳನ್ನು ಇಟಲಿಯ ಭಾಷೆಯಲ್ಲಿ ಮಜೊರಿಕಾ ಎಂತಲೂ, ಅಲ್ಲದೆ ಇದನ್ನು ಮೊದಲಿಗೆ ತಯಾರಿಸಿದ ಫಾವಿನ್ಝಾದ ಫ್ರೆಂಚ್ ಹೆಸರಾದ ಫಾಯನ್ಸ (Faience) ಎಂದು ಕರೆಯುವರು.

Mallet
A small wooden hammer.
ಸುತ್ತಿಗೆ, ಕುಂಬಾರರು ಮಣ್ಣಿನ ಹೆಂಟೆಯನ್ನು ಪುಡಿಮಾಡಲು ಉಪಯೋಗಿಸುವರು.

Maquette
A small sculpture made as a pre-paratory study for large work.
ಮಾದರಿ ಶಿಲ್ಪ.

Maris
Clay containing large proportion of lime.
ಸುಣ್ಣದ ಪ್ರಮಾಣ ಅಧಿಕವಾಗಿರುವ ಮಣ್ಣು, ಸುಣ್ಣು ಜೇಡಿ.

Mask
A mould of the face and or head.
ಮೊಗವಾಡ, ಮಣ್ಣು, ಲೋಹ, ಕಟ್ಟಿಗೆ, ಪ್ಲಾಸ್ಟಿಕ್ಕಿನ ಬಗೆ ಬಗೆಯ ಮುಖವಾಡಗಳನ್ನು ಮಾಡುವರು. ಟೆರ್ರಾಕೊಟಾದ ಅಂದ ಚೆಂದ ಮುಖವಾಡ ಕೂಡ ಮಾಡುವರು.

Master-mould
Block mould
ಮೂಲ ಅಚ್ಚಿನಿಂದ ಮಾಡಿದ ಅಚ್ಚು ಮಣ್ಣಿನ ಪ್ರತಿಮೆಗಳನ್ನು ಆಟಿಕೆ ಸಾಮಾನು, ಗೊಂಬೆ ಮುಂತಾದವುಗಳನ್ನು ಮಾಡಲು ಬಳಸುವರು.

Maturing
Clayes which are stored damp matuer or improve in quality by the process of aging.
ಕುಂಬಾರರು ಮಡಕೆ ಮಾಡುವ ಮಣ್ಣನ್ನು ಹೊಳೆ, ಹಳ್ಳ ಹೊಂಡ, ಕೆರೆಗಳ ದಡದಿಂದ ತರುವರು. ಮಲೆನಾಡು ಪ್ರದೇಶದ ಕುಂಬಾರರು ವರ್ಷಕ್ಕೆ ಬೇಕಾಗುವಷ್ಟು ಮಣ್ಣನ್ನು ಯುಗಾದಿಯ ನಂತರ ಮಳೆಗಾಲಕ್ಕೆ ಮುನ್ನ ತಂದು ರಾಶಿಹಾಕಿ, ನೀರು ಹಾಕಿ ತುಳಿದು ಕೊಟ್ಟಿಗೆಯಲ್ಲ ಒಟ್ಟುವರು. ಒಣಗದಿರಲೆಂದು ಗೋಣಿ ತಟ್ಟು ಮುಚ್ಚಿ ನಿತ್ಯವು ನೀರು ಚಿಮುಕಿಸುವರು. ತಮಗೆ, ಬೇಕಾದಾಗ ರಾಶಿಯಿಂದ ತೆಗೆದು ಮಿಜ್ಜಿ, ನಾದಿ ಹದಗೊಳಿಸಿ, ಮಡಕೆ ಮಾಡಲು ಬಳಸುವ ರೂಢಿ ಈಗಲೂ ಇದೆ - ಮಣ್ಣು ಕಾಲ ಕಳೆದಂತೆ ಕಳಿತು ಮಿದುಣತ್ವ ಹೆಚ್ಚಿ ಬಲ ಬರುತ್ತದೆ. ಒಣಮಣ್ಣನ್ನು ಕೂಡ ಗಾಳಿ ಮಳೆ ಬಿಸಿಲಿಗೆ ತೆರೆದಿಡುವರು ವಾತಾವರಣದ ಕ್ರಿಯೆಯಿಂದ ಮಣ್ಣಿಗೆ ಬಲಬರುತ್ತದೆ. ಆಗಲೆ ಮಣ್ಣು ತಂದು, ನೀರು ಹಾಕಿ, ಅರಲು ಮಾಡಿ ಹದಗೊಳಿಸುವ ರೂಢಿ ಕೆಲವೆಡೆ ಇದೆ, ಅದು ಸರಿಯಾದ ಕ್ರಮವಲ್ಲ. ಮಣ್ಣು ಜಿಗಿ ಬರುವದಿಲ್ಲ. ಚೀನಿಯವರು ಮಡಕೆ ಮಾಡುವ ಮಣ್ಣನ್ನು ತಂದು ದಶಕಗಟ್ಟಲೆ ಗಾಳಿ, ಮಳೆ ಬಿಸಿಲಿಗೆ ತೆರೆದಿಡುತ್ತಿದ್ದರಂತೆ, ಅಪ್ಪರಾಶಿ ಮಾಡಿಟ್ಟ ಮಣ್ಣನ್ನು ಮಗ ಮಡಕೆ ಮಾಡಲು ಬಳಸುತ್ತಿದ್ದನೆನ್ನುವ ಪ್ರತೀತಿ ಇದೆ.

Mica
Any of a group of silicate minerals.
ಅಭ್ರಕ, ಕಾಗೆ ಬಂಗಾರ.

Minon art
A term commonly used to refer the art of Crete especially that produced between 2500 and 1100 B.C.
ಕ್ರಿ.ಪೂ. 2500 ಮತ್ತು 1100ರ ಮಧ್ಯಾವಧಿಯ ಕ್ರೀಟೆನಾಗರಿಕತೆಯ ಕಾಲಾವಧಿಯಲ್ಲಿ ಬೆಳೆದು ಬಂದ ಕುಂಭಕಲೆಗೆ 'ಮಿನೋಯಿನ್' ಕುಂಭಕಲೆ ಎನ್ನುವರು.

Model
Pattern.
ಮಾದರಿ, ಆಕೃತಿ ನಮೂನೆ.


logo