logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Tang dynasty
A period in China noted for its fine earthen ware and terracotta sculpture.
ಚೀನಾದ ಟಾಂಗವಂಶದ ಕಾಲಾವಧಿ ಕುಂಭ ಶಿಲ್ಪಕ್ಕೆ ಮತ್ತು ಟೆರ್ರಾಕೊಟಾ ತಯಾರಿಕೆಗೆ ಪ್ರಖ್ಯಾತವಾಗಿತ್ತು.

Tankard
A long mug like a vessel.
ಕುಡಿಯುವ ಪಾತ್ರೆ, ಜಾಡಿ.

Tawa
The clay flat griddle.
ತವೆ, ರೊಟ್ಟಿಹಂಚು ಮಣ್ಣಿನ ತವೆಯನ್ನು ರೊಟ್ಟಿಸುಡಲು ಗ್ರಾಮೀಣರು ಬಳಸುವರು.

Tazza
A shallow vessel mounted on a foot saucer shaped bowl.
ಪೀಠದ ಮೇಲೆ ಇಡುವ ಮಣ್ಣಿನ ಬೋಗುಣಿ.

Teapot
Tea drinking cup, a spouted vessel for pouring out tea.
ಚಹ ಕುಡಿಯುವ ಪಾತ್ರೆ, ಮಣ್ಣು ಮತ್ತು ಪಿಂಗಾಣಿಯ ಕಪ್ಪುಗಳನ್ನು ಚಹ ಕುಡಿಯಲು ಬಳಸುವರು. ಸೊಂಡಿಲುಳ್ಳ ಕೆಟ್ಲ,

Tease
To scratch or roughen the clay prior to joining.
ಕೆರೆಯುವುದು, ದೂರಗು ಮಾಡು, ಒಂದು ಮಣ್ಣಿನ ವಸ್ತುವಿಗೆ ಮಣ್ಣಿನ ಬೇರೊಂದು ಭಾಗವನ್ನು ಅಂಟಿಸುವುದು. ಉದಾ: ಜಾರ್-ಗೆ ಹಿಡಿ ಅಂಟಿಸುವುದು ಸೊಂಡಿಲು ಅಂಟಿಸುವುದು. ಕುಂಭಾರರು ಇದನ್ನು ಕುಂಭವಸ್ತು ಅರೆಹಸಿ ಇದ್ದಾಗಲೆ ಮಾಡವರು ಅಂಟಿಸ ಬೇಕಾದ ಭಾಗವನನು ಕರೆದು ದೊರಗು ಮಾಡಿ, ದ್ರವರೂಪದ ಮಣ್ಣನ್ನು ಲೇಪಿಸಿ ಅಂಟಿಸುವದು, ಭದ್ರವಾಗಿ ಅಂಟಿಕೊಳ್ಳುತ್ತದೆ.

Tea urn
Tea pot
ಚಹಮಾಡಲು ನೀರನ್ನು ಕುದಿಸುವ ಪಾತ್ರೆ,ಟೀಮಡಕೆ.

Tenmoku
A Japenese name for a glaze which has high iron content giving rich red/black brown colour.
ಅಧಿಕ ಕಬ್ಬಿಣಾಂಶವುಳ್ಳ, ಕುಂಪು, ಕಪ್ಪು, ಕಂದು ಬಣ್ಣದ ಗ್ಲೇಸಿಗೆ ಜಪಾನಿಯರು ಕರೆಯುವ ಹೆಸರು.

Terracotta
A collective term used to describe low fired unglazed colour pottery including most primitive pottery
ಕುಂಭ ವಸ್ತುಗಳಲ್ಲಿ ಇದು ಒಂದು ಪ್ರಕಾರ ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ, ಇಟಲಿ ಭಾಷೆಯ ಮೂಲದಿಂದ ಬಂದದ್ದು. ಟ್ರೆರ್ರಾಕೊಟಾ ವಸ್ತುಗಳು ಸಾಮಾನ್ಯವಾಗಿ ಕೆಂಪು, ಕಂದು, ಬಣ್ಣವನ್ನು ಹೊಂದಿರುತ್ತವೆ. ಕಡಿಮೆ ತಾಪಮಾನದಲ್ಲಿ ಸುಡುವರು. ಸಾಮಾನ್ಯ ಗಹಬಳಕೆಯ ವಸ್ತುಗಳಿಂದ ಮೊದಲ್ಗೊಂಡು ಮೃತ್ ಶಿಲ್ಪದ ವಸ್ತುಗಳೆಲ್ಲಾ ಈ ಪ್ರಕಾರಕ್ಕೆ ಒಳಪಡುತ್ತವೆ. ಬಂಗಾಳವು ಟೆರ್ರಕೊಟಾ ತಯಾರಿಕೆಯಲ್ಲಿ ಹೆಸರು ಪಡೆದಿದೆ.

Terrasigillate
A very fine slip used for coating pots, it is often fine enough to shine without being burnished.
ಉತ್ತಮವಾದ ದ್ರವರೂಪದ ಮಣ್ಣು ಮಡಕೆಗಳ ಮೈಗೆ ಲೇಪಿಸಿ ಹೊಳೆಯುವಂತೆ ಮಾಡುವುದು ಅಂದಗೊಳಿಸುವುದು.


logo