logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Kaolin
Pure clay known as China clay. It is used in porcelain bodies.
ಶುದ್ಧವಾದ ಪಿಂಗಾಣಿಮಣ್ಣು, ಚೈನಾಮಣ್ಣು ಎಂದು ಕರೆಯುವರು. ಪಿಂಗಾಣಿ ಸಾಮಾನುಗಳನ್ನು ತಯಾರಿಸಲು ಬಳಸುವರು.

Kettle
A vessel for heating or boiling liquids for domestic use one with spout and lid. Kettle called the pot black (prv).
ಚಹಕೆಟ್ಲ, ದ್ರವ ವಸ್ತುಗಳನ್ನು ಬಿಸಿಮಾಡಲು ಉಪಯೋಗಿಸುವ ಸೊಂಡಿಲುಳ್ಳ ಮಣ್ಣಿನ ಪಾತ್ರೆ.

Kick wheel
A potter's wheel operated by Tread bar or pedal at its,box.
ಕಾಲ್-ಚಕ್ರ

Kiln
An oven or furnace used for firing ceramics, the potters furnance. Kiln call oven burnt house (prv)
ಆವಿಗೆ, ಆವಿ ಮಡಕೆ ಸುಡುವಗೂಡು, ಭಟ್ಟಿ, ಒಲೆ ಕಲುಮೆ, ಗ್ರಾಮೀಣ ಪ್ರದೇಶದಲ್ಲಿ ಕುಂಬಾರರು, ಸ್ಥಳೀಯವಾಗಿ ದೊರೆಯುವ ಕಲ್ಲು ಮಣ್ಣುಗಳಿಂದ ಆವಿಗೆಯನ್ನು ಕಟ್ಟಿಕೊಳ್ಳುವರು. ಸುಧಾರಿತ ಆವಿಗೆಯ ನಿರ್ಮಾಣಕ್ಕೆ ಅಗ್ನಿ ನಿರೋಧಕ ಇಟ್ಟಿಗೆಗಳನ್ನು ಉಪಯೋಗಿಸುವರು. ಈಗೀಗ ವಿದ್ಯುತ್ ಒಲೆಗಳು ಬಂದಿವೆ. ಆವಿಗೆಯ ಇಂಧನವಾಗಿ ಎಣ್ಣೆಯನ್ನು ಕೂಡ ಬಳಸುವರು. ತೀರಾ ಇತ್ತೀಚೆಗೆ ಫೈಬರ್ ಒಲೆಯಿಂದಾಗಿ ಕೇವಲ 3-4 ಗಂಟೆಗಳ ಅವಧಿಯಲ್ಲಿ ಮಡಕೆಗಳನ್ನು ಸುಡಬಹುದಾಗಿದೆ. ಫೈಬರ್ ಕವಚದ ಒಲೆಗಳನ್ನು ಎಲ್ಲೆಂದರಲ್ಲಿಗೆ ಸುಲಭವಾಗಿ ಸಾಗಿಸಬಹುದು.

Kiln furniture
Bats props and other refractory pieces supporting pottery in the kiln.
ಆವಿಗೆಯ ಪರಿಕರಗಳು, ಕವೆಗೋಲು, ಒತ್ತುಗೋಲು, ಇತರೆ ಅಗ್ನಿ ನಿರೋಧಕ ವಸ್ತುಗಳು. ಆವಿಗೆಯಲ್ಲಿ ಮಡಕೆಗಳನ್ನು ಸುಡುವದಕ್ಕೆ ಸುಟ್ಟ ಮಡಕೆಗಳನ್ನು ತಗೆಯುವುದಕ್ಕೆ ಉಪಯೋಗಿಸಲ್ಪಡುವ ಸಲಕರಣೆಗಳು.

Kylix
It is a Greek pottery two handled drinking cup
ಎರಡು ಹಿಡಿಕೆಯುಳ್ಳ ಗ್ರೀಕಿನ ಮಣ್ಣಿನ ಪಾನ ಪಾತ್ರೆ.


logo