logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Raku
Low fired earthen ware made of grogged open clay covered with low melting glaze and oxides, the pot is taken from the kiln (using long handel tongs) and reduced or treated with variou substances to change the colours of the glaze and oxides.
ಜಪಾನಿನ ಚಹಾಕೂಟಕ್ಕಾಗಿ ಹುಟ್ಟಿಬಂದ ಸಾಮಾನ್ಯ ಉಷ್ಮತೆಯಲ್ಲಿ ಸುಟ್ಟ ಕುಂಭ ವಸ್ತುವೆ ರಾಕು ಪಾಟರಿ ಜಪಾನಿನ ಸೆನ್ನೋರೈಕು ಎಂಬವನೆ, ರಾಕು ಪಾಟರಿಯ ನಿರ್ಮಾಣಕ್ಕೆ ಕಾರಣನಾದವನು ರಾಕು ಪಾಟರಿಯನ್ನು ಎಲ್ಲಾ ಕಡೆ ಸುಲಭವಾಗಿ ದೊರೆಯುವ ಮಣ್ಣಿನಿಂದಲೇ ಮಾಡುವರು. ರಾಕು ಮಡಕೆಯ ಸುಡತಿ ಬಹಳ ವಿಶಿಷ್ಟವಾದದ್ದು ಚಹ ಕೂಟಕ್ಕೆ ಬೇಕಾದ ಲೋಟ ಕಪ್ಪು ಮಗ್ಗು ಮುಂತಾದ ವಸ್ತುಗಳನ್ನು ಆವಿಗೆಯಿಂದ ತಗೆದು ಚಹ ಕೂಟದ ಅಡಿಗೆಯನ್ನು ತಯಾರಿಸಲು ಉಪಯೋಗಿಸುವರು ಸುಡುವ ಕ್ರಮ ಅರ್ಧಗಂಟೆಯಲ್ಲಿ ನಡೆದು ಹೋಗುತ್ತದೆ.

Raw clay
clay which has not been fired, green clay.
ಸುಡದೆ ಇರುವ ಕುಂಭ ವಸ್ತು.

Raw glaze
A glaze made with unfritted materials. Also a term used for glazes applied to glass ware.
ಒಂದು ಬಾರೆ ಸುಟ್ಟ ಇಲ್ಲವೆ ಸುಡದೆ ಇರುವ ಒಣಗಿದ ಗಡಿಗೆಗಳಿಗೆ ಗಾಜು ಮೈ ಭರಿಸುವುದು.

Raw Material
Not processed or manufactured.
ಕಚ್ಚಾ ಪದಾರ್ಥ, ಮಡಕೆ ತಯಾರಿಕೆಗೆ ಮಣ್ಣು ಕಚ್ಚಾ ಪದಾರ್ಥ.

Red ware
red colour pot.
ಕೆಂಪು ಮಡಕೆ, ಗ್ರಾಮೀಣ ಪ್ರದೇಶದ ಕುಂಬಾರರು ಕೆಂಪು ಮಡಿಕೆ ಮಾಡ ಬೇಕಾದಲ್ಲಿ ಆವಿಗೆಯ ಹಿಂದೆ ಇಟ್ಟಿರುವ ಕಿಂಡಿಗಳನ್ನು ಮುಚ್ಚದೆ ಹಾಗೆಯೇ ತೆರೆದಿಡುವುದರ ಮೂಲಕ ಕೆಂಪು ಮಡಿಕೆಗಳನ್ನು ಸಿದ್ಧಗೊಳಿಸುವುದು.

Refractory
The property of being able to with stand high temperature.
ತಾಪನಿರೋಧಕ ಉದಾ ತಾಪನಿರೋಧಕ ಇಟ್ಟಿಗೆ.

Rib
A tool smoothing the out side of a pot while it is being thrown.
ತಿಗುರಿಯ ಮೇಲೆ ಮಡಕೆ ಗೇಯುವಾಗ, ಅದನ್ನು ನಯಗೊಳಿಸುವ ಸಾಧನ, ಆಧಾರದಂಡ, ಕಂಠದ ಕೆಳಗಣ ಅಂಚು.

Rim
The neck of the pot.
ಮಡಕೆಯ ಕಂಠದ ಅಂಚುಕಟ್ಟು ಹೊರಸುತ್ತು.

Ritual
Prescribed order for performing religious order.
ಧರ್ಮಶಾಸ್ತ್ರ ವಿಧಿ ಮತಕ್ರಿಯಾವಿಧಿ ಕೆಲವೊಂದು ಧಾರ್ಮಿಕ ಆಚರಣೆಗಾಗಿ, ವಿಶೇಷ ಮಡಕೆ ಕುಡಿಕೆಗಳನ್ನು ಉಪಯೋಗಿಸುವರು. ಉದಾ: ಸತ್ತಾಗ, ಹೆಣದ ಮುಂದೆ ಸ್ಮಶಾನಕ್ಕೆ ಒಯ್ಯುವ ಬೆಂಕಿಗಡಿಗೆ.

Round container
Big bellied pot for storing grains.
ಗುಂಡುವಾಡೆ ಧಾನ್ಯಗಳನ್ನು ಸಂಗ್ರಹಿಸಿಡುವ ವಾಡೆ ರಣಜಗಿ.


logo