logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Damper
The adjustable shutter in a kiln flue used to control the draft.
ಆವಿಗೆಯ ತಾಪಮಾನವನ್ನು ಗಾಳಿಯ ಹರಿವನ್ನು ಹತೋಟಿಯಲ್ಲಿಡುವ ಆವಿಗೆಯಲ್ಲಿ ಕವಾಟು, ತೇವಮಾಡುವ ಸಲಕರಣೆ.

Dearing
The forcing of air out of clay as done in the de-airing chamber of pug mill.
ಮಣ್ಣಿನಲ್ಲಿನ ಗಾಳಿ ತೆಗೆಯುವುದು.

Delft ware
The Chinese influenced glazed earthen ware made at Delfin in Holland during the early seventeenth century. The technique was similar to Itailian Maiolica similar ware made in England was known as English Delft.
ಹದಿನೇಳನೆ ಶತಮಾನದಲ್ಲಿ ಹಾಲೆಂಡಿನ ಡೆಲ್ಟ ಎಂಬಲ್ಲಿ ತಯಾರಿಸಿದ ಮೆರಗು ಪಿಂಗಾಣಿ ಚೀನಾ ದೇಶದ ಕುಂಭಕಲೆಯ ಪ್ರಭಾವದಿಂದ ಹಾಲೆಂಡಿನ ಡೆಲ್ಫನಲ್ಲಿ ಈ ಕುಂಭವನ್ನು ಸಿದ್ಧಪಡಿಸಿದ್ದರಿಂದ 'ಡೆಲ್ಟವ್ಹೇರ್' ಎಂಬ ಹೆಸರು ಬಂತು. ಇಟಲಿಯ ಮೆಜೊಲಿಕವನ್ನು ಇದು ಹೊಲುತ್ತದೆ. ಇಂಗ್ಲೆಂಡಿನಲ್ಲಿ ಇದನ್ನೆ ಇಂಗ್ಲೀಷ್ ಡೆಲ್ಫ ಎನ್ನುವರು.

Della Robbia ware
Ceramic sculpture of glazed terracotta generally in relief produced in Florena of Lucca della Robbia as his family during the 15thcentury. The glazed used was the lead tin majolica type developed in Spain.
ಪ್ರಾರೆನ್ಸಿನ ಲುಕ್ಕಾಡೆಲ್ಲಾ ರೂಬಿಯಾ ಕುಟುಂಬದವರು 15ನೇ ಶತಮಾನದಲ್ಲಿ ತಯಾರಿಸುತ್ತಿದ್ದ ಗ್ಲೇಸ್ಡ ಸೆರಾಮಿಕ್ ಶಿಲ್ಪ ಸ್ಪೇನಿನ ಮೆಜೋಲಿಕ್ ಶಿಲ್ಪಕ್ಕೆ ಬಳಸುತ್ತಿದ್ದ ಸತು ಮತ್ತು ತವರದ ಗ್ಲೇಜನ್ನು ಇದರ ತಯಾರಿಕೆಗೆ ಬಳಸುತ್ತಿದ್ದರು.

Design
Pattern, a drawing or sketch.
ಮಾದರಿ ನಕ್ಷೆ ಶ್ರೇಷ್ಠ ದರ್ಜೆಯ ಮಣ್ಣಿನಲ್ಲಿ ಕಲಾಕೃತಿ ರಚಿಸುವಾಗ ಮಾದರಿ ನಕ್ಷೆಯ ಅವಶ್ಯಕತೆ ಇದೆ.

De-watering
Reducing the water content of the clay.
ಮಣ್ಣಿನಲ್ಲಿರುವ ನೀರಿನ ಅಂಶವನ್ನು ಕಡಿಮೆ ಮಾಡುವುದು.

Dipping
A method of applying a coat of glaze to a pot by immersion.
ಮಣ್ಣಿನ ವಸ್ತುಗಳಿಗೆ ಗ್ಲೇಸಿಂಗ್ ಮಾಡುವ ಒಂದು ವಿಧಾನ ಗ್ಲೇಸಿಂಗ್ ಮಾಡಬೇಕಾದ ಸೆರಾಮಿಕ್ ವಸ್ತುಗಳನ್ನು ಮೊದಲೆ ಸಿದ್ಧತೆ ಮಾಡಿಟ್ಟುಕೊಂಡು, ದ್ರಾವಣದಲ್ಲಿ ಅದ್ದುವರು ಚಿಕ್ಕ, ಚಿಕ್ಕ ಸೆರಾಮಿಕ್ ವಸ್ತುಗಳನ್ನು ಗ್ಲೇಸ್ಡ ಮಾಡಲು ಈ ವಿಧಾನ ಉಪಯುಕ್ತ.

Dish
A vessel one that is flat or shallow.
ತಟ್ಟೆ, ಗಂಗಾಳ, ತಾಟು, ಬಟ್ಟಲು, ಪಿಂಗಾಣಿಯ ತಟ್ಟೆ.

Disk
Any flat thin circular body.
ತೆಳ್ಳನೆ. ದುಂಡು ತಗಡು, ಬಿಲ್ಲೆ, ಮಣ್ಣಿನಲ್ಲಿಯು ಮಾಡುವರು.

Dog head wedging
A way of preparing clay wedjing it into spirals that resemble a pointed dogs head.
ಕುಂಭ ವಸ್ತುಗಳನ್ನು ಮಾಡುವ ಮಣ್ಣನ್ನು ಹದಗೊಳಿಸುವ ಒಂದು ವಿಧಾನ. ಮಣ್ಣನ್ನು ತುಳಿದು ಸಿಂಬೆ ಹಾಗೆ ಗುಪ್ಪೆ ಹಾಕುವುದು. ಅದೊಂದು ರೀತಿಯಲ್ಲಿ ನಾಯಿಯ ತಲೆಯನ್ನು ಹೋಲುತ್ತದೆ.


logo