logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Obliquely
Slanting neither perpendicular nor parallel.
ಐಮೂಲಿ, ಅಸರಳ, ಸೊಟ್ಟ, ಅಸಮ ಕೋನದಲ್ಲಿ ಬಾಗಿರುವ.

Ocher
Pale brownish colour, natural iron earth which can be used as slips or colouring pigments.
ಪ್ರಾಕೃತಿಕವಾಗಿ ದೊರೆಯುವ ಕಬ್ಬಿಣಾಂಶವುಳ್ಳ ಮಣ್ಣು, ಬಣ್ಣ ತಯಾರಿಸಲು ಉಪಯೋಗಿಸುವರು. ಉದಾ:ಹುರಮಂಜ, ಇದನ್ನು ನೀರಿನಲ್ಲಿ ಕಲಸಿ ಬ್ರಷ್ ಮೂಲಕ ಬಣ್ಣ ಬಳಿಯಬಹುದು. ಹಳದಿ, ಕೆಂಪು, ಕಂದು ವರ್ಣದ ಮಣ್ಣು ಭೂಮಿಯಲ್ಲಿ ದೊರೆಯುತ್ತದೆ. ಖಾನಾಪುರದ ಬಳಿ ದೊರೆಯುವ ಬಣ್ಣದ ಮಣ್ಣನ್ನುಡಿಸ್ ಟೆಂಬರ್ ತಯಾರಿಸಲು ಮುಂಬಯಿ, ಮತ್ತುಪೂನಾಕ್ಕೆ ಸಾಗಿಸಲಾಗುತ್ತಿದೆ.

Offering Stand
This is the most disinctive type of the Harappan pottery, offering stand having a dish on bowl for its crowning component.
ಮಣ್ಣಿನ ಹರಕೆ ಪೀಠ ಆರಾಧನಾ ಸಮಯದಲ್ಲಿ ಸಾಂಸ್ಕೃತಿ ಸಂದರ್ಭದಲ್ಲಿ ಅರ್ಪಿಸುವ ಕಾಣಿಕೆ ವಸ್ತು. ಹರಪ್ಪ ಮೊಹಂಜದಾರೋ ಉತ್ಖನನದಲ್ಲಿ ಹಲವಾರು ಬಗೆಯ ಹರಕೆ ಪೀಠಗಳು ದೊರೆತಿವೆ.

Opaque
Not transparent, cannot be seen through.
ಅಪಾರದರ್ಶಕ ಮಡಕೆ, ಕೆಲವು ಪಿಂಗಾಣಿ ವಸ್ತುಗಳು ಅಪಾರದರ್ಶಕವಾಗಿರುತ್ತವೆ.

Open firing
A firing in which the ware is exposed to the flames.
ಬಯಲು ಆವಿಗೆಯಲ್ಲಿ ಬೆಂಕಿ ಹಾಕಿ ಮಡಕೆ ಸುಡುವ ವಿಧಾನ.

Opening materials
Non plastic materials such as sand and grog which are used to facilitate drying and reduce shrinkage.
ಮಿದುಣತ್ವ ಗುಣವಿಲ್ಲದ ಮರಳು ಮತ್ತು ಬೂದಿಯನ್ನು ಮಡಕೆ ಮಾಡುವ ಮಣ್ಣಿಗೆ ಬೆರಸುವದು. ಇದರಿಂದ ಮಡಕೆ ಮಡಕೆ ಒಣಗಲು ಹಾಗೂ ಉಡುಗುವುದನ್ನು ತಡೆಗಟ್ಟಲು ಅನುಕೂಲವಾಗುವುದು.

Oven
Fireplace, an enclosed compartment of brick stone clay or metal for cooking food.
ಒಲೆ, ಅಡುಗೆ ಒಲೆ, ಒಂಟಿ ಒಲೆ, ಜೋಡು ಒಲೆ, ಕಿಂಡಿ ಒಲೆ.

Ovoid
Egg shaped body.
ಮೊಟ್ಟೆ ಆಕಾರದ ಪಾತ್ರೆ ಲೋಥಾಲ್ ಉತ್ಖನನದಲ್ಲಿ ದೊರೆತಿದೆ.

Oxidation
Firing a kiln with an oxidizing atmosphere a good supply of air produces a clear atmosphere in the kiln.
ಉರಿಯಲು ಅನುಕೂಲವಾದಂತಹ ವಾತಾವರಣದ ಸಮಯದಲ್ಲಿ ಆವಿಗೆ ಹೊತ್ತಿಸುವುದು.


logo