logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Saggar
A container with a lid made of fire clay for holding a pot or pots to prevent damage to the pot by naked flames in the kiln.
ಸುಟ್ಟ ಮಣ್ಣಿನ ಕೋಶ, ಆವಿಗೆಯ ಒಳಗಿನ ಮೂಸೆ, ಮಡಕೆಗಳನ್ನು ಸುಡುವಾಗ, ಅವು ಹೋಕುಬರದಿರಲೆಂದು ಮೂಸೆಯಲ್ಲಿಟ್ಟು ಸುಡುವರು. ಇದೊಂದು ಅಗ್ನಿ ನಿರೋಧಕ ಮಣ್ಣಿನಿಂದ ಮಾಡಿರುವ ಮುಚ್ಚಳವಿರುವ ಪಾತ್ರೆ. ವಿದ್ಯುತ್ ಆವಿಗೆಗಳು ಬಂದ ನಂತರ ಇದರ ಬಳಕೆ ಕಡಿಮೆ ಆಗಿದೆ.

Salt glaze
a glaze which forms on the pot when slat is introduced in the kiln and the resulting sodium oxide vapour reacts with the silica in the clay.
ಲವಣಗ್ಲೇಸ್, ಆವಿಗೆಯಲ್ಲಿ ಮಡಕೆಗಳನ್ನು ಸುಡುತ್ತಿರುವಾಗ ಉಪ್ಪನ್ನು ಮಡಕೆಯ ಮೈಗೆ ಹಾಕಿ ಗ್ಲೇಸಿಂಗ್ ಮಾಡುವುದು. ಉಪ್ಪು ಮಣ್ಣಿನಲ್ಲಿರುವ ಸಿಲಿಕಾದೊಂದಿಗೆ (ಮರಳು) ಸೇರಿ, ರಾಸಾಯನಿಕ ಕ್ರಿಯೆಯಿಂದ ಉಂಟಾಗುವ ಗಾಜುಮೈ.

Sand
Presdominately silica, a mass of rounded Quartz grains usualy containing impurities such as mica felsper and iron.
ಮರಳು,ಉಸುಕು, ಹೊಯಿಗೆ, ಮೈಕಾ, ಫೆಲಸಪರ್, ಕಬ್ಬಿಣದ ಅಂಶ, ಮೊದಲಾದ ಅಶುದ್ಧ ವಸ್ತುಗಳನ್ನು ಒಳಗೊಂಡಿರುತ್ತದೆ.

Sarcup hages
A terracotta coffin, ancient art.
ಹೆಣ ತುಂಬಿಡುತ್ತಿದ್ದ ಟೆರ್ರಾಕೊಟಾದ ಮಣ್ಣಿನ ಪಾತ್ರೆ, ಒಂದು ಅಪೂರ್ವ ಮಣ್ಣಿನ ಶಿಲ್ಪ.

Sculpture
clay sculpture `Silpa denotes both sculpture in stone and in clay.`
ಮೃತ್ ಶಿಲ್ಪ ಹರಪ್ಪಾ ಮೊಹಂಜಾದಾರೋ ಕಾಲದಿಂದಲೂ ಮಣ್ಣಿನ ಶಿಲ್ಪ ಬೆಳೆದು ಬಂದಿದೆ.

Seal
The mark made by potters on the pot to identify the make-potters mark,
ಗುರುತು, ಋಜು, ಮಡಿಕೆ ಸಿದ್ಧಪಡಿಸಿದವರ ಹೆಸರು, ಊರಿನ ಹೆಸರು ಇತ್ಯಾದಿ, ಮಣ್ಣಿನ ಮುದ್ರೆಗಳು ಹರಪ್ಪಾ ಮೊಹಂಜದಾರೋ ಉತ್ಖನನದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ದೊರೆತಿವೆ. ಅದರಲ್ಲಿ ಪ್ರಾಣಿ, ಪಕ್ಷಿ, ಮನುಷರ ಚಿತ್ರಗಳನ್ನು ಕೊರೆದಿದ್ದಾರೆ.

Secondary clay
depreciated earth.
ಸವಕಳಿಕೆಯಿಂದ ಉಂಟಾದ ಮಣ್ಣು.

Shard
A broken fragment of pottery
ಒಡೆದ ಮಡಕೆಯ ಚೂರು, ಬೋಕಿ.

Short clay
lead clay, those which are not very plastic.
ಹೆಚ್ಚು ಮಿದುಣತ್ವ ಹೊಂದಿರದ ಮಣ್ಣು

Shoulder
Below the neck of the pot
ಗಡಿಗೆಯ ಕಂಠದ ಕೆಳಭಾಗ ಭುಜಭಾಗ.


logo