logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Lacquering
Making impervious shining smooth and clean.
ಸುಡದೆ ಇರುವ ಹಸಿಮಡಕೆಗಳನ್ನು ಮೆರುಗೆಣ್ಣಿ ಸವರಿ ಅಂದಗೊಳಿಸುವುದು.

Ladle
A large spoon for lifting liquid, bowl for holding Molton metal.
ಮಣ್ಣಿನ ಚಮಚ, ಸೌಟು, ಲೋಹಗಳ ದ್ರವವನ್ನು ಹಾಕಿಡುವ ಮಣ್ಣಿನ ಬೋಗುಣಿ.

Lagging
Material used for insulting the out side of kilns such as asbestos
ವಿದ್ಯುತ್ ಆವಿಗೆಯಲ್ಲಿ ಹೊರಭಾಗದ ರಕ್ಷಣೆಗಾಗಿ ಹೊದಿಸುವ ವಿದ್ಯುತ್ ನಿರೋಧಕ ವಸ್ತು ಉದಾ: ಕಲ್ನಾರು

Lamp
A vessel for burning oil with a wick and so giving light.
ಹಣತೆ, ಪ್ರಣತಿ, ಮಣ್ಣಿನ ದೀಪ.

Lawn
Phosphor-bronze-mesh sieves used in pottery for slips and glazes.
ಜರಡಿ, ಸಾಣಿಗೆ, ಕುಂಬಾರಿಕೆಯ ಮಣ್ಣನ್ನು ಸೋಸುವ ಲೋಹದ ಜರಡಿ, ದ್ರವರೂಪದ ಮಣ್ಣನ್ನು ಹಾಗೂ ಗ್ಲೇಸ್ ಮಿಶ್ರಣ ಸೋಸುವ ಸಾಣಿಗೆ.

Leather hard
The condition of the raw ware, when most of the moisture has left the body but when it is plastic enough to be carved or joined.
ಅರೆ ಹಸಿಯ ಕುಂಭ ವಸ್ತು, ಅತ್ಯಂತ ಕಡಿಮೆ ತೇವಾಂಶವುಳ್ಳದ್ದು ಗೇಯ್ದ ಮಡಕೆಯನ್ನು ಕೊನೆ ಹಂತವಾಗಿ ತಟ್ಟಿದ ಬಳಿಕ ಇರುವ ಸ್ಥಿತಿ, ಗ್ರಾಮೀಣ ಪ್ರದೇಶದ ಕುಂಬಾರರು 'ನಂಮ ಹಸಿ' ಎನ್ನುವರು. ಈ ಸ್ಥಿತಿಯಲ್ಲಿ ಕುಂಭ ವಸ್ತುಗಳಿಗೆ ಚಿತ್ತಾರ ಮಾಡಲು, ಗೆರೆ ಕೊರೆಯಲು ಬಗೆಬಗೆಯ ಅಲಂಕರಣ ಮಾಡಲು ಅನುಕೂಲವಾಗುವುದು.

Levigation
A method of refining clay by water flotation the heavier particles settling out.
ಚೂರ್ಣೀಕರಿಸು, ಮಡಕೆ ಮಾಡುವ ಮಣ್ಣನ್ನು ನೀರಿಗೆ ಹಾಕಿ ನುಣ್ಣಗೆ ಮಾಡುವುದು, ದಪ್ಪನೆಯ ಕಣಗಳು ತಳದಲ್ಲಿ ಉಳಿದು ಸಪುರಾದದ್ದು (ಸಣ್ಣನೆಯ ಕಣ) ಮಾತ್ರ ಮೇಲೆ ಉಳಿಯುತ್ತದೆ.

Lid
Clayplate, mouth covering plate, Jar-lid.
ಮುಚ್ಚಳ.

Lime
Calcium carbonate.
ಸುಣ್ಣ. ಕುಂಬಾರಿಕೆಯಲ್ಲಿ ಸುಣ್ಣವನ್ನು ಬೇರೆ, ಬೇರೆ ಕಾರ್ಯಗಳಿಗೆ ಬಳಸುವರು.

Loam
Rich soil of clay sand and decayed vegetable matter.
ಸಾವಯವ ಪದಾರ್ಥಗಳಿಂದ ಕೂಡಿದ, ಮರಳುಬೆರೆತ ಜಿಗುಟಾದ ಜೇಡಿಮಣ್ಣು, ಕಳಿತಮಣ್ಣು, ಇಟ್ಟಿಗೆ ತಯಾರಿಸಲು ಮಾಡಿದ ಜೇಡಿ.


logo