logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Weathering
Clay left in the open to mature in the rain the sun and ice breaks down the particles make the clay more plastic.
ಮಡಕೆ ಮಾಡುವ ಮಣ್ಣನ್ನು ಭೂಮಿಯಿಂದ ತೆಗೆದು ವಾತಾವರಣದಲ್ಲಿ ಕಳಿಯಲು ಬಿಡುವುದು, ಬಿಸಿಲು, ಚಳಿ, ಮಳೆಗಳಿಂದ ಹವಾಮಾನದಿಂದಾಗಿ ಮಣ್ಣು ಕಳಿತು ಬಲ ಮತ್ತು ಮಿದುಣತ್ವ ಪಡೆಯುವುದು. ಚೀನಿ ಕುಂಬಾರರು ಮಡಕೆ ಮಾಡುವ ಮಣ್ಣನ್ನು ತೆಗೆದು, ದಶಕಗಟ್ಟಲೆ ವಾತಾವರಣದಲ್ಲಿ ಬಿಡುತ್ತಿದ್ದರು.

Wedging
A hand method of milling plastic clay into homogenous mass prior to kneading.
ಹಸಿ ಮಣ್ಣನ್ನು ಕೈಯಿಂದ ಕಲಸಿ ಮಿಜ್ಜಿ ಮತ್ತೆ ಕಾಲಿನಿಂದ ತುಳಿದು ಹದಮಾಡಲು ಅಣಿಗೊಳಿಸುವುದು.

Whistling Jar
Sound production vessel.
ವಾದ್ಯಗಳ ಹೊಳವುಗಳನ್ನು ಮಣ್ಣಿನಿಂದ ಮಾಡುವುದು ಆದಿ ಕಾಲದಿಂದಲೂ ಇದೆ. ಈಗಲೂ ಮಾಡುತ್ತಾರೆ ಮೃದಂಗ, ಮದ್ದಳೆ ಉದಾಹರಿಸಬಹುದು. ದಕ್ಷಿಣ ಅಮೇರಿಕದಲ್ಲಿ ಧ್ವನಿ ಹೊರಡಿಸುವ ಜಾರ್-ಗಳನ್ನು ಮಾಡುತ್ತಿದ್ದರು.

Whiting
Calcius carbonate or ground chalk.
ಚಾಕ್, ಸುಣ್ಣ.

Wine bottle
ಮದ್ಯದ ಬಾಟಲಿ

Wine cup
A cup for holding wine
ಮದ್ಯದ ಬಟ್ಟಲು.

Woodash
Used as a glaze or glaze component.
ಮರದಿಂದ ಸುಟ್ಟ ಬೂದಿ, ಮಡಕೆಗಳನ್ನು ಗ್ಲೇಸ್ ಮಾಡಲು ಉಪಯೋಗಿಸುವರು ಗ್ಲೇಸಿನ ಒಂದು ಘಟಕವಾಗಿಯೂ ಬಳಕೆಯಲ್ಲಿದೆ.

Zig Zag
ಅಂಕು-ಡೊಂಕು, ವಕ್ರ-ವಕ್ರ.


logo