logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Inverted firing technique
ಆವಿಗೆಯಲ್ಲಿ ಮಡಕೆಗಳನ್ನು ತಲೆಕೆಳಗಾಗಿಟ್ಟು ಸುಡುವುದು ಹರಪ್ಪಾ ನಾಗರಿಕತೆಯ ಲೋಥಾಲ್ ಕುಂಬಾರರಿಗೆ ಈ ವಿಧಾನ ತಿಳಿದಿತ್ತು ಈ ವಿಧಾನ ಈಗಲೂ ಬಳಕೆಯಲ್ಲಿದೆ.

Ironstone china
A vitreous opaque pottery introduced by D.J.Mason Stroke-on-Trent in 1813. It was termed Iron stone because of its strength.
ಹೊಳಪುಳ್ಳ ಪಾರದರ್ಶಕವಲ್ಲದ ಮಣ್ಣಿನ ಪಾತ್ರೆ 1813ರಲ್ಲಿ ಇ.ಜೆ.ಮೇಸನ್ ಸ್ಟ್ರೋಕ್ ಹೊರತಂದನು. ಇದರಗಟ್ಟಿತನದಿಂದಾಗಿ ಐರನ್ ಸ್ಟೋನ್ ಎಂಬ ಹೆಸರು ಬಂದಿದೆ.

Iron oxide
One of the main oxides used for colouring and decoration present in most dug clays expect the pure kaolin.
ಬಣ್ಣ ಮತ್ತು ಅಂದಕ್ಕಾಗಿ ಬಳಸುವ ಮುಖ್ಯ ಆಕ್ಸೈಡಗಳಲ್ಲಿ ಕಬ್ಬಿಣದ ಆಕ್ಸೈಡ್ ಪ್ರಮುಖವಾದುದು ಶುದ್ಧ ಕೆಯೋಲಿನ್ ಹೊರತುಪಡಿಸಿ ಉಳಿದ ಎಲ್ಲಾ ಮಣ್ಣುಗಳಲ್ಲಿ ಕಬ್ಬಿಣದ ಆಕ್ಸೈಡ್ ಇರುತ್ತದೆ.

Jar
A wide mouthed vessel.
ದುಂಡಗಿನ ಅಗಲ ಬಾಯಿಯ, ಹಿಡಿಕೆಯುಳ್ಳ ಅಥವಾ ಇಲ್ಲದ ಪಾತ್ರೆ, ಕನ್ನಡದಲ್ಲಿ 'ಜಾರ್' ಎಂದೇ ಬಳಕೆಯಲ್ಲಿದೆ.

Jasper ware
A variety of coloured stone wares first made by Josiawedg-wood in 1774 and still being produced today.
ವರ್ಣಯುತವಾದ ಕಲ್ ಮಡಿಕೆ 1774ರಲ್ಲಿ ಜೋಷೈವೆಡ್ಗವುಡ್ ಮೊದಲಬಾರಿಗೆ ತಯಾರಿಸಿದನು. ಈಗಲೂ ಆ ಪಾತ್ರೆಯ ಉತ್ಪಾದನೆ ಇದೆ.

Jiggering and Jolleying
A process mainly for making cups and saucers and plates in which the clay takes shape between profile and rotary plaster mould.
ಕಪ್-ಸಾಸರ್ ಮತ್ತು ಪ್ಲೇಟ್ ಮಾಡುವ ಕ್ರಿಯೆ.

Jug
small vessel for keeping water or wine.
ಕನ್ನಡದಲ್ಲಿ ಕೂಡಾ ಜಗ್ ಎಂದೇ ಕರೆಯುವರು ಹೂಜಿ, ಕೂಜಾ, ನೀಳಕತ್ತಿನ ಮಡಕೆ, ನೀರು ಕುಡಿಯಲು ನೀರು ತುಂಬಿಡಲು ಉಪಯೋಗಿಸುವರು ಸಾಮಾನ್ಯವಾಗಿ ಜಗ್ಗಿನಲ್ಲಿ ನೀರು ತುಂಬಿ ಊಟದ ಟೇಬಲ್ ಮೇಲೆ ಇಡುವರು.

Kaolin
Pure clay known as China clay. It is used in porcelain bodies.
ಶುದ್ಧವಾದ ಪಿಂಗಾಣಿಮಣ್ಣು, ಚೈನಾಮಣ್ಣು ಎಂದು ಕರೆಯುವರು. ಪಿಂಗಾಣಿ ಸಾಮಾನುಗಳನ್ನು ತಯಾರಿಸಲು ಬಳಸುವರು.

Kettle
A vessel for heating or boiling liquids for domestic use one with spout and lid. Kettle called the pot black (prv).
ಚಹಕೆಟ್ಲ, ದ್ರವ ವಸ್ತುಗಳನ್ನು ಬಿಸಿಮಾಡಲು ಉಪಯೋಗಿಸುವ ಸೊಂಡಿಲುಳ್ಳ ಮಣ್ಣಿನ ಪಾತ್ರೆ.

Kick wheel
A potter's wheel operated by Tread bar or pedal at its,box.
ಕಾಲ್-ಚಕ್ರ


logo