logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Handle
A hilt,
ಹಿಡಿಕೆ. ಜಗ್, ಕಪ್ಪುಬಸಿ, ಥಾಲಿ, ಮೊದಲಾದ ಮಣ್ಣಿನ ವಸ್ತುಗಳಿಗೆ ಹಿಡಿದು ಕೊಳ್ಳಲು ಅನುಕೂಲವಾಗುವಂತೆ, ಅರೆ ಹಸಿಇರುವಾಗಲೆ ಹಿಡಿಕೆಯನ್ನು ಅಂಟಿಸುವರು.

Hand paste
The porcelain which is fired to temperature in excess of 2370º F (1300ºC).
ಅತಿಹೆಚ್ಚಿನ ತಾಪಮಾನದಲ್ಲಿ ಕಾಯಿಸಿದ ಪಿಂಗಾಣಿಯ ಗಟ್ಟಿ ಕಣಕ.

Hard glaze
ಹೆಚ್ಚಿನ ತಾಪಮಾನದಲ್ಲಿ ಮಾಡಿದ ಸೆರಾಮಿಕ್ ಗ್ಲೇಸ್

Hovel
The brick enclosure of a bottle kiln.
ಬಾಟಲಿ ಆವಿಗೆಯಲ್ಲಿನ ಇಟ್ಟಿಗೆಯಿಂದ ಮಾಡಿದ ಹೊರಗೋಡೆಯ, ಕವಚ.

Hydria
Water carrying pots they were large enough to hold good supply of water. They had three handles, two for lifting and carrying and one to hold when pouring or when the vessel was empty.
ಗ್ರೀಕ್ ದೇಶದ, ಮೂರುಹಿಡಿಕೆಯ ದೊಡ್ಡ ನೀರಿನ ಪಾತ್ರೆ, ಎರಡು ಹಿಡಿಕೆಗಳು ಎತ್ತಲು ಹಾಗೂ ಸಾಗಿಸಲು ಉಪಯೋಗಿಸಿದರೆ ಮೂರನೆಯದನ್ನು ಇನ್ನೊಂದು ಪಾತ್ರೆಗೆ ನೀರನ್ನು ಸುರಿಯಲು, ಬರಿದಾಗಿದ್ದಾಗ ಎತ್ತಲು ಉಪಯೋಗವಾಗುತ್ತಿತ್ತು.

Icon (Ikon)
Portrait of a sacred figure in the form of painting mosaic a low relief usually small scale.
ಪವಿತ್ರ ಮೂರುತಿ, ಚಿಕ್ಕ ಪ್ರತಿಮೆ, ಹೆಚ್ಚಾಗಿ ಮತಧರ್ಮಗಳದ್ದು ಮಣ್ಣಿನಿಂದ ಕೂಡ ಮಾಡುವರು.

Igneous
Fire formed or produced by solidification of earths internal Molton magma.
ಅಗ್ನಿ ಜನ್ಯ, ಜ್ವಾಲಾಮುಖಿಯಿಂದಾದ ಖನಿಜ.

Impermeable
Non porous pottery body which has been endured near porous by vetrificaiton.
ಸಚ್ಛಿದ್ರತೆ ಇಲ್ಲದ ಕುಂಭ ವಸ್ತು. ಕುಂಭಕ್ಕೆ ಗಾಜು ಮೈಭರಿಸಿ ಸಚ್ಛದ್ರತೆ ಇಲ್ಲದಂತೆ ಮಾಡಿದ ಕುಂಭ ವಸ್ತು.

Inkpot
A bottle for holding ink.
ದೌತಿ, ಮಸಿಬುಡ್ಡಿ ಮಸಿಕುಡಿಕೆ, ಟೆರ್ರಾಕೊಟಾ ಮಸಿ ಬುಡ್ಡಿ ಮಾಡುವರು.

Inlay work
Embed a thing into another, inlaying.
ಕುಂದಣಾಲಂಕರಣ, ಕೆತ್ತಿಕೂರಿಸು, ಕುಂದಣಿಕೆಲಸ, ಕೊರೆದ ಭಾಗದಲ್ಲಿ ಪರವಸ್ತುಗಳನ್ನು ತುಂಬಿಸುವ ಕೆಲಸ, ಅಂಟಿಸುವ ಕೆಲಸ, ಕುಂಭವಸ್ತುಗಳಿಗೂ ಮಾಡುವರು.


logo