logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Green glaze
A glaze applied to ceramic ware before biscuit firing
ಕುಂಭ ವಸ್ತುಗಳಿಗೆ ಮೊದಲ ಸುಡತಿಗೆ ಮುನ್ನ ಮಾಡುವ ಗ್ಲೇಸ್.

Green ware
Unfired clay ware.
ಸುಡದೆ ಇರುವ ಕುಂಭ ವಸ್ತುಗಳು.

Grey ware
ಬೂದುಬಣ್ಣದ ಕುಂಭ ವಸ್ತು.

Grit
Particles of stone or sand.
ಕಲ್ಲಿನ ಪುಡಿ, ಮರಳು, ಮಡಕೆ ಮಾಡುವ ಮಣ್ಣಿಗೆ ಬೆರೆಸುವರು.

Grog
Previously fired clay ground down used to make body stronger and more malleable.
ಸುಟ್ಟಮಣ್ಣಿನ ಪುಡಿ, ಒಡೆದ, ಹೋಕಾದ ಮಡಕೆಗಳನ್ನು ಕುಟ್ಟಿ ಪುಡಿಮಾಡಿದ ದೊರಗುಬೂದಿ, ಮಡೆ ಮಾಡುವ ಮಣ್ಣನ್ನು ಹದಮಾಡುವಾಗ, ದೊರಗು ಬೂದಿಬೆರೆಸುವರು, ಇದು ಮಡಕೆಗಳು ಉಡುಗುವದನನು ತಡೆಗಟ್ಟುತ್ತದೆ.

Grolling
A refined English kaolin that is relatively plastic.
ಸಾಧಾರಣ ಮಿದುಣತ್ವವುಳ್ಳ ಉತ್ಕೃಷ್ಟವಾದ ಕೆಯೋಲಿನ್ ಮಣ್ಣು ಬಿಳಿಮಣ್ಣು.

Grouting or Pointing
The filler between tiles and mosaics.
ಸಂದುಗಳನ್ನು ಮುಚ್ಚುವ ನೀರುಗಾರೆ.

Guild
Potters colony, Kumbhara wade.
ಕುಂಬಾರ ಜನಾಂಗದ ಶ್ರೇಣಿ, ಸಂಘ, ವೃತ್ತಿಸಂಘ, ಕುಶಲಕರ್ಮಿಗಳ ಸಂಘ, ಪ್ರಾಚೀನ ಭಾರತದಲ್ಲಿ ಕುಂಬಾರ ಸಂಘಗಳು (ಒಕ್ಕೂಟಗಳು) ಇದ್ದ ಬಗೆಗೆ ಐತಿಹಾಸಿಕ ದಾಖಲೆಗಳಿವೆ.

Hand building
Forming of pots without using a wheel by coiling pinching and slabbing.
ಕುಂಬಾರನ ಚಕ್ರವನ್ನು ಉಪಯೋಗಿಸದೆ, ಸುರಳಿ ವಿಧಾನದಿಂದ, ಹಿಚುಕು ವಿಧಾನದಿಂದ, ಇಲ್ಲವೆ ಸ್ಲ್ಯಾಬ್ ವಿಧಾನದಿಂದ ಮಡಕೆಗಳನ್ನು ಕೈಯಿಂದ ಮಾಡುವುದು, ಮಡಕೆ ಮಾಡುವುದು ಮೊದಲಿಗೆ ಕೈಯಿಂದಲೆ ಆರಂಭವಾಯಿತು.

Handi
The round bottomed vessel with a broad width and narrow mouth used for storing water, small handies are used for cooking.
ಇದು ಮರಾಠಿ ಶಬ್ದ ಹಂಡೆ, ಪಡಗ, ಹರಿವಿ, ನೀರುತುಂಬಿಡುವ ದೊಡ್ಡ ಗುಡಾಣ ಸೊಂಟ ಅಗಲವಾಗಿದ್ದು ಬಾಯಿ ಕಿರಿದಾಗಿರುತ್ತದೆ. ಚಿಕ್ಕ ಹಂಡಿಯನನು ಅಡುಗೆ ಮಾಡಲು ಬಳಸುವರು.


logo