logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Form
A word often confused with shape properly the form of an object is the combination of all the characteristics that establish its identity. Form not only includes shape but also aspects such as size texture colour, time and movement.
ಆಕಾರ ಕೊಡು, ರೂಪಿಸು, ಚಿತ್ರದ ಅಂಗಭಾಗಗಳ ವ್ಯವಸ್ಥೆ, ಅಳತೆ, ರಚನೆ, ಇದೆಲ್ಲವನ್ನು ಒಳಗೊಂಡ ವಸ್ತು, ಕಲಾಪ್ರದರ್ಶನಗಳನ್ನು ಏರ್ಪಡಿಸುವಾಗ 'ಫಾರಂ' ಬಹಳ ಮುಖ್ಯ.

Galena
A lead sulphide (pbs) frequently used by early potters to make lead glaze.
ನಿಸರ್ಗದಲ್ಲಿ ದೊರೆಯುವ ಸೀಸದ ಸಲ್ಫೈಡ್ ಸಂಯೋಜನೆಯುಳ್ಳ ಸೀಸದ ಅದಿರು, ಮಧ್ಯಯುಗದ ಕುಂಬಾರರು ಮಡಕೆ ಮೈಗೆ ಹೊಳಪು ಭರಿಸಲು ಬಳಸುತ್ತಿದ್ದ ಸೀಸದ ಅದಿರು.

Ganister
A refractory clayey sand found beneath the coal slams.
ಮಣ್ಣಿನಾಂಶವುಳ್ಳ ಅಗ್ನಿನಿರೋಧಕ ಮರಳು, ಕಲ್ಲಿದ್ದಲು ಗಣಿಗಳಲ್ಲಿ ದೊರೆಯುತ್ತದೆ. ಕುಲುಮೆಗಳ ಅಸ್ತರಿಗಾಗಿ ಬಳಸುವ ನೈಸರ್ಗಿಕವಾಗಿ ದೊರೆಯುವ ಜೋಡಿಮಿಶ್ರಿತ ಕಲ್ಲು.

Gauge post
An instrument positioned on the tool tray of pattern wheel for measuring the height of the thrown ware.
ಕುಂಬಾರನ ಚಕ್ರದ ಸಲಕರಣೆಗಳಲ್ಲಿ ಇದೂ ಒಂದು, ಗೇಯ್ದಿಟ್ಟ ಮಡಕೆಗಳ ಎತ್ತರ ನೋಡುವ ಸಾಧನ.

Gilding
The application of a thin layer of gold to pot.
ಗಿಲೀಟು ಮಾಡುವುದು ಅತಿಹೆಚ್ಚಿನ ಅಲಂಕರಣಕ್ಕಾಗಿ ಮಡಕೆಯ ಮೈ ಮೇಲೆ ಲೇಪಿಸುವ ಚಿನ್ನದ ಲೇಪನ, ಬಳಕೆ ಕಡಿಮೆ.

Glaze
A thin glassy coating melted on the surface of a pot to make it nonporous and of required colour and texture `The glazing is like clothing that you put on your pot to make it hygienic to make it stand wear and tear` (Dr. Gurucharan Singh).
ಮಡಕೆಗೆ ಗಾಜು ಮೈಭರಿಸಿ ಸಚ್ಛದ್ರತೆ ಇಲ್ಲದಂತೆ ಮಾಡುವುದು, ಲೋಹಗಳ ಮಿಶ್ರಣ ಲೇಪಿಸಿ ಮೈಯನ್ನು ಹೊಳಪುಭರಿಸುವುದು, ಕಾವಿನಿಂದ ಗಾಜಿನಂಥ ವಸ್ತುಗಳನ್ನು ಕರಗಿಸಿ ಲೇಪಕೊಡು ಬಗೆ.

Glost
Glaze
ಗಾಜು ಮೈ, ಹೊಳಪುಮೈ.

Gloss Firing
The firing of the kiln to sufficiently high temperature to meet the glaze on a pot.
ಮಡಕೆಗೆ ಗಾಜು ಮೈ ಭರಿಸಲು ಹೆಚ್ಚಿನ ತಾಪಮಾನದಲ್ಲಿ ಸುಡುವುದು.

Glost kiln
A kiln used for firing the glazed on a ware.
ಮಡಕೆಗಳನ್ನು ಗ್ಲೇಸ್ಡ ಮಾಡಲು ಬಳಸುವ ಆವಿಗೆ.

Goblet
Drinking cup
ಗಿಂಡಿ, ಥಾಲಿ, ಪಾನಪಾತ್ರೆ.


logo