logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Fire clay
This is secondary so called because it is found in the region of coal seams. It is highly refractory.
ಕಾವುಜೇಡಿ, ಜಲಜಿಶಿಲೆಯಿಂದ ಉಂಟಾದ ಮಣ್ಣು, ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು.

Firing
The controlled application of heat to clay and glaze to effect the necessary chemical changes required for production of pottery.
ಆವಿಗೆ ಸುಡುವುದು, ಆವಿಗೆಯಲ್ಲಿ ಹಸಿಮಣ್ಣಿನ ಮಡಕೆಗಳನ್ನಿಟ್ಟು ಸುಡುವುದು, ಕಾವಿನಿಂದ ಗಾಜಿನಂಥ ವಸ್ತುಗಳನ್ನು ಕರಗಿಸಿ ಹೊಳಪು ಮೈಭರಿಸುವದು.

Flaring
Glitter
ಹೊಳೆಯುವ, ಮಡಕೆಗಳನ್ನು ಅರೆ ಹಸಿ ಇರುವಾಗ ಉಜ್ಜಿ ನುಣುಪುಗೊಳಿಸಿ ಹೊಳೆಯುವಂತೆ ಮಾಡುವದು. ಗ್ಲೇಸಿಂಗ್ ವಿಧಾನದಿಂದ ಕುಂಭ ವಸ್ತುಗಳನ್ನು ಹೊಳೆಯುವಂತೆ ಮಾಡುವರು.

Flat clay
A plastic clay such as ball clay.
ಅಧಿಕ ಮಿದುತ್ವವುಳ್ಳಮಣ್ಣು ಉಂಡೇಜೇಡು, ಅದಕ್ಕೆ ವಿರೋಧವಾಗಿ ಕಡಿಮೆ ಮಿದುತ್ವದ ಮಣ್ಣು.

Flat ware
The collective term for items of pottery such as plates, and shallow dishes or bowls which are broad and open in form complete hollow ware.
ತಟ್ಟೆ, ಕಿರಿದಾದ ಬೋಗುಣಿ, ಮುಂತಾದ ತೆರೆದ ಅಗಲಬಾಯುಳ್ಳ ಮಡಕೆಗಳು.

Flint
silica
ಮರಳು, ಹೊಯಿಗೆ ಉಸುಕು, ಮಣ್ಣನ್ನು ಹದಗೊಳಿಸಲು ಮರಳನ್ನು ಮಣ್ಣಿಗೆ ಬೆರಸುವರು.

flue
The passage way for the flames in kiln.
ಆವಿಗೆಯ ಜ್ವಾಲೆಗಳು ಹೊರಗೆ ಹೋಗುವ ದಾರಿ.

Flux
An ingredient in a clay body or glaze which lowers the melting point of the ingredients.
ಮಡಕೆ ಮಣ್ಣು ಅಥವಾ ಗ್ಲೇಸ್-ನಲ್ಲಿರುವ ಘಟಕಗಳಲ್ಲಿನ ಸ್ರಾವಕ, ಇತರ ಘಟಕಗಳೊಡನೆ ಸೇರಿ ದ್ರವವಾಗಿಸುವ ಕ್ರಿಯೆಯಲ್ಲಿ ನೆರವಾಗುತ್ತದೆ. ಯಾವುದೇ ಗ್ಲೇಸ್ ಮಾಡಲು ಕೂಡ ಸ್ರಾವಕಬೇಕು ಗ್ಲೇಸಿನ ಗುಣ ನಿರ್ಧಾರವಾಗುವುದು ಈ ಸ್ರಾವಕದಿಂದಲೆ.

Folk art
folk craft, handed down by tradition of the people.
ವಂಶಮಾರಂಪರ್ಯವಾಗಿ ಬಂದ ವೃತ್ತಿಗಳು, ಕಲೆಗಳು ಉದಾ: ಗ್ರಾಮೀಣ ವೃತ್ತಿಗಳಾದ ಕುಂಬಾರಿಕೆ, ಚಮ್ಮಾರಿಕೆ, ಇತ್ಯಾದಿ.

Foot ring
A circle of clay left while turning or trimming the base of a pot and which allows pot to stand evenly.
ತಿಗುರಿಯಿಂದ ಮಡಕೆಯನ್ನು ಗೇಯುವಾಗ ಕೆಳಗೆ ಉಳಿಯುವ ಬಳೆ ಆಕಾರದ ಮಣ್ಣಿನ ಸಿಂಬೆ. ಆ ಸಿಂಬೆ ಗೇಯುತ್ತಿರುವ ಮಡಕೆಗಿಂತ ಸ್ವಲ್ಪ ಅಗಲವಾಗಿರುತ್ತದೆ. ಮಡಕೆ ಸ್ಥಿರವಾಗಿ ನಿಲ್ಲಲ್ಲು ಅದರಿಂದ ಅನುಕೂಲವಾಗುತ್ತದೆ.


logo