logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Ampulla
A bottle with a bulbous body and narrow neck used by the ancient-Romans for oil, wine or other liquids
ಪ್ರಾಚೀನ ರೋಮನ್-ರು, ಗಾಜು ಯಾ ಮಣ್ಣಿನಿಂದ ಮಾಡಿದ ಜೋಡು ಹಿಡಿಕೆಯ ಪಾತ್ರೆ. ಪೂಜಾ ವಿಧಿಗಳಲ್ಲಿ ಮತ್ತು ತೈಲ ಇಲ್ಲವೆ ಮದ್ಯ ತುಂಬಿಡಲು ಬಳಸುತ್ತಿದ್ದರು.

Anvil
An iron block on which metals are shaped
ಅಡಿಗಲ್ಲು, ಸೆರಾಮಿಕ್ ಕೈಗಾರಿಕೆಯಲ್ಲಿ ಕೂಡ ಬಳಸುವರು

Argil
A whitish potters clay
ಕುಂಬಾರಿಕೆಯ ಬಿಳಿ ಮಣ್ಣು ಜೇಡಿ ಮಣ್ಣು

Art
Skill a technique or method used in deliberate creation of an image or object Pottery is an art, has divine origin-(Sirherbest Read)
ಕಲೆ, ಚಾತುರ್ಯ, ವಿದ್ಯಾ ಕೌಶಲ್ಯ ಮಾನವೀಯ ಅನುಭವಗಳನ್ನು ವ್ಯವಸ್ಥಿತ ರೀತಿಯಲ್ಲಿ ಅನ್ಯರಿಗೆ ತಿಳಿಸುವ ಸಾಧನ. ಕುಂಬಾರಿಕೆ ಜನೋಪಯೋಗಿ ಕಲೆಯಾಗಿ ಬಹು ಪ್ರಾಚೀನದಿಂದ ಬೆಳೆದು ಬಂದಿದೆ

Aryballos
Oil bottle with narrow neck usually with globular body used by athletes at the bath
ಗ್ರೀಕ್ ಕ್ರೀಡಾಪಟುಗಳು ಸ್ನಾನಕ್ಕಾಗಿ ಬಳಸುತ್ತಿದ್ದ ಮಣ್ಣಿನಿಂದ ಮಾಡಿದ ಕಿರಿದಾದ ಕುತ್ತಿಗೆಯ ಬಾಟಲಿ

Ash
The grey powder which remains something has burnt. It is commonly used to provide from 40 to 60 percent of high temperature glaze ingredients
ಕಟ್ಟಿಗೆ, ಸೊಪ್ಪು, ಸೆದೆ ಸುಟ್ಟ, ಬೂದಿ, ಬೂದಿಯು ಒಂದು ಸ್ರಾವಕ: ಸಿಲಿಕಾ ಮತ್ತು ಅಲೂಮಿನಗಳನ್ನು ಒಳಗೊಂಡಿದೆ. ಕುಂಬಾರರು ಮಣ್ಣನ್ನು ಹದಮಾಡಲು ಬೂದಿಯನ್ನು ಮಣ್ಣಿಗೆ ಬೆರೆಸುವರು.

Bag wall
A fire brick structure in a kiln which prevents the flames striking the ware directly
ಮಣ್ಣಿನ ವಸ್ತುಗಳನ್ನು ಆವಿಗೆಯಲ್ಲಿಟ್ಟು ಸುಡುವಾಗ ಜ್ವಾಲೆಗಳು ಮಡಕೆಗೆ ನೇರವಾಗಿ ತಾಗದಿರಲೆಂದು ಅಗ್ನಿ ನಿರೋಧಕ ಇಟ್ಟಿಗೆಯಿಂದ ಮಾಡಿದ ತಡೆಗೋಡೆ.

Ball clay
A very plastic clay used in bodies and glazes
ಉಂಡೆಜೇಡು, ಹೆಚ್ಚು ಮಿದುಣತ್ವ ಉಳ್ಳದ್ದು, ಕುಂಭವಸ್ತುಗಳನ್ನು ತಯಾರಿಸಲು ಹಾಗೂ ಗ್ಲೇಸಿಂಗಿಗೆ ಉಪಯೋಗಿಸುವರು. ಮೊದಲಿಗೆ ಗಣಿಗಳಿಂದ ತೆಗೆದ ಮಣ್ಣನ್ನು ಉಂಡೆಗಳನ್ನು ಮಾಡಿ ಮಡಕೆ ಮಾಡುವ ಕಾರ್ಯಗಾರಕ್ಕೆ ಸಾಗಿಸುತ್ತಿದ್ದರು. ಇದರಿಂದಾಗಿ 'ಬಾಲ್ ಕ್ಲೇ' ಎನ್ನುವ ಹೆಸರು ಬಂದಿದೆ.

Ball mill
A revolving drum mechanically driven, containing hard balls of flint or fired porcelain which grind powders finally in a mixture with water
ತಿರುಗುವ ಡ್ರಮ್, ಕುಂಭ ಕೈಗಾರಿಕೆಗೆ ಬೇಕಾದ ಚಿಕ್ಕಯಂತ್ರ, ಜೇಡಿಮಣ್ಣಿನ ಪುಡಿಯನ್ನು ಡ್ರಮ್ಮಿಗೆ ಹಾಕಿ ನೀರುಬೆರಸಿ ಡ್ರಮ್ ತಿರುಗಿಸಿ ಮಿಶ್ರಣ ಮಾಡುವರು.

Banding
The application of a band of colour around a pot, usually done while the pot is rotating on a banding wheel
ಮಡಕೆಯನ್ನು ತಿರುಗಿಯ ಮೂಲಕ ಗೇಯುವಾಗಲೆ ಮಡಕೆಯ ಸುತ್ತ ಬಣ್ಣದ ಪಟ್ಟಿ ಮಾಡುವ ಕ್ರಿಯೆ, ಸುತ್ತು ಪಟ್ಟಿ ಮಾಡುವುದು.


logo