logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Bust
A sculpture of a person’s head, shoulders and chest.
ಪ್ರತಿಮೆ ವಿಗ್ರಹ, ಎದೆಯ ಮೇಲ್ಭಾಗದ ಮುಖಶಿಲ್ಪ, ಕೈಯಿಂದ ಇಲ್ಲವೆ ಅಚ್ಚುಗಳಿಂದ ಮಣ್ಣಿನ ಮುಖ ಶಿಲ್ಪ ಮಾಡುವರು

Butter pot
Round pot with broad mouth prepared for keeping butter.
ಬೆಣ್ಣೆಗಡಿಗಿ, ಬೆಣ್ಣೆಬೋಗುಣಿ, ಬೆಣ್ಣೆಪಲ್ಟಿ

Bowl
A round vessel, begging bowl a drinking cup, Bowls of compassion(Bible) Begger knows his bowl (prv)
ಪಾತೇಲಿ, ಬಟ್ಟಲು

Calcium carbonate
Chalk in the form of whiting, lime stone used as a flux in middle to high temperature glazes
ಸುಣ್ಣ, ಬಳಪ, ಸಾಧಾರಣ ಮತ್ತು ಹೆಚ್ಚಿನ ಉಷ್ಣತೆಯ ಗ್ಲೇಸಿಂಗ್ ಮಾಡುವ ಸಂದರ್ಭದಲ್ಲಿ ಸ್ರಾವಕವಾಗಿ ಸುಣ್ಣವನ್ನು ಉಪಯೋಗಿಸುವರು.

Carrying pole
Thin bamboo pole,
ಅಡ್ಡೆ, ಬಿದುರಿನ ಉದ್ದನೆಯ ಗಣಿ ಕೋಲು ಕುಂಬಾರರು ಮಡಕೆಗಳನ್ನು ಅದಕ್ಕೆ ಕಟ್ಟಿ ಹೆಗಲಮೇಲೆ ಇಟ್ಟುಕೊಂಡು ಮಾರಲು ಹೋಗುವರು. ಹೆಚ್ಚು ಭಾರವನ್ನು ಆಯಾಸವಿಲ್ಲದೆ ಹೊರಲು ಅಡ್ಡೆ ಅನುಕೂಲ.

Cast
To produce a three dimensional form by casting a raw material in mould
ಎರಕ ಎರೆದ ವಸ್ತು, ಕರಗಿಸಿದ ಲೋಹ ಅಥವಾ ಹಸಿಗಚ್ಚು ಮಣ್ಣಿನ್ನು ಒಂದು ಅಚ್ಚಿನೊಳಗೆ ಸುರಿದು, ಅದುಗಟ್ಟಿಯಾದ ಮೇಲೆ ಪಡೆಯುವುದು, ಮಣ್ಣಿನ ಶಿಲ್ಪವನ್ನು ಅಚ್ಚಿನಿಂದ ಮಾಡುವರು.

Cauldron
Caldron, large kettle for boiling or heating liquids
ದ್ರವ ಪದಾರ್ಥಗಳನ್ನು ಬಿಸಿಮಾಡುವ ಮಣ್ಣಿನ ಪಾತ್ರೆ, ದೊಡ್ಡ, ಕೆಟ್ಲಬಿಸಿ, ಕಾಫಿ, ಟೀ ಅದರಲ್ಲಿ ಹಾಕಿಡುವರು. Kitchen Kettle ಎನ್ನುವರು “ಕೆಟ್ಲ” ಎಂದೇ ಕನ್ನಡದಲ್ಲಿ ಬಳಕೆಯಲ್ಲಿದೆ

Celadon
A ceramic ware glazed in a green or grey green tone
ಸೆರಾಮಿಕ್ ಪಾತ್ರೆ, ಸೆರಾಮಿಕ್ ವಸ್ತು. ಹಸಿರು ವರ್ಣ, ಬೂದು ಹಸಿರು ವರ್ಣದ ಗ್ಲೇಸ್ಡ ಪಾತ್ರೆ ಕಬ್ಬಿಣದ ಅಂಶ ಹೆಚ್ಚಿರುತ್ತದೆ.

Centering
Getting the clay exactly in the center of the wheel head when throwing
ತಿಗುರಿಯ ಹಣೆಗೆ ಹಾಕುವ ಮಣ್ಣನ್ನು ಸರಿಯಾಗಿ ಮಧ್ಯಕ್ಕೆ ಭರಿಸುವುದು.

Ceramics
Objects made by shaping and heating clay. Pottery, ceramic ware, crockery, the techniques and processes involved in making clay forms that are bought to a finished state by firing In Europe the term ceramic is applied only to clay products. ‘The history of ceramics is the history or all humanity’
ಇಂಗ್ಲೀಷಿನ ಸೆರಾಮಿಕ್ ಶಬ್ದ ಫ್ರೆಂಚ್ ಮೂಲದ್ದು(Ceramique ) ಇವೆರಡಕ್ಕೂ ಮೂಲವಾದದ್ದು ‘Keramic’ ಎಂಬುದು, ಕುಂಬಾರನು ಮಣ್ಣಿನಿಂದ ಮಾಡಿ ಸುಟ್ಟ ವಸ್ತು ‘Kermo’ ಎಂದರೆ ಗ್ರೀಕ್ ಭಾಷೆಯಲ್ಲಿ ಮಣ್ಣು ಎಂದರ್ಥ. ಆವೆ ಮಣ್ಣಿನಿಂದ ಕೈಯಿಂದಾಗಲಿ,ತಿಗುರಿಯಿಂದಾಗಲಿ, ಬೇಕಾದ ಆಕೃತಿಗಳನ್ನು ಸಿದ್ಧಗೊಳಿಸಿ ಆವಿಗೆಯಲ್ಲಿಟ್ಟು ಸುಟ್ಟ ಕುಂಭ ವಸ್ತುಗಳು ಮಡಕೆ, ಕುಡಕೆ, ಹೆಂಚು, ಇಟ್ಟಿಗೆ, ಪಿಂಗಾಣಿ, ಇತ್ಯಾದಿ, ಗಾಜು ಮತ್ತು ಸಿಮೆಂಟ್ ಕೂಡ ಸೆರಾಮಿಕ್ ಗುಂಪಿಗೆ ಸೇರುತ್ತವೆ.


logo