logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Blunge
To mix a slip
ದ್ರವರೂಪದ ಮಣ್ಣಿನ್ನು ಮಿಶ್ರ ಮಾಡುವುದು.

Blunger
A mixing machine with revolving paddles used to prepare large quantities of clay slip or glaze
ದ್ರವರೂಪದ ಮಣ್ಣನ್ನು ಮತ್ತು ಗ್ಲೇಸ್ಡ ಮಿಶ್ರಣವನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರ ಮಾಡುವ ಯಂತ್ರ.

Body
A clay or mixture of clays used to make pots
ಮಡಕೆ ತಯಾರಿಸಲು ಬದಮಾಡಿಟ್ಟ ಮಣ್ಣಿನ ಗುಪ್ಪೆ.

Boneash
A form of calcium phosphate produced by roasting ground animal bones usually ox bone. It is primarily ingredient of Bona china and is used as a flux on opaque ceramic glaze
ಮೂಳೆ ಬೂದಿ, ಎಲುಬಿನ ಬೂದಿ ಬೋನಾ ಚೈನಾಪಿಂಗಾಣಿ (ಇಂಗ್ಲೀಷ್ ಪಿಂಗಾಣಿ) ತಯಾರಿಕೆಯ ಮುಖ್ಯ ಘಟಕ, ಪಾರದರ್ಶಕ ಪಿಂಗಾಣಿ ತಯಾರಿಕೆಯಲ್ಲಿ ಸ್ರಾವಕವಾಗಿ ಉಪಯೋಗಿಸುವರು

Bone china
The English porcelain bone asha and china clays are the main ingredients and the reason for its world renowned translucency and whiteness
ಇದು ಇಂಗ್ಲಿಷ್ ಪಿಂಗಾಣಿ, ಇದರ ಮುಖ್ಯ ಘಟಕಗಳು ಎಲುಬಿನ ಪುಡಿ ಮತ್ತು ಚೀನಿ ಮಣ್ಣು ಅಚ್ಚ ಬಿಳಿ ಬಣ್ಣದ್ದಾಗಿರುತ್ತದೆ. ಪಾರದರ್ಶಕವಾಗಿದ್ದು ಹೆಚ್ಚಿನ ತಾಪಮಾನದಲ್ಲಿ ಸುಡಲ್ಪಡುತ್ತದೆ.

Bottle kiln
The typically bottle shaped intermittent up draught kiln generally fired by coal
ಸೀಸೆ ಆಕೃತಿಯ ಆವಿಗೆ, ಇದಕ್ಕೆ ಇಂಧನವಾಗಿ ಕಲ್ಲಿದ್ದಲು ಬಳಸುತ್ತಿದ್ದರು. ವಿದ್ಯುತ್ ಆವಿಗೆ ಬಂದ ನಂತರ ಇದರ ಉಪಯೋಗ ಕಡಿಮೆಯಾಗಿದೆ.

Boxing
The placing of clay ware vertically rim to rim to prevent distortion during baking
ಆವಿಗೆ ಕಟ್ಟು ಆವಿಗೆ ಇಡು, ಆವಿಗೆಯಲ್ಲಿ ಮಡಕೆಗಳನ್ನಿಟ್ಟು ಸುಡುವಾಗ ಒಂದಕ್ಕೊಂದು ಘರ್ಷಣೆಯಿಂದ ಒಡೆದು ಹೋಗದಂತೆ ಜೋಡಿಸುವ ಕ್ರಮ.

Bullers Ring
Manufactured rings made from ceramic material which are used to measure the progress of a baking in terms of heat work done
ಸೆರಾಮಿಕ್ ವಸ್ತುಗಳಿಂದ ಮಾಡಿದ ಬಳೆ, ಇದನ್ನು ಮಡಕೆಗಳನ್ನು ಆವಿಗೆಯಲ್ಲಿಟ್ಟು ಸುಡುವಾಗ ತಾಪಮಾನವನ್ನು ಅಳೆಯಲು ಉಪಯೊಗಿಸುವರು

Bung
A vertical stack of saggars containing ceramic ware for baking
ಮಡಕೆಗಳನ್ನು ಸುಡಲು ಒಂದರ ಮೇಲೊಂದು ಜೋಡಿಸಿಟ್ಟ ಮಡಕೆಗಳ ಸಾಲು.

Burnishing
The process of rubbing the surface of a clay form usually at the leather hard stage to consolidate the material and create surgace seen.
ತಟ್ಟಿ ಸಿದ್ದಗೊಳಿಸಿದ ಮಡಕೆಗಳನ್ನು ಅರೆ ಹಸಿ ಇರುವಾಗಲೆ ಅದರ ಮೈಯನ್ನು ಮಣಿಸರ, ಗಜ್ಜುಗ ಮೊದಲಾದವುಗಳಿಂದ ಉಜ್ಜಿ ನುಣುಪುಗೊಳಿಸುವುದು, ಇದರಿಂದ ಮೈಸಮತಟ್ಟವಾಗುವುದು. ಇದೊಂದು ರೀತಿಯ ಕುಂಭಾಲಂಕರಣ ವಿಧಾನ.


logo