logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Drawing
Unpacking the kiln after firing.
ಆವಿಗೆ ತಗೆ, ಸುಟ್ಟ ಮಡಕೆಗಳನ್ನು ಆವಿಗೆಯಿಂದ ತೆಗೆಯುವುದು.

Drawn trial
A small piece of ceramic often in the form of a ring, drawn from the kiln during firing to gauge, the process of the firing.
ಮಡಕೆಗಳನ್ನು ಆವಿಗೆಯಲ್ಲಿಟ್ಟು ಸುಡುತ್ತಿರುವಾಗ ಮಡಕೆಗಳು ಸುಟ್ಟಿರುವ ಬಗೆಯನ್ನು ತಿಳಿದುಕೊಳ್ಳಲು ಸೆರಾಮಿಕ್ ಬಳೆಯನ್ನು ಆವಿಗೆಯಲ್ಲಿಡುವರು ಆ ಬಳೆಯೊಂದನ್ನೆ ಕವೆಗೋಲಿನಿಂದ ಹೊರತೆಗೆದು ಸುಡತಿಯನ್ನು ತಿಳಿದುಕೊಳ್ಳುವರು.

Dry foot
To clean the bottom of glazed piece before firing.
ಗ್ಲೇಸ್ಡ ಸೆರಾಮಿಕ್ ವಸ್ತುಗಳನ್ನು ಸುಡುವ ಮೊದಲು ಅದರ ತಳವನ್ನು ಸವಚ್ಛಗೊಳಿಸುವುದು.

Dunting
The cracking of fired ware caused by two rapid cooling.
ಸುಟ್ಟ ಕುಂಭ ವಸ್ತುಗಳನ್ನು ತೀವ್ರವಾಗಿ ತಣಿಸುವದರಿಂದ ಮಡಕೆಯ ಮೈಮೇಲೆ ಉಂಟಾಗುವ ಬಿರುಕುಗಳು.

Dusting
This is one of the glazing methods of fine glaze powder on green articles which are still damp to retain powder is applied. Now it is rarely used.
ಕುಂಭ ವಸ್ತುಗಳು ಅರೆ ಹಸಿ ಇರುವಾಗಲೆ ಹೊಳಪು ಮೈ ಭರಿಸಲು ನುಣುಪಾದ ಪುಡಿಯನ್ನು ಸವರುವುದು. ಇದೊಂದು ರೀತಿಯ ಗ್ಲೇಸಿಂಗ್ ವಿಧಾನ, ಈಗ ಹೆಚ್ಚು ಬಳಕೆಯಲ್ಲಿಲ್ಲ.

Earthen ware
Any ware produced out of earth or clay, a pottery fired at a low temperature about 7000c which remains porous until glazed, this is the most common form of ware.
ಸಾಮಾನ್ಯ ತಾಪಮಾನದಲ್ಲಿ (7000-10000ಸಿ)ಸುಟ್ಟ ಮಡಕೆ, ಸಚ್ಛಿದ್ರತೆ ಹಾಗೆ ಉಳಿದಿರುತ್ತದೆ. ಇತಿಹಾಸ ಪೂರ್ವದಿಂದಲೂ ಬಳಕೆಯಲ್ಲಿರುವ ಕುಂಭ ವಸ್ತುಗಳ ಒಂದು ವಿಧ. ಬಡವರಿಂದ ಶ್ರೀಮಂತರವರೆಗೆ ವಿಶ್ವದಾದ್ಯಂತ ಉಪಯೋಗದಲ್ಲಿದೆ. ಪ್ರಪಂಚದಾದ್ಯಂತ ನಡೆದ ಉತ್ಖನನಗಳಲ್ಲಿ ಈ ಬಗೆಯ ಮಡೆಗಳು ದೊರೆತಿವೆ. ಮಡಕೆಗಳ ಗಾತ್ರ ಮತ್ತು ಉಪಯೋಗಕ್ಕನುಗುಣವಾಗಿ ಬೇರೆ, ಬೇರೆ ಹೆಸರುಗಳಿಂದ ಕರೆಯುವರು. ನೀರು ತರುವ, ಬಿಂದಿಗೆ, ಕೊಡ, ನೀರು ತುಂಬಿಡುವ ಹರವಿ, ಪಡಗ ಆಹಾರ ಬೇಯಿಸುವ ಗಡಿಗೆ, ಚಟಿಗೆ ಇತರೆ ಅಡುಗೆ ಮನೆಯ ಪಾತ್ರೆಗಳು, ಮಧ್ಯ ತುಂಬಿಡುವ ಪಾತ್ರೆ, ಧಾನ್ಯ ತುಂಬಿಡುವ ವಾಡೆ, ಧಾರ್ಮಿಕ ಆಚರಣೆಯಲ್ಲಿ ಬಳಸುವ ಮಡಕೆ, ಇತ್ಯಾದಿ, ಇವೆಲ್ಲವೂ ಕುಂಭವಸ್ತುಗಳು.

Egg shell
A name given to certain under matured glazes having appearance of hen’s egg. Also a highly translucent thin porcelain made in China and Japan for export to Europe.
ಚೀನಾ ಮತ್ತು ಜಪಾನಿನಲ್ಲಿ ತಯಾರಾಗುತ್ತಿದ್ದ ಮೊಟ್ಟೆ ಆಕೃತಿಯ ತೆಳುವಾದ ಪಾರದರ್ಶಕ ಪಿಂಗಾಣಿ. ಯುರೋಪಿಯನ್ ದೇಶಗಳಿಗೆ, ಈ ಪಿಂಗಾಣಿ ರಫ್ತಾಗುತ್ತಿತ್ತು.

Egyptian paste
A body formed of clay and glazed materials and colouring oxides in which a glaze forms on the surface after the soda content migrates-A non plastic mixture, it was first used by the Egyptians to form small models and beeds.
ಮಣ್ಣು, ಗ್ಲೇಸ್ಡ ವಸ್ತುಗಳು ಮತ್ತು ವರ್ಣ ಆಕ್ಲೈಡುಗಳಿಂದ ವರಾಡಿದ ಮೃದುತ್ವವಿಲ್ಲದ ಮಿಶ್ರಣ, ಕಣಕ ಈಜಿಪ್ಟಿಯನ್-ರು ಮೊದಲ ಬಾರಿಗೆ ಚಿಕ್ಕ ಚಿಕ್ಕ ಮಾದರಿ ಆಕೃತಿಗಳನ್ನು ಮಣ್ಣಿನ ಮಣಿ ಸರಗಳನ್ನು ಈ ಮಿಶ್ರಣದಿಂದ ತಯಾರಿಸುತ್ತಿದ್ದರು.

Element
Coiled wire that heat electric kiln.
ವಿದ್ಯುತ್ ಆವಿಗೆಯನ್ನು ಬಿಸಿಮಾಡುವ ವಿದ್ಯುತ್ ತಂತಿ ಸುರುಳಿ.

Elongate
Pot with elongated neck.
ನೀಳ ಕುತ್ತಿಗೆ, ನೀಳ ಕುತ್ತಿಗೆಯ ಹೂಜಿ.


logo