logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Clay pipe
A tobacco pipe made of clay
ತಂಬಾಕು ಸೇದುವ ಮಣ್ಣಿನ ಚಿಲುಮೆ.

Clay ware
Clay pot, vessel
ಮಣ್ಣಿನ ಗಡಿಗೆ ಪಾತ್ರೆ.

Coiling
A means of building by hand, a pot using ropes of clay laid on top or each other and smoothed together.
ಕೈಯಿಂದ ಮಡಕೆ ಮಾಡುವ ಸುರುಳಿ ವಿಧಾನ. ಮಣ್ಣಿನ್ನು ಹಗ್ಗದಂತೆ ಹೊಸೆದು ಸಿಂಬಿಗಳನ್ನಾಗಿ ಮಾಡಿ ಒಂದರ ಮೇಲೊಂದಿಟ್ಟು ಬೇಕಾದ ಆಕೃತಿಯ ಮಡಕೆಯನ್ನು ಕೈಯಿಂದ ರೂಪುಗೊಳಿಸುವುದು. ಈ ವಿಧಾನ ಬಹು ಪ್ರಾಚೀನದಿಂದಲೂ ರೂಢಿಯಲ್ಲಿದೆ.

Colloring
To make folds around the neck of a pot.
ಮಡಕೆಯನ್ನು ಅಂದಗೊಳಿಸಲು ಅದರ ಕಂಠದ ಸುತ್ತಲೂ ಪಟ್ಟಿ ಮಾಡುವದು.

Coming
Scraping into a camp surface either directly on to a clay or through a coating of slip with an even tooled tool
ಹಸಿ ಮಡಕೆಯ ಮೈಯನ್ನು ಸಮ ಹಲ್ಲುಗಳ ಬಾಚಣಿಗೆಯಿಂದ ಕೆರೆಯುವುದು, ಹಿಕ್ಕುವುದು, ಇಲ್ಲವೆ ಮಣ್ಣಿನ ದ್ರವವನ್ನು ಮೈಗೆ ಸವರಿ ಬಾಚಣಿಗೆಯಿಂದ ಮಡಕೆಯ ಮೈಯನ್ನು ಬಾಚುವುದು, ಇದೊಂದು ರೀತಿಯ ಕುಂಭಾಲಂಕರಣ.

Cone
A small conical object made from glaze materials which has known melting point used in kiln in front of the spy hole to indicate a given temperature.
ಗ್ಲೇಸ್ಡ ವಸ್ತುವಿನಿಂದ ಮಾಡಿದ ಶಂಕಾಕೃತಿಯ ಚಿಕ್ಕ ಸಾಧನ. ಆವಿಗೆಯಲ್ಲಿನ ತಾಪಮಾನ ತಿಳಿಯಲು ಆವಿಗೆಯಲ್ಲಿನ ಕಳ್ಳ ಕಿಂಡಿಯ ಮುಂದೆಗಡೆ ಇಡುವರು.

Corn bin
A oval shape pot used for storing grains.
ವಾಡೆ, ಕೊಮ್ಮೆ.

Craft
Skilled trade, occupation.
ಕಸಬು, ಕೈಕಸಬು.

Craft guild
An association of men engaged in the same task crafts man.
ಕಸಬುಗಾರ ಮಂಡಳಿ, ವೃತ್ತಿ ಕೂಟ, ಮಧ್ಯಯುಗದಲ್ಲಿ ಕುಂಬಾರರ ಮಂಡಳಿಗಳಿದ್ದವು.

Crank
A heavily grogged and open clay mixture of coarse grained texture. With stands shrinkage and thermal shock.
ಅಧಿಕ ಬೂದಿ ಮತ್ತು ಮರಳನ್ನು ಮಿಶ್ರ ಮಾಡಿದ ಮಣ್ಣು, ಮರಳಿನ ದಪ್ಪ ಕಣಗಳು ಮಡಕೆ ಉಡುಗುವದನ್ನು ತಡೆಗಟ್ಟುತ್ತದೆ, ಹೆಚ್ಚಿನ ಉಷ್ಣತೆಯನ್ನು ತಡೆದು ಕೊಳ್ಳಬಲ್ಲದು.


logo