logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Ceramist
One who makes a scientific study of clays and other ceramic materials or who pots them to practical use or study of pottery
ಕುಂಭ ತಜ್ಞ, ಕುಂಭ ವಸ್ತುಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದವ ಕುಂಭಕಲಾ ಕುಶಲಿ.

Chattering
A pattern of unseen humps on the surface of a turned pot caused by irregular objects in the clay
ಕಲ್ಲು, ಹರಳು, ಕಸಕಡ್ಡಿವುಳ್ಳ ಮಣ್ಣಿನಿಂದಾಗಿ ಚಕ್ರದಿಂದ ಗೇಯ್ದ ಮಡಕೆಗಳಲ್ಲಿ ಉಂಟಾಗುವ, ಕಣ್ಣಿಗೆ ಕಾಣದಷ್ಟು ಸೂಷ್ಮವಾದ ಓರೆ ಕೋರೆಗಳು, ಉಬ್ಬುತಗ್ಗುಗಳು.

China clay
A white primary clay of low plasticity deposited through the decomposition of granite
ಮೂಲ ಶಿಲೆಗಳಿಂದ ಉಂಟಾದ ಕಡಿಮೆ ಮಿದುಣತ್ವದ ಬಿಳಿಮಣ್ಣು ಪಿಂಗಾಣಿ ವಸ್ತುಗಳನ್ನು ತಯಾರಿಸಲು ಇದನ್ನು ಉಪಯೋಗಿಸುವರು. ನಮ್ಮ ದೇಶದ ಅನೇಕ ಭಾಗಗಳಲ್ಲಿ ಪಿಂಗಾಣಿ ಮಣ್ಣು ದೊರೆಯುತ್ತದೆ.

China ware
Porcelain articles
ಚೀನಾ ಪಿಂಗಾಣಿ

Chuck
A shaped object for holding leather hard pots while they are being turned. They can be made in a clay, wood metal or plaster.
ಇಲಕಿ ಹಸಿ ಮಡಕೆಗಳನ್ನು ಬೀಲದಂತೆ ಭದ್ರವಾಗಿ ಹಿಡಿದುಕೊಳ್ಳುವ ಸಾಧನ, ತಿಗುರಿಯಿಂದ ಗೇಯ್ದ ಮಣ್ಣಿನ ವಸ್ತುಗಳನ್ನು ಬೀಳದಂತೆ ಇಡಲು, ಮಣ್ಣು ಕಟ್ಟಿಗೆ ಲೋಹದಿಂದ ಮಾಡಿದ ಸಾಧನ ಕುಂಬಾರರು ಸಾಮಾನ್ಯವಾಗಿ, ದೊಡ್ಡದಾದ ಮುಕ್ಕಾದ ಮಡಕೆಗಳನ್ನು ಸೊಂಟಕ್ಕೆ ಸರಿಯಾಗಿ ಒಡೆದು ಬಾಯಿ ಕೆಳಗೆ ಮಾಡಿ ಇಡುವರು. ಇದನ್ನು ಇಲಕಿ ಎನ್ನುವರು ಇದರಲ್ಲಿ ಹಸಿಮಡಿಕೆ ಇಡುವರು. ಒಂದು ಸಾರೆ ತಟ್ಟಿದ ಮಡಕೆಗಳನ್ನು ಕೂಡ ಇಲಕಿಯಲ್ಲಿಡುವರು.

Clay
A type of heavy soil that becomes hard when dry, used for making clay pots and bricks “which is the more important the potter or the clay. All of us are vital to gods great master plan” (William Arthur ward)
ಜಿಗಟ್ಟು ಮಣ್ಣು ಕುಂಬಾರಿಕೆಯ ಮಣ್ಣು ಇದು ಅಲ್ಯೂಮಿನಾ ಮತ್ತು ಸಿಲಿಕೇಟ್ ಗಳನ್ನು ಒಳಗೊಂಡಿರುತ್ತದೆ.

Clay body
A general term to indicate a mixture of clays and minerals used for building pots
ಬೇರೆ ಬೇರೆ ವಿಧದ ಮಣ್ಣು ಮತ್ತು ಖನಿಜಗಳ ಮಿಶ್ರಣದಿಂದ ಒಟ್ಟುಗೂಡಿದ ಮಣ್ಣು ಮಡಕೆ ಮಾಡಲು ಬಳಸುವರು.

Claypit
Pit from which clay is dug.
ಮಣ್ಣು ಗುಂಡಿ, ಕುಂಬಾರರು ಮಡಕೆ ಮಾಡಲು ಮಣ್ಣು ತರುವ ಸ್ಥಳ.

Clay stone
A natural rock stone formed from partly decomposed granite with high content of feldspar. It is an essential ingredient of porcelain bona china.
ಸ್ವಾಭಾವಿಕ ಶಿಲೆಯಿಂದ ಉಂಟಾದ ಮಣ್ಣು ಭಾಗಶಃ ಬೋನಾಚೈನಾ ಪಿಂಗಾಣಿ ತಯಾರಿಸುವ ಮಣ್ಣಿನಲ್ಲಿ ಇದು ಮುಖ್ಯ ಘಟಕ.

Clay plate
Lid , mouth covering plate.
ಮುಚ್ಚಳ, ಮಡಕೆಯ ಬಾಯಿಗೆ ತಕ್ಕುದಾದ ಬೇರೆ ಬೇರೆ ಅಳತೆಯ ಮುಚ್ಚಳವನ್ನು ಕುಂಬಾರರು ಮಾಡುವರು ಸಾಮಾನ್ಯವಾಗಿ ಕುಂಬಾರಗಿತ್ತಯರು ಕೈಯಿಂದಲೇ ಮುಚ್ಚಳಮಾಡುವರು.


logo