logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-Kannada-Kannada)
A B C D E F G H I J K L M N O P Q R S T U V W X Y Z

Absorbency
Sucking in, drinking in, the term which describes the rate at which a body of material (clay, unfired and fired plaster, wood, stone, etc will soak up moisture)
ಹೀರುವಿಕೆ, ಹೀರಿಕೊಳ್ಳುವಗುಣ, ಸುಡದೆ ಇರುವ ಹಾಗೂ ಸುಟ್ಟ ಮಡಕೆಗಳು ನೀರನ್ನು ಹೀರಿಕೊಳ್ಳುವ ಗುಣ. ಸಾಮಾನ್ಯ ಉಷ್ಣತೆಯಲ್ಲಿ ಸುಟ್ಟ ಹಾಗೂ ಗ್ಲೇಸ್ಡ ಮಾಡದ ಮಡಕೆಗಳು ನೀರನ್ನು ಹೀರಿಕೊಳ್ಳುತ್ತವೆ. ಸುಟ್ಟ ಮಡಕೆಗಳನ್ನು ಬಳಸಿದಂತೆಲ್ಲಾ ರಂಧ್ರಗಳು ಮುಚ್ಚಲ್ಪಟ್ಟು ನೀರನ್ನು ಹೀರುವುದು ಕಡಿಮೆಯಾಗುತ್ತದೆ.

Abstract
Not concrete or ideal. The description of an art form of object, which primarily, an arrangement of basic visual elements of colour line and contour mass shape and texture
ಅಮೂರ್ತ, ಸತ್ವ ಸೂಚಿ ಶಿಲ್ಪ, ಅಮೂರ್ತ ಕಲ್ಪನೆ.

Agate ware
Decorative ceramic ware made from different coloured clays, enamel ware with an agate like pattern
ವಿವಿಧ ವರ್ಣಗಳ ಮಣ್ಣಿನಿಂದ ಸಿದ್ಧಪಡಿಸಿದ ಅಲಂಕರಣ ಕುಂಭ ವಸ್ತುಗಳು

Air bubbles
Balls of air or gas-These are pockets of air trapped in the clay
ಕುಂಬಾರಿಕೆಯ ಮಣ್ಣಿನಲ್ಲಿ ಉಳಿಯುವ ಗಾಳಿಗುಳ್ಳೆಗಳು ಮಣ್ಣಿನಲ್ಲಿ ಗಾಳಿ ಉಳಿದರೆ, ಸುಡುವಾಗ ಮಡಕೆಗಳು ಸೀಳುವ, ಒಡೆಯುವ ಸಾಧ್ಯತೆಗಳು ಹೆಚ್ಚು ಮಣ್ಣನ್ನು ಹದಗೊಳಿಸುವಾಗ ಗಾಳಿಗುಳ್ಳೆಗಳನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡಬೇಕು.

Alkali
Substance that neutralises acids. The fluxes used in certain types of glazes, soda and borax magnesia from the main part of low firing glazes. They have the effect of heightening the colour reaction to vide for example in Egyptian paste and Persion pottery
ಕ್ಷಾರ, ನೀರಿನಲ್ಲಿ ಕರಗಬಲ್ಲ ಮತ್ತು ಸುಡುವ ಗುಣಗಳ ಸ್ರಾವಕ, ಆಮ್ಲತೆಯನ್ನು ನಿವಾರಿಸುವ ಕ್ಷಾರ. ಮಡಕೆಗೆ ಹೊಳಪು ಮೈ ಭರಿಸಲು ಉಪಯೋಗಿಸುವರು. ಈಜಿಪ್ಟ ಮತ್ತು ಪರ್ಷಿಯನ್ ಕುಂಭಗಳನ್ನು ಹೆಸರಿಸಬಹುದು. ಆಲ್ಕಾಲಿ ಮಣ್ಣಿನ ಪಿ.ಎಚ್.ಮೌಲ್ಯ ಏಳಕ್ಕಿಂತ ಹೆಚ್ಚಾಗಿರುವರದು.

Alloy
A metal that is a mixture of one or more metals
ಬೆರೆಕೆಯ ಲೋಹ, ಕೀಳುಲೋಹ, ಮಿಶ್ರಲೋಹ

Alluvial
Material deposited by flood
ರೇವೆಮಣ್ಣು ಇದನ್ನು ಮಡಕೆಗಳನ್ನು ತಯಾರಿಸಲು ಬಳಸುವರು. ಬಂಗಾಳದಲ್ಲಿ ಟೆರ್ರಾಮಣ್ಣು ವಸ್ತುಗಳನ್ನು ತಯಾರಿಸಲು ಹೆಚ್ಚಾಗಿ ರೇವುಮಣ್ಣುನ್ನು ಬಳಸುವರು.

Alumina(Al2O3)
The oxide of aluminium. A major ingredient found in all clays and glazes
ಎಲ್ಲಾ ಮಣ್ಣು ಮತ್ತು ಗ್ಲೇಸ್-ನಲ್ಲಿರುವ ಒಂದು ಘಟಕ. ಕುಂಭವಸ್ತುಗಳನ್ನು ಮಾಡುವ ಮಣ್ಣಿನಲ್ಲಿ ಸುಮಾರು 39-72ರಷ್ಟು ಅಲ್ಯೂಮಿನ ಇರಬೇಕು

Amplita
A bottle usually made among the Roman either glass or earthen ware
ಪ್ರಾಚೀನ ರೋಮನ್ನರು ಗಾಜು ಇಲ್ಲವೆ ಮಣ್ಣಿನಿಂದ ಸಿದ್ದಪಡಿಸಿದ ಬಾಟಲಿ.

Amphora
Greek jar, mainly for storage with oval body and two handles reaching from mouth or neck or to the shoulder
ಧಾನ್ಯಗಳನ್ನು ಸಂಗ್ರಹಿಸಿಡಲು ಗ್ರೀಕ್ ಕುಂಬಾರರು ಮಾಡುತ್ತಿದ್ದ ಮೊಟ್ಟೆ ಆಕೃತಿಯ ವಾಡೆ, ಇದರ ತಳಚೂಪಾಗಿದ್ದು ಮಣ್ಣಿನಲ್ಲಿ ಹೂಳಲು ಅನುಕೂಲವಾಗುತ್ತಿತ್ತು. ಎತ್ತಿಡಲು, ಹಾಗೂ ಸಾಗಾಟಕ್ಕೆ ಅನುಕೂಲವಾಗುವಂತೆ ಬಾಯಿಯ ಕೆಳಬದಿಯಿಂದ ಭುಜದವರೆಗೆ ಎರಡು ದೊಡ್ಡ ಹಿಡಿಕೆಗಳನ್ನು ಅಂಟಿಸುತ್ತಿದ್ದರು. ಎಣ್ಣೆ ಮತ್ತು ಮಧ್ಯವನ್ನು ತುಂಬಿಡಲು ಕೂಡ ಎಂಪೋರವನ್ನು ಬಳಸುತ್ತಿದ್ದರು. ಸುಮಾರು25ರಿಂದ 40 ಲೀಟರ್ ದ್ರವವನ್ನುತುಂಬುವಷ್ಟು ದೊಡ್ಡದಾದ ತಳ ಚೂಪಾವಿಲ್ಲದ ಎಂಪೋರಗಳನ್ನು ಕೂಡ ಮಾಡುತ್ತಿದ್ದರು.


logo