logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಕದೊಂಕ
(ಗು)
ನೇರವಿಲ್ಲದ ; ನೆಟ್ಟಗಿಲ್ಲದ

ಅಂಕದೋರು
ಹೆಸರುವಾಸಿಯಾದವರು (ಹಾಸ. ಜಿ)

ಅಂಕಪರದೆ
ಆಟ ಪ್ರಾರಂಭವಾಗುವುದಕ್ಕಿಂದ ಮೊದಲು, ನಾಟಾಕದ ಅಂಕ ಮುಗಿದಾಗ, ಅಟ್ಟದ ಅಂಕಣವನ್ನು ಮರೆ ಮಾಡುವ ದೊಡ್ಡ ತೆರೆ; -ಮುಸುಕು ಬಟ್ಟೆ

ಅಂಕಪರದೆ ಬೀಳು
ಅಂತ್ಯಗೊಳ್ಳು; ಮುಕ್ತಾಯವಾಗು

ಅಂಕಬಿಂಕ ಹೊಡೆ
(ಕ್ರಿ)
ಬೆಡಗಿನ ಮಾತಾಡು; ಜಂಬದ ಮಾತಾಡು (ಶಿವ.ಜಿ)

ಅಂಕರ್ಕಾದ್ಗೆ
ಕಿರಿದಾದ ಕಾಲುವೆ; ಮಳೆಗಾಲದಲ್ಲಿ ಅಡಿಕೆ ಸಸಿ ಕುಣಿಯಲ್ಲಿ ನಿಂತ ನೀರು ಹರಿದು ಹೋಗಲೆಂದು ಸಸಿ ಕುಣಿಯಿಂದ ಕಾದ್ಗೆಗೆ ಮಾಡಿದ ಕಿರಿದಾದ ಕಾಲುವೆ (ಉಕ.ಜಿ)

ಅಂಕರ್ಕಾದ್ಗೆ
ಬಸಿಗಾಲುವೆ (ಮೈಸೂ.ಜಿ) ನೋಡಿ- ಕಾದ್ಗೆ

ಅಂಕರ್‍ಕಿ: ಅಂಕರಿಕೆ
ಬಾವಿಯೊಳಗೆ ಇಳಿಯಲು ಅನುಕೂಲ ವಾಗುವಂತೆ ನಿರ್ದಿಷ್ಟ ಅಂತರದಲ್ಲಿರುವ ಮೆಟ್ಟಿಲುಗಳು

ಅಂಕರ್‍ಕಿ: ಅಂಕರಿಕೆ
ಉರುಟು ಬಾವಿಯ ವೃತ್ತಾಕಾರದ ಮೆಟ್ಟಿಲು ಅಥವಾ ಅಂಕಣ (ದಕ.ಜಿ)

ಅಂಕಲು
ರಾಗಿ, ಜೋಳದ ಬೆಳೆಯನ್ನು ತೆನೆಸಹಿತ ಕೊಯ್ದು ಒಯ್ದ ನಂತರ ಹೊಲದಲ್ಲಿ ಅಲ್ಲಲ್ಲಿ ಉದುರಿ ಬಿದ್ದಿರುವ ತೆನೆಗಳು
ಅಂಕಲು ಆರಿಸೋಕ್ಕೆ ಹೊಲಕ್ಕೆ ಹೋಗಿದಾರೆ


logo